HMPV Virus Symptoms: ಕೋವಿಡ್ 19 ಸಾಂಕ್ರಾಮಿಕದಿಂದ ಪಾರಾಗಿ ಇನ್ನೇನು ಈಗಷ್ಟೇ ನಿಟ್ಟುಸಿರು ಬಿಡುತ್ತಿರುವವವರಿಗೆ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಭಾರತದ ನೆರೆಯ ರಾಷ್ಟ್ರದಲ್ಲಿ ಈಗಾಗಲೇ ಸಾಂಕ್ರಾಮಿಕ ಸ್ವರೂಪ ಪಡೆದಿರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿರುವುದು ಎಲ್ಲರ ಆತಂಕವನ್ನು ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಮೊದಲಿಗೆ 8 ತಿಂಗಳ ಗಂಡು ಮಗುವಿನಲ್ಲಿ ಪತ್ತೆಯಾಗಿದ್ದ ಈ ವೈರಸ್ ಇದೀಗ ಮೂರು ತಿಂಗಳ ಹೆಣ್ಣು ಶಿಶುವಿನಲ್ಲೂ ಕಂಡು ಬಂದಿದೆ. ಆದಾಗ್ಯೂ, ಚೈನಾ ವೆರಿಯಂಟ್ ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇಮ್ಯೂನಿಟಿ ಕಡಿಮೆ ಇರುವವರಲ್ಲಿ ಈ ವೈರಸ್ ಕಂಡು ಬರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇದರೊಂದಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಕೂಡ ಬಿಡುಗಡೆಯಾಗಿದೆ.
ಅಷ್ಟಕ್ಕೂ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (HMPV) ಎಂದರೇನು? ಎಚ್ಎಂಪಿವಿ ರೋಗಲಕ್ಷಣಗಳೇನು, ಇದು ಹೇಗೆ ಪ್ರಸರಣಗೊಳ್ಳುತ್ತದೆ. ಎಚ್ಎಂಪಿವಿ ತಡೆಗಟ್ಟುವ ಸೂಕ್ತ ವಿಧಾನಗಳೇನು? ಎಚ್ಎಂಪಿವಿಯನ್ನು ತಡೆಗಟ್ಟುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಬೆಂಗಳೂರು ಮೂಲದ ಮೈಕ್ರೋಬಯಾಲಜಿಯ ಪ್ರೊ. ಡಾ ಗಿರಿಧರ್ ಉಪಾಧ್ಯಾಯ ಅವರು #hmpvvirus ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದಿಷ್ಟು ಸಲಹೆ ನೀಡಿದ್ದಾರೆ.
ಎಚ್ಎಂಪಿವಿ ವೈರಸ್ ಎಂದರೇನು?
ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಸಾಮಾನ್ಯ ಉಸಿರಾಟದ ವೈರಸ್ ಆಗಿದ್ದು, ಎಲ್ಲಾ ವಯೋಮಾನದವರಲ್ಲೂ ಈ ಸೋಂಕು ಹರಡಬಹುದು. ಮೊಟ್ಟ ಮೊದಲಿಗೆ 2001 ರಲ್ಲಿ ಈ ವೈರಸ್ ಅನ್ನು ಕಂಡುಹಿಡಿಯಲಾಯಿತು ಮತ್ತು ಈಗ ವಿಶ್ವದಾದ್ಯಂತ ಉಸಿರಾಟದ ಕಾಯಿಲೆಗೆ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ, ವಿಶೇಷವಾಗಿ ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವವರಲ್ಲಿ ಈ ವೈರಸ್ ಪತ್ತೆಯಾಗುತ್ತಿದೆ.
ಇದನ್ನೂ ಓದಿ- HMPV Virus Scare: 'ಭಯಪಡುವ ಅಗತ್ಯವಿಲ್ಲ' ಆದರೆ... ಎಚ್ಎಂಪಿವಿ ವೈರಸ್ ಬಗ್ಗೆ ಕರ್ನಾಟಕ ಸರ್ಕಾರದ ಮಾರ್ಗಸೂಚಿ..!
ಎಚ್ಎಂಪಿವಿ ವೈರಸ್ ರೋಗಲಕ್ಷಣಗಳು:
ಎಚ್ಎಂಪಿವಿ ಸಾಮಾನ್ಯ ರೋಗಲಕ್ಷಣಗಳು ಕೆಳಕಂಡಂತಿವೆ:-
* ಕೆಮ್ಮು
* ನೆಗಡಿ
* ಮೂಗು ಸೋರುವುದು
* ಗಂಟಲು ನೋವು
* ಜ್ವರ
ಕೆಲವು ಸಂದರ್ಭಗಳಲ್ಲಿ, HMPV ಬ್ರಾಂಕಿಯೋಲೈಟಿಸ್ (ಶ್ವಾಸಕೋಶದಲ್ಲಿನ ಸಣ್ಣ ವಾಯುಮಾರ್ಗಗಳ ಉರಿಯೂತ) ಅಥವಾ ನ್ಯುಮೋನಿಯಾದಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಎಚ್ಎಂಪಿವಿ ಪ್ರಸರಣ:
ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ HMPV ಹರಡುತ್ತದೆ. ಇದು ಕಲುಷಿತ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಮತ್ತು ನಂತರ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಸ್ಪರ್ಶಿಸುವ ಮೂಲಕ ಹರಡಬಹುದು.
