ಬೆಂಗಳೂರು : ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಭಾರತದ ಕದ ತಟ್ಟಿದೆ. ಕರ್ನಾಟಕದ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಲ್ಲಿ (ಒಬ್ಬ 3 ತಿಂಗಳ ಮತ್ತು ಇನ್ನೊಂದು 8 ತಿಂಗಳ) ಗುಜರಾತ್ ನಲ್ಲಿ ಒಂದು ಮಗುವಿನಲ್ಲಿ (2 ತಿಂಗಳ )ಈ ಸೋಂಕು ಕಾಣಿಸಿಕೊಂಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇದನ್ನು ಅನುಮೋದಿಸಿದೆ. 


COMMERCIAL BREAK
SCROLL TO CONTINUE READING

ಚಿಕಿತ್ಸೆ ಹೇಗೆ ? : 
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (hMPV) ಗೆ ಯಾವುದೇ ನಿರ್ದಿಷ್ಟ ಅನುಮೋದಿತ ಚಿಕಿತ್ಸೆ ಇಲ್ಲ. ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಔಷಧಿಗಳಿವೆ. ನೋವು ನಿವಾರಕ ಮಾತ್ರೆಗಳು, ಕೆಮ್ಮಿನ ಸಿರಪ್‌ಗಳು ಮತ್ತು ಸಾಮಾನ್ಯ ಜ್ವರಕ್ಕೆ ತೆಗೆದು ಕೊಳ್ಳುವ ಮಾತ್ರೆಗಳು ಈ ಸೋಂಕಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ತಾತ್ಕಾಲಿಕ ಇನ್ಹೇಲರ್, ಉಬ್ಬಸ ಮತ್ತು ಕೆಮ್ಮಿನ ಪರಿಣಾಮವನ್ನು ಕಡಿಮೆ ಮಾಡಬಹುದು.


ಇದನ್ನೂ ಓದಿ : ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !


ಸಲೈನ್ ಕಟ್ಟಿದ ಮೂಗಿನಿಂದ ಪರಿಹಾರ ನೀಡಬಹುದು. ಅಲ್ಲದೆ ಸಾಕಷ್ಟು ನೀರನ್ನು ಕುಡಿಯುವ ಮೂಲಕ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.ಈ ಸೋಂಕು ಕಾಣಿಸಿಕೊಂಡಾಗ ಸಾಕಷ್ಟು ವಿಶ್ರಾಂತಿ ಪಡೆಯುವುದು ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ . 


ಈ ಸೋಂಕಿನಿಂದ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕು ? :  
ಹೆಚ್ಚಿನ ಜನರು 7-10 ದಿನಗಳಲ್ಲಿ ಹ್ಯೂಮನ್  ಮೆಟಾಪ್ನ್ಯೂಮೋ ವೈರಸ್ (HMPV) ನಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಚೇತರಿಕೆಯ ಸಮಯವು ಹಲವಾರು ಅಂಶಗಳನ್ನು ಅವಲಂಬಿಸಿ ಬದಲಾಗಬಹುದು.  ಇದು ಸಾಮಾನ್ಯವಾಗಿ ಕೆಲವು ದಿನಗಳಿಂದ ಒಂದು ವಾರದವರೆಗೆ ಕಾಡಬಹುದು. ತುಂಬಾ ಅಸ್ವಸ್ಥತೆ ಕಾಡುತ್ತಿದ್ದರೆ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಒಂದು ವಾರದೊಳಗೆ ನಿಮ್ಮ ರೋಗಲಕ್ಷಣಗಳು ಸುಧಾರಿಸದಿದ್ದರೆ, ಅಥವಾ ಸ್ಥಿತಿ ಹದಗೆಡುತ್ತಿದ್ದರೆ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
HMPV ಉಸಿರಾಟದ ವೈರಸ್ ಆಗಿದ್ದು, ಇದನ್ನು ಮೊದಲು 2001 ರಲ್ಲಿ ಪತ್ತೆಯಾಗಿತ್ತು. ಸಾಮಾನ್ಯವಾಗಿ 3-6 ದಿನಗಳಲ್ಲಿ ಈ ಸೋಂಕಿನಿಂದ ಚೇತರಿಕೆ ಕಾಣಬಹುದು.ತೆಗೆದುಕೊಳ್ಳಬಹುದು.


ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ಚೀನಾ ವೈರಸ್..! ಎಚ್ಎಂಪಿ‌ವಿ ವೈರಸ್ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ...!


 HMPV ಎನ್ನುವುದು ಉಸಿರಾಟದ ಕಾಯಿಲೆಯಾಗಿದ್ದು ಅದು ವ್ಯಕ್ತಿಯಿಂದ ವ್ಯಕ್ತಿಗೆ  ಹರಡುತ್ತದೆ. ರೋಗಲಕ್ಷಣಗಳು ಕೆಮ್ಮು, ಜ್ವರ, ಕಟ್ಟಿದ ಮುಗು, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಒಳಗೊಂಡಿದೆ. 


ಸೋಂಕು ತಗಲದಂತೆ ಏನು ಮಾಡಬೇಕು ? : 
೧.ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ ತೊಳೆಯಿರಿ.
೨.ಸೀನುವಾಗ ಅಥವಾ ಕೆಮ್ಮುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ.
೩.ಸೋಂಕು ಕಾಣಿಸಿಕೊಂಡಾಗ ನಿಮ್ಮ ಸುತ್ತ ಮುತ್ತ ಜನ ಸೇರದಂತೆ ನೋಡಿಕೊಳ್ಳಿ. 
೪.ಅನಾರೋಗ್ಯದಿಂದ ಬಳಲುತ್ತಿದ್ದರೆ ಮಾಸ್ಕ್  ಧರಿಸಿ.
೫. ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಪದೇ ಪದೇ ಮುಟ್ಟುತ್ತಿರಬೇಡಿ.
೬. ಇತರರೊಂದಿಗೆ ಆಹಾರ  ಹಂಚಿಕೊಳ್ಳುವುದನ್ನು ನಿಲ್ಲಿಸಿ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.