SBI Life Poorna Suraksha Policy: SBIನ ಈ ವಿಶೇಷ ಪಾಲಸಿಯಲ್ಲಿ ನಿತ್ಯ 100 ಹೂಡಿಕೆ ಮಾಡಿದರೆ 2.5 ಕೋಟಿ ರೂ. ಕವರ್ ಸಿಗುತ್ತೆ

SBI Life Poorna Suraksha Policy: ಭವಿಷ್ಯದಲ್ಲಿ ಯಾವುದೇ ರೀತಿಯ ಅಹಿತಕರ ಕಾರಣದಿಂದ ನೀವು ನಿಮ್ಮ ಕುಟುಂಬವನ್ನು ಆರ್ಥಿಕ ಸಮಸ್ಯೆಯಿಂದ ರಕ್ಷಿಸಲು ಬಯಸುತ್ತಿದ್ದರೆ. ಇಂದಿನಿಂದಲೇ ಅದಕ್ಕೆ ಸಿದ್ದತೆ ನಡೆಸಿ. ಅತಿ ಕಡಿಮೆ ವಯಸ್ಸಿನಲ್ಲಿ ಜೀವ ವಿಮಾ ನಿಗಮ ಪಾಲಸಿಯನ್ನು ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ.

Written by - Nitin Tabib | Last Updated : Mar 27, 2021, 01:10 PM IST
  • ಇಂದಿನ ಕಾಲದಲ್ಲಿ, ಜೀವ ವಿಮೆ (Life Insurance) ಎಲ್ಲರ ಅವಶ್ಯಕತೆಯಾಗಿ ಮಾರ್ಪಟ್ಟಿದೆ.
  • ಇಂತಹ ಸಂದರ್ಭದಲ್ಲಿ ಸಾಕಷ್ಟು ಯೋಚಿಸಿ ಪಾಲಸಿಯನ್ನು ತೆಗೆದುಕೊಳ್ಳಬೇಕು.
  • ಚಿಕ್ಕ ವಯಸ್ಸಿನಲ್ಲಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ.
SBI Life Poorna Suraksha Policy: SBIನ ಈ ವಿಶೇಷ ಪಾಲಸಿಯಲ್ಲಿ ನಿತ್ಯ 100 ಹೂಡಿಕೆ ಮಾಡಿದರೆ 2.5 ಕೋಟಿ ರೂ. ಕವರ್ ಸಿಗುತ್ತೆ title=
SBI Life Poorna Suraksha Policy (Courtesy- Twitter)

ನವದೆಹಲಿ:  SBI Life Poorna Suraksha Policy - ಇಂದಿನ ಕಾಲದಲ್ಲಿ, ಜೀವ ವಿಮೆ (Life Insurance) ಎಲ್ಲರ ಅವಶ್ಯಕತೆಯಾಗಿ ಮಾರ್ಪಟ್ಟಿದೆ.  ಇಂತಹ ಸಂದರ್ಭದಲ್ಲಿ ಸಾಕಷ್ಟು ಯೋಚಿಸಿ ಪಾಲಸಿಯನ್ನು ತೆಗೆದುಕೊಳ್ಳಬೇಕು. . ಚಿಕ್ಕ ವಯಸ್ಸಿನಲ್ಲಿ ಜೀವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಭವಿಷ್ಯದಲ್ಲಿ ಯಾವುದೇ ಅಹಿತಕರ ಕಾರಣದಿಂದಾಗಿ ನೀವು ಮತ್ತು ನಿಮ್ಮ ಕುಟುಂಬವನ್ನು ಯಾವುದೇ ರೀತಿಯ ಆರ್ಥಿಕ ಸಮಸ್ಯೆಯಿಂದ ರಕ್ಷಿಸಲು ಬಯಸುತ್ತಿದ್ದರೆ, ಅದಕ್ಕಾಗಿ  ಇಂದಿನಿಂದಲೇ ಸಿದ್ಧತೆ ನಡೆಸಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India)  ಜಂಟಿ ಉದ್ಯಮವಾದ ಎಸ್‌ಬಿಐ ಲೈಫ್  (SBI Life)  'ಎಸ್‌ಬಿಐ ಲೈಫ್ ಪೂರ್ಣ ಸುರಕ್ಷಾ' (SBI Life Poorna Suraksha) ಎಂಬ ವಿಮಾ ಪಾಲಿಸಿಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪ್ರತಿದಿನ 100 ರೂಪಾಯಿಗಿಂತ ಕಡಿಮೆ ಹಣವನ್ನು ಪಾವತಿಸಿದರೆ ಅವರಿಗೆ 2.5 ಕೋಟಿ ರೂ. ಲೈಫ್ ಕವರ್ ಸಿಗಲಿದೆ. ಈ ಪಾಲಸಿ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

