ನವದೆಹಲಿ: Critical Health Insurance Policy - ಓಡಾಟದಿಂದ ಕೂಡಿದ ಜೀವನ ಮತ್ತು ಮಾಲಿನ್ಯದಿಂದಾಗಿ, ಅನೇಕ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ಇಂತಹ ಜನರು ಗಂಭೀರ ಕಾಯಿಲೆಗಳ ಕಾರಣ ಕೊರೊನಾ ಸೊಂಕಿಗೂ ಕೂಡ ಗುರಿಯಾಗುತ್ತಿದ್ದಾರೆ. ಇಂತಹ  ಪರಿಸ್ಥಿತಿಯಲ್ಲಿ, ಉತ್ತಮ ಆರೋಗ್ಯ ವಿಮಾ (Health Insurance) ಯೋಜನೆಯನ್ನು ಹೊಂದಿರುವುದು ಬಹಳ ಮುಖ್ಯ. ಆದರೂ ವಿಮಾ ಕಂಪನಿಗಳು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪ್ರತ್ಯೇಕ ವಿಮಾ ಪಾಲಿಸಿಯನ್ನು (Insurance)ಜಾರಿಗೊಳಿಸುತ್ತವೆ. ಈ ಪಾಲಿಸಿಯನ್ನು ಕ್ರಿಟಿಕಲ್ ಹೆಲ್ತ್ ಇನ್ಶುರೆನ್ಸ್ ಪಾಲಿಸಿ(Criticle Health Insurance Policy) ಎಂದು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಈ ಕಾಯಿಲೆಗಳನ್ನು ಕೂಡ ಕವರ್ ಮಾಡಲಾಗುತ್ತದೆ (These criticle illness are also covered)
ಈ ಪಾಲಿಸಿ ಅಡಿ  ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ, ಡಯಾಲಿಸಿಸ್, ಪಾರ್ಶ್ವವಾಯು, ಮುಖ್ಯ ಅಂಗಾಂಗ ಕಸಿ, ತೆರೆದ ಎದೆಯ ಸಿಎಬಿಜಿ, ಹೃದಯ ಕವಾಟ, ಕೋಮಾ, ಅಂಗಗಳ ಶಾಶ್ವತ ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಕೊನೆಯ ಹಂತದ ಯಕೃತ್ತಿನ ಕಾಯಿಲೆ, ಕೊನೆಯ ಹಂತದ ಶ್ವಾಸಕೋಶ ರೋಗದಂತಹ ರೋಗಗಳು ಕೂಡ ಶಾಮೀಲಾಗಿವೆ. ಕಾಯಿಲೆಗಳನ್ನು ಆಯ್ಕೆ ಮಾಡುವ ಅಧಿಕಾರ ವಿಮಾ ಕಂಪನಿಗಳ ಮೇಲೆ ಅವಲಂಭಿಸಿದೆ. ಹೀಗಾಗಿ ಒಂದೇ ಪಾಲಸಿಯಲ್ಲಿ ಎಲ್ಲ ಗಂಭೀರ ಕಾಯಿಲೆಗಳನ್ನು ಶಾಮೀಲುಗೊಳಿಸಲು ಪಾಲಸಿಯ ನಿಯಮ ಹಾಗೂ ಷರತ್ತುಗಳನ್ನು ತುಂಬಾ ಗಮನವಿಟ್ಟು ಓದಿ.


ಇದನ್ನೂ ಓದಿ- Skin care : ಈ Scrub ಬಳಸಿದರೆ ಕಲೆ ರಹಿತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು


ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ (You can avail tax benefits)
ಈ ರೀತಿಯ ಪಾಲಸಿ ಪಡೆದ ಪಾಲಸಿಧಾರಕರಿಗೆ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತದೆ. ಹೌದು ಕ್ರಿಟಿಕಲ್ ಇಲ್ನೆಸ್ ಇನ್ಸೂರೆನ್ಸ್ ಪಾಲಸಿ ಮೇಲೆ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿ 25,000 ರೂ.ಗಳ ವರೆಗೆ ಹಾಗೂ ಹಿರಿಯ ನಾಗರಿಕರಿಗೆ 50,000 ರೂ.ಗಳ ತೆರಿಗೆ ವಿನಾಯ್ತಿ ಸಿಗುತ್ತದೆ. ಕ್ರಿಟಿಕಲ್ ಇಲ್ಲ್ನೆಸ್ ಪಾಲಸಿಯ ಅಡಿ ಹೆಸರಿಸಲಾಗಿರುವ ಕಾಯಿಲೆಯ ಕುರಿತು ಮಾತ್ರ ಡಿಫೈನ್ ಮಾಡುತ್ತವೆ.


ಇದನ್ನೂ ಓದಿ- O+ve ಬ್ಲಡ್ ಗ್ರೂಪ್ ಇರುವವರಿಗೆ ಕೊರೊನಾ ಸೋಂಕು ಹಾನಿ ಮಾಡುವುದಿಲ್ಲವೇ? ತಜ್ಞರ ಅಭಿಮತ ಇಲ್ಲಿದೆ


ಕ್ಲೇಮ್ ಗಾಗಿ ಬಿಲ್ ನೀಡುವ ಆವಶ್ಯಕತೆ ಇಲ್ಲ  (No need to produce bill)
ಪಾಲಸಿಯ ಅವಧಿಯಲ್ಲಿ ಚಿಕಿತ್ಸೆಗಾಗಿ ಆಗುವ ವೆಚ್ಚವನ್ನು ಕ್ಲೇಮ್ ಮಾಡಲು ಯಾವುದೇ ರೀತಿಯ ಪಾವತಿ ನೀಡುವ ಅವಶ್ಯಕತೆ ಇಲ್ಲ. ವೈದ್ಯಕೀಯ ಪರೀಕ್ಷೆಯ ವೇಳೆ ಗಂಭೀರ ರೋಗದ ಪುಷ್ಟಿಯಾದ ಬಳಿಕ ವಿಮಾ ಕಂಪನಿಗಳು ಒಂದೇ ಕಂತಿಯಲ್ಲಿ ಹಣ ನೀಡುತ್ತವೆ. ಇದಲ್ಲದೆ ವಿಮಾ ಹಣವನ್ನು ಪಡೆಯಲು ನೀವು ಯಾವುದೇ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಕೂಡ ಇಲ್ಲ.


ಆರೋಗ್ಯದ ಕುರಿತು ಮತ್ತಷ್ಟು ಸುದ್ದಿಗಳನ್ನು ಓದಲು ಝೀ ಹಿಂದುಸ್ತಾನ್ ಕನ್ನಡ ವೆಬ್ ಸೈಟ್ ನ HEALTH ವಿಭಾಗಕ್ಕೆ ಭೇಟಿ ನೀಡಿ,


ಇದನ್ನೂ ಓದಿ-Ayurveda Tips: Ayurveda ಪ್ರಕಾರ ಈ ಪದಾರ್ಥಗಳ ಒಟ್ಟಿಗೆ ಸೇವನೆ ತ್ವಚೆಯ ಸಮಸ್ಯೆಗೆ ಕಾರಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.