Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care

Bajaj Healthcare Launches Covid Medicine - ಈ ಕುರಿತು ಹೇಳಿಕೆ ನೀಡಿರುವ ಕಂಪನಿ DCGI ಫ್ಯಾವಿಜಾಜ್ ಹೆಸರಿನ ಜೆನೆರಿಕ್ Favipiravir ಔಷಧಿ ತಯಾರಿಸಲು ಹಾಗೂ ಅದರ ಮಾರಾಟ ಮಾಡಲು ಅನುಮತಿ ನೀಡಿದೆ ಎಂದಿದೆ. ಈ ಔಷಧಿ ಕೊವಿಡ್-19 ಸೂಕ್ಷ್ಮ ಹಾಗೂ ಮಧ್ಯಮ ಲಕ್ಷಣಗಳಿರುವ ರೋಗಿಗಳಲ್ಲಿ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಕಂಪನಿ ಹೇಳಿದೆ.

Written by - Nitin Tabib | Last Updated : May 4, 2021, 07:36 PM IST
  • ಕೊರೊನಾ ಚಿಕಿತ್ಸೆಗೆ ಮತ್ತೊಂದು ಔಷಧಿ ಬಿಡುಗಡೆ.
  • ಈ ಔಷಧಿ ಫ್ಯಾವಿಪಿರಾವಿರ್ ಔಷಧಿಯ ಜೆನೆರಿಕ್ ವರ್ಶನ್ ಮಾತ್ರೆಯಾಗಿದೆ.
  • Favijaj ಹೆಸರಿನ ಈ ಔಷಧಿಯನ್ನು ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್ ಉತ್ಪಾದಿಸಿದೆ.
Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care title=
Bajaj Healthcare Launches Favijaj (File Photo)

Bajaj Healthcare Launches Covid Medicine - ಭಾರತೀಯ ಔಷಧ ತಯಾರಕ ಕಂಪನಿಯಾಗಿರುವ ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್, ಕೊರೊನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ಔಷಧಿಯಾಗಿರುವ ಫ್ಯಾವಿಪಿರಾವಿರ್ ನ ಜೆನೆರಿಕ್ ವರ್ಶನ್ ಬಿಡುಗಡೆಗೊಳಿಸಿರುವುದಾಗಿ ಘೋಷಿಸಿದೆ. ಕಂಪನಿಯ ಈ ಔಷಧಿ Favijaj ಹೆಸರಿನ ಮಾತ್ರೆಯ ರೂಪದಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ. ಈ ಔಷಧಿ ಕೊವಿಡ್-19 ನ ಸೂಕ್ಷ್ಮ ಹಾಗೂ ಮಧ್ಯಮ ಲಕ್ಷಣಗಳಿರುವ ರೋಗಿಗಳಲ್ಲಿ ಪರಿಣಾಮಕಾರಿ ಎನ್ನಲಾಗುತ್ತಿದೆ.

ಇದನ್ನೂ ಓದಿ- Coronavirus Third Wave: ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ, ಈ ರಾಜ್ಯದಿಂದ ಆರಂಭ!

Favijaj ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಮಾಡಲು ಅನುಮತಿ ನೀಡಿದ DCGI
ಈ ಕುರಿತು BSEಗೆ ಮಾಹಿತಿ ನೀಡಿರುವ BAJAJ HEALTHCARE LIMITED, ಭಾರತೀಯ ಔಷಧ ನಿಯಂತ್ರಕ DCGI ಕಂಪನಿಗೆ Favijaj ಮಾತ್ರೆಗಳ ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಅನುಮತಿ ನೀಡಿದೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಕಂಪನಿಯ MD ಅನಿಲ್ ಜೈನ್, ಫ್ಯಾವಿಜಾಜ್ ನ ಲಭ್ಯತೆಯಿಂದ ದೇಶದಲ್ಲಿ ಕೊರೊನಾ (Covid-19) ಔಷಧಿಯ ಕೊರತೆ ದೂರಾಗಲು ನೆರವು ಸಿಗಲಿದೆ. ಜೊತೆಗೆ ರೋಗಿಗಳಿಗೆ ಚಿಕಿತ್ಸೆಗೆ ಒಂದು ಪರಿಣಾಮಕಾರಿ ಆಯ್ಕೆ ಕೂಡ ಸಿಗಲಿದೆ ಮತ್ತು ಇದರಿಂದ ಅವರ ತೊಂದರೆಗಳು ಕಡಿಮೆಯಾಗಲಿವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ- ಕೊರೋನಾ ಹೆಚ್ಚಳ ಹಿನ್ನೆಲೆ IPL 2021 ರದ್ದು ಗೊಳಿಸಿದ ಬಿಸಿಸಿಐ!

ಈ ಔಷಧಿಗಾಗಿ ಫ್ಯಾವಿಪಿರಾವಿರ್ ಫಾರ್ಮ್ಯೂಲೆಶನ್ ಹಾಗೂ ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್ಗ್ರೆಡಿಯಂಟ್ (API) ಅನ್ನು ಸ್ವತಃ ಕಂಪನಿಯೇ ತನ್ನ ಸಂಶೋಧನೆಯ ಮೂಲಕ ತಯಾರಿಸಿದೆ ಎಂದು ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್ ಹೇಳಿಕೊಂಡಿದೆ ಮತ್ತು ಇದರ ಶ್ರೇಯಸ್ಸು ಕಂಪನಿಯ R&D ವಿಭಾಗಕ್ಕೆ ಸಲ್ಲುತ್ತದೆ ಎಂದು ಕಂಪನಿ ಹೇಳಿದೆ. ಕಂಪನಿಯ ಈ ಔಷಧಿ ಬಿಡುಗಡೆಯಿಂದ BSE ಮಾರುಕಟ್ಟೆಯಲ್ಲಿ ಬಜಾಜ್ ಹೆಲ್ತ್ ಕೆಯರ್ ಷೇರುಗಳ ಬೆಲೆ ಶೇ.10.85 ರಷ್ಟು ಜಬರ್ದಸ್ತ್ ವೇಗ ಪಡೆದು ದಿನದಾಂತ್ಯದ ತನ್ನ ವಹಿವಾಟನ್ನು 583.05 ರೂ.ಗಳಿಗೆ ಸ್ಥಗಿತಗೊಳಿಸಿವೆ.

ಇದನ್ನೂ ಓದಿ- School Fees: Corona ಕಾಲದಲ್ಲಿ ಶಾಲೆಗಳು ಬಂದ್ ಇರುವಾಗ ಎಷ್ಟು ಶುಲ್ಕ ಪಾವತಿಸಬೇಕು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News