36 ಗಂಭೀರ ಕಾಯಿಲೆಗಳನ್ನು ಕವರ್ ಮಾಡಲಾಗುತ್ತದೆ
ಈ ವಿಮಾ ಯೋಜನೆ ಗಂಭೀರ ರೋಗಗಳನ್ನು ಒಳಗೊಂಡಿದೆ. ಈ ಯೋಜನೆಯಲ್ಲಿ, ಕೆಲವು ಗಂಭೀರ ಕಾಯಿಲೆಗಳಿಗೆ ಗುರಿಯಾದರೆ ಪ್ರೀಮಿಯಂನಲ್ಲಿ ರಿಯಾಯಿತಿ ಕೂಡ ಸಿಗುತ್ತದೆ. ಎಸ್‌ಬಿಐ ಲೈಫ್ ಪ್ರಕಾರ, 36 ಗಂಭೀರ ರೋಗಗಳು ಈ ಪಾಲಸಿ ವ್ಯಾಪ್ತಿಗೆ ಬರುತ್ತವೆ. ಅಷ್ಟೇ ಅಲ್ಲ ಸಂಪೂರ್ಣ ಪಾಲಿಸಿ ಅವಧಿಯಲ್ಲಿ ಪ್ರೀಮಿಯಂ ಸ್ಥಿರವಾಗಿರುತ್ತದೆ, ಅಂದರೆ ಹಣದುಬ್ಬರ ಹೆಚ್ಚಾದಂತೆ ಪ್ರೀಮಿಯಂ ಹೆಚ್ಚಿಸುವ ಬಗ್ಗೆ ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ.

ಇದನ್ನೂ ಓದಿ-SBI, HDFC, ICICI ಖಾತೆದಾರರೇ ಎಚ್ಚರ! OTPಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೇ ತಿಳಿಯಿರಿ

ಈ ಪಾಲಸಿಯ ಬಗ್ಗೆ ತಿಳಿಯಬೇಕಾದ ಕೆಲ ಅಂಶಗಳು ಇಂತಿವೆ
>> ಪ್ರವೇಶ ವರ್ಷ: ಕನಿಷ್ಠ 18 ಮತ್ತು ಗರಿಷ್ಟ 65 ವರ್ಷ.
>>ಮ್ಯಾಚುರಿಟಿ ವಯಸ್ಸು: ಕನಿಷ್ಠ 28 ಮತ್ತು ಗರಿಷ್ಟ 75 ವರ್ಷ.
>>ಬೇಸಿಕ್ ಸ್ಯಾಮ್ ಅಷ್ಯೂರ್ಡ್: ಕನಿಷ್ಠ 20 ಲಕ್ಷ ಹಾಗೂ ಗರಿಷ್ಟ 2.5 ಕೋಟಿ ರೂ.
>>ಪ್ರಿಮಿಯಂ ಮೋಡ್: ವಾರ್ಷಿಕ/ಅರ್ಧ ವಾರ್ಷಿಕ/ ತ್ರಿಮಾಸಿಕ.
>>ಮಾಸಿಕ ಪ್ರಿಮಿಯಂ ಮೋಡ್ ನಲ್ಲಿ ಮೊದಲ ಮೂರು ತಿಂಗಳ ಪ್ರಿಮಿಯಂ ಅಡ್ವಾನ್ಸ್ ಪಾವತಿಸಬೇಕು.
>>ಪಾಲಸಿ ಅವಧಿ 10, 15, 20, 25 ಹಾಗೂ 30 ವರ್ಷಗಳು.

ಇದನ್ನೂ ಓದಿ-SBI Alert : ಮೋಸದ ಜಾಲವಿದೆ ಹಣದ ಆಸೆಗೆ ಮರುಳಾಗಬೇಡಿ..!

ಉದಾಹರಣೆಯ ಮೂಲಕ ಈ ಪಾಲಸಿ ಲಾಭ ತಿಳಿಯಿರಿ
ಉದಾಹರಣೆಗಾಗಿ ಯಾವುದೇ ಓರ್ವ ಪುರುಷ ಪಾಲಸಿಧಾರಕನ ವಯಸ್ಸು 30 ವರ್ಷವಾಗಿದ್ದು ಹಾಗೂ ಆಟ SBI ಸಿಬ್ಬಂದಿಯಾಗಿಲ್ಲ ಎಂದಾದರೆ ಆತ 2.5 ಕೋಟಿ ರೂ. ಕವರ್ ಪಡೆಯಲು 10 ವರ್ಷದ ಪಾಲಸಿ ಅವಧಿಗಾಗಿ 35849 ರೂ.ವಾರ್ಷಿಕ ಪ್ರಿಮಿಯಂ ಪಾವತಿಸಬೇಕು. ಇದಕ್ಕಾಗಿ ವ್ಯಕ್ತಿ ಧೂಮಪಾನಿಯಾಗಿರಬಾರದು ಹಾಗೂ ಕೇರಳದ ರಹವಾಸಿಯಾಗಿರಬಾರದು. ಮಹಿಳಾ ಪಾಲಸಿಧಾರಕರು ನಿತ್ಯ ರೂ.100 ಕ್ಕೂ ಕಮ್ಮಿ ಪ್ರಿಮಿಯಂ ಪಾವತಿಸಬೇಕು. ಇದಕ್ಕಾಗಿ ಮಹಿಳೆಯ ವಯಸ್ಸು 30 ಆಗಿರಬೇಕು. ಇದರಲ್ಲೂ ಕೂಡ ಕವರ್ ಹಾಗೂ ಪಾಲಸಿ ಅವಧಿ ಸಮನಾಗಿದೆ. ಆದರೆ, ಮಹಿಳೆಯರು ವಾರ್ಷಿಕ ರೂ.34553  ಪ್ರಿಮಿಯಂ ಪಾವತಿಸಬೇಕಾಗಲಿದೆ.

ಇದನ್ನೂ ಓದಿ-ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News