Sleeping Direction: ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಒಳ್ಳೆಯದು

Sleeping Direction: ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ನೀವು ಯಾವ ದಿಕ್ಕಿನಲ್ಲಿ ಮಲಗುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ತಪ್ಪಾದ  ದಿಕ್ಕಿನಲ್ಲಿ ಮಲಗುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Oct 21, 2021, 12:38 PM IST
  • ದಕ್ಷಿಣದಲ್ಲಿ ತಲೆ ಇಟ್ಟು ಮಲಗುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು
  • ಪೂರ್ವ ದಿಕ್ಕನ್ನು ಜೀವ ನೀಡುವ ದಿಕ್ಕು ಎಂದು ಪರಿಗಣಿಸಲಾಗಿದೆ
  • ಪೂರ್ವ ದಿಕ್ಕನ್ನು ಮಲಗಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ
Sleeping Direction: ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಒಳ್ಳೆಯದು title=
Sleeping Direction

Sleeping Direction: ನಾವು ಯಾವ ದಿಕ್ಕಿನಲ್ಲಿ ತಲೆ ಹಾಕಿಕೊಂಡು ಮಲಗುತ್ತೇವೆ ಎನ್ನುವುದರ ಬಗ್ಗೆ ಅನೇಕ ಸಲ ನಾವು ಗಮನ ಹರಿಸುವುದಿಲ್ಲ. ಆದರೆ, ವಾಸ್ತು ಶಾಸ್ತ್ರದ  ಪ್ರಕಾರ, ನಾವು ಮಲಗುವ ದಿಕ್ಕು ಕೂಡ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಬಹಳಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ. ನಿಮ್ಮ ಹಣಕಾಸಿನ ಸ್ಥಿತಿಯು ನೀವು ಯಾವ ದಿಕ್ಕಿನಲ್ಲಿ ತಲೆಹಾಕಿ ಮಲಗುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ ಎಂದು ನಿಮಗೆ ತಿಳಿದಿದೆಯೇ?

ತಪ್ಪಾದ  ದಿಕ್ಕಿನಲ್ಲಿ ಮಲಗುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಉಂಟಾಗಬಹುದು:
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ. ನೀವು ಸರಿಯಾದ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದರಿಂದ ಒಳ್ಳೆಯ ನಿದ್ರೆ ಬರುವುದಷ್ಟೇ ಅಲ್ಲ, ಅದು ನಿಮ್ಮನ್ನು ಆರ್ಥಿಕವಾಗಿ ಸಮೃದ್ಧಿಯನ್ನಾಗಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Tulasi Puja: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ನಿವಾರಿಸಲು ತುಳಸಿಯನ್ನು ಈ ರೀತಿ ಪೂಜಿಸಿ

ಈ ದಿಕ್ಕಿಗೆ ತಲೆ ಮಲಗುವುದು ಒಳ್ಳೆಯದು:
ದಕ್ಷಿಣದಲ್ಲಿ ತಲೆ ಇಟ್ಟು ಮಲಗುವುದು (Sleeping Direction) ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಇದರೊಂದಿಗೆ, ನೀವು ಅನೇಕ ರೀತಿಯ ಮಾನಸಿಕ ಸಮಸ್ಯೆಗಳಿಂದ ದೂರವಿರುವಿರಿ. ನಿಮ್ಮ ಪಾದಗಳನ್ನು ದಕ್ಷಿಣದ ಕಡೆಗೆ ಹಾಕಿ ಮಲಗಬಾರದು ಎಂಬುದನ್ನು ನೆನಪಿನಲ್ಲಿಡಿ. ಪಾದಗಳನ್ನು ದಕ್ಷಿಣ ದಿಕ್ಕಿಗೆ ತಿರುಗಿಸುವ ಮೂಲಕ, ಕಾಂತೀಯ ಪ್ರವಾಹವು ಪಾದಗಳನ್ನು ಪ್ರವೇಶಿಸುತ್ತದೆ ಮತ್ತು ತಲೆಯ ಮೂಲಕ ಬಿಡುತ್ತದೆ ಎಂದು ನಂಬಲಾಗಿದೆ. ಈ ಕಾರಣದಿಂದಾಗಿ ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ ಮತ್ತು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ- Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021

ಪೂರ್ವ ದಿಕ್ಕನ್ನು ಮಂಗಳಕರವಾಗಿಯೂ ಪರಿಗಣಿಸಲಾಗುತ್ತದೆ:
ದಕ್ಷಿಣದ ನಂತರ, ಪೂರ್ವ ದಿಕ್ಕನ್ನು ಮಲಗಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ನಿಮ್ಮ ತಲೆಯನ್ನು ಪೂರ್ವ ದಿಕ್ಕಿಗೆ ಇಟ್ಟುಕೊಂಡು ಮಲಗಿದರೆ, ನಿಮಗೆ ದೇವರುಗಳ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿಕ್ಕಿನಿಂದ ಸೂರ್ಯ ಉದಯಿಸುತ್ತಾನೆ, ಆದ್ದರಿಂದ ಪೂರ್ವ ದಿಕ್ಕನ್ನು ಜೀವ ನೀಡುವ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕಾಲು ಹಾಕಿ ಎಂದರೆ ಸೂರ್ಯನಿಗೆ ಪಾದ ತೋರಿಸುವಂತೆ ಎಂದಿಗೂ ಮಲಗಬೇಡಿ.

ಸೂಚನೆ; ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ದೃಢೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News