Video : ಕಲಬೆರಕೆ ಮೈದಾ ಹಿಟ್ಟನ್ನು ಕಂಡು ಹಿಡಿಯುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ
ನೀವು ತಿನ್ನುವ ಮೈದಾ ಕಲಬೆರಕೆಯಾಗಿರಬಹುದು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು, ಮೈದಾ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂದು ವಿವರಿಸಿದೆ.
ನವದೆಹಲಿ : ಮೈದಾವನ್ನು ಅನೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಆದರೆ ನೀವು ತಿನ್ನುವ ಮೈದಾ ಕಲಬೆರಕೆಯಾಗಿರಬಹುದು ಎಂದು ನೀವು ಎಂದಾದರೂ ಗಮನಿಸಿದ್ದೀರಾ? ಈ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದು, ಮೈದಾ ಶುದ್ಧತೆಯನ್ನು ಗುರುತಿಸುವುದು ಹೇಗೆ ಎಂದು ವಿವರಿಸಿದೆ.
ಮೈದಾ ಹಿಟ್ಟಿನಲ್ಲಿ ಬೋರಿಕ್ ಆಮ್ಲದ ಮಿಶ್ರಣ
ಮೈದಾ(Maida White Flour) ನೋಡಲು ತುಂಬಾ ಸ್ವಚ್ಛವಾಗಿ ಬಿಳುಪಾಗಿ ಕಾಣುತ್ತದೆ, ಆದ್ದರಿಂದ ಅದರಲ್ಲಿ ಕೆಲವು ರೀತಿಯ ಕಲಬೆರಕೆ ಇರಬಹುದು ಎಂದು ಸಾಮಾನ್ಯವಾಗಿ ಗುರುತಿಸಲಾಗುವುದಿಲ್ಲ. FSSAI ಪ್ರಕಾರ, ಬೋರಿಕ್ ಆಸಿಡ್ ಮೈದಾದಲ್ಲಿ ಕಲಬೆರಕೆಯಾಗಿದೆ.
ಇದನ್ನೂ ಓದಿ : Sleeping Direction: ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಒಳ್ಳೆಯದು
ಮೈದಾದಲ್ಲಿ ಬೋರಿಕ್ ಆಮ್ಲ(Boric Acid)ದ ಕಲಬೆರಕೆ ನಿಮಗೆ ಅನಾರೋಗ್ಯವನ್ನುಂಟು ಮಾಡುತ್ತದೆ. ಬೋರಿಕ್ ಆಮ್ಲವನ್ನು ಸೂಕ್ಷ್ಮಜೀವಿಗಳನ್ನು ಕೊಲ್ಲಲು ನಂಜುನಿರೋಧಕ ಔಷಧವಾಗಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ.
Adulteration in maida) ತಿನ್ನುವುದರಿಂದ, ನೀವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೊಂದಬಹುದು. ಇದು ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸಬಹುದು. ಇದಲ್ಲದೇ, ಹೊಟ್ಟೆ ನೋವು, ಅಲರ್ಜಿ, ಸುಡುವಿಕೆ, ವಾಂತಿ ಮತ್ತು ಅತಿಸಾರದ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ : Mustard Oil : ಸಾಸಿವೆ ಎಣ್ಣೆ ಆರೋಗ್ಯಕಷ್ಟೆ ಅಲ್ಲ ಚರ್ಮ ಮತ್ತು ಕೂದಲಿಗೂ ತುಂಬಾ ಪ್ರಯೋಜನ : ಬಳಸುವುದು ಹೇಗೆ? ಇಲ್ಲಿದೆ
ಶುದ್ಧತೆಯನ್ನು ಗುರುತಿಸುವುದು ಹೇಗೆ?
ಮೊದಲಿಗೆ, ಒಂದು ಟ್ಯೂಬ್‌ನಲ್ಲಿ 1 ಗ್ರಾಂ ಮೈದಾ ಹಿಟ್ಟು ತೆಗೆದುಕೊಳ್ಳಿ. ಇದಕ್ಕೆ 5 ಮಿಲಿ ನೀರನ್ನು(Water) ಸೇರಿಸಿ.
ಈಗ ಟ್ಯೂಬ್‌ನಲ್ಲಿ ಹಾಕಿರುವ ಹಿಟ್ಟನ್ನು ಬೆರೆಸಿ ಮತ್ತು ಅದಕ್ಕೆ ಕೆಲವು ಹನಿ ಹೈಡ್ರೋಕ್ಲೋರಿಕ್ ಆಸಿಡ್ ಸೇರಿಸಿ.
ಇದರ ನಂತರ ಅರಿಶಿನ ಕಾಗದದ ಪಟ್ಟಿಯನ್ನು ದ್ರಾವಣದಲ್ಲಿ ಅದ್ದಿ.
ಮೈದಾದಲ್ಲಿ ಕಲಬೆರಕೆ ಇದ್ದರೆ, ಅರಿಶಿನ ಕಾಗದದ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮತ್ತೊಂದೆಡೆ, ಕಲಬೆರಕೆ ಇಲ್ಲದಿದ್ದರೆ, ಬಣ್ಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