ಎಚ್ಎಂಪಿವಿ ಚಿಕಿತ್ಸೆ:
ಎಚ್ಎಂಪಿವಿ ವೈರಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹೆಚ್ಚಿನ ಜನರು ವಿಶ್ರಾಂತಿ ತೆಗೆದುಕೊಳ್ಳುವುದರಿಂದ, ಶೀತ ಕೆಮ್ಮಿಗೆ ಸಾಮಾನ್ಯ ಔಷಧಿಗಳಿಂದ ಚೇತರಿಸಿಕೊಳ್ಳುತ್ತಾರೆ. ರೋಗಲಕ್ಷಣಗಳು ಗಂಭೀರ ಸ್ವರೂಪ ಪಡೆದಾಗ ಆಮ್ಲಜನಕ, ಯಾಂತ್ರಿಕ ವಾತಾಯಾನಕ್ಕಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗಬಹುದು.
ಇದನ್ನೂ ಓದಿ- ಬೆಂಗಳೂರಿನಲ್ಲಿ "ಎರಡು" ಮಕ್ಕಳಲ್ಲಿ ಮಾನವ ಮೆಟಾಪ್ನ್ಯೂಮೊವೈರಸ್ (HMPV) ಪ್ರಕರಣಗಳು ಪತ್ತೆ
ಎಚ್ಎಂಪಿವಿ ತಡೆಗಟ್ಟಲು ಸುಲಭ ವಿಧಾನ:
>> ಆಗಾಗ್ಗೆ ನಿಮ್ಮ ಕೈಗಳನ್ನು ಸಾಬೂನಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ತೊಳೆಯಿರಿ.
>> ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಿ. ಇಒಲ್ಲವೇ, ಮೊಣಕೈಯಿಂದ ಮುಚ್ಚಿಕೊಳ್ಳಿ.
>> ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ ತಪ್ಪಿಸಿ.
ಎಚ್ಎಂಪಿವಿ ಯಾರಿಗೆ ಅಪಾಯ ಹೆಚ್ಚು?
ಎಚ್ಎಂಪಿವಿ ವೈರಸ್ ನಿಂದ ಚಿಕ್ಕ ಮಕ್ಕಳು, ವಿಶೇಷವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಹಿರಿಯ ವಯಸ್ಕರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹಾಗೂ ದೀರ್ಘಕಾಲದ ಶ್ವಾಸಕೋಶ ಮತ್ತು ಹೃದಯ ಸಮಸ್ಯೆ ಇರುವವರಿಗೆ ಅಪಾಯ ಹೆಚ್ಚು.
ಎಚ್ಎಂಪಿವಿ ವೈರಸ್ ನಿಂದ ಉಂಟಾಗಬಹುದಾದ ತೊಡಕುಗಳು:
ಎಚ್ಎಂಪಿವಿ ವೈರಸ್ ಕೆಲವೊಮ್ಮೆ ಗಂಭೀರ ತೊಡಕುಗಳಿಗೂ ಕಾರಣವಾಗಬಹುದು. ಅವುಗಳೆಂದರೆ...
>> ಬ್ರಾಂಕಿಯೋಲೈಟಿಸ್
>> ನ್ಯುಮೋನಿಯಾ
>> ಆಸ್ತಮಾದ ಉಲ್ಬಣಗೊಳ್ಳುವುದು.
>> ಕಿವಿ ಸೋಂಕುಗಳು
ಯಾವಾಗ ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ:
ಸಾಮಾನ್ಯ ಶೀತ, ನೆಗಡಿ ಎಲ್ಲವೂ ಎಚ್ಎಂಪಿವಿ ವೈರಸ್ ಅಲ್ಲ. ಆದರೆ, ನೀವು ಅಥವಾ ನಿಮ್ಮ ಕುಟುಂಬದವರು ಯಾರಾದರೂ ಈ ಕೆಳಗಿನ ಸಮಸ್ಯೆಗಳನ್ನು ಅನುಭವಿಸಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ...
>> ಉಸಿರಾಟದ ತೊಂದರೆ
>> ವೇಗದ ಉಸಿರಾಟ
>> ಉಬ್ಬಸ
>> ತುಟಿಗಳು ಅಥವಾ ಬೆರಳಿನ ಉಗುರುಗಳ ಸುತ್ತಲೂ ನೀಲಿ ಅಥವಾ ಬೂದು ಬಣ್ಣದ ಛಾಯೆ
>> ಅಧಿಕ ಜ್ವರ
>> ನಿರ್ಜಲೀಕರಣದ ಚಿಹ್ನೆಗಳು
ಮೈಕ್ರೋಬಯಾಲಜಿಯ ಪ್ರೊ. ಡಾ ಗಿರಿಧರ್ ಉಪಾಧ್ಯಾಯ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.