Diabetes Symptoms: ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಡಯಾಬಿಟಿಸ್ ಪರೀಕ್ಷೆ ಮಾಡಿಸಿಕೊಳ್ಳಿ!
Early Symptoms of Diabetes: ಮಧುಮೇಹವನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡದಿದ್ದರೆ ಅದು ಮಾರಣಾಂತಿಕವಾಗಬಹುದು. ಆದ್ದರಿಂದ ಕೆಲವು ರೋಗಲಕ್ಷಣಗಳ ಮೂಲಕ ನಾವು ಮಧುಮೇಹವನ್ನು ಕಂಡುಹಿಡಿಯಬಹುದು.
Diabetes Symptoms: ಇಂದಿನ ಒತ್ತಡದ ಜೀವನ ಮತ್ತು ಬಿಡುವಿಲ್ಲದ ಜೀವನಶೈಲಿಯಲ್ಲಿ, ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಮಧುಮೇಹವು ಜೀವನ ಪರ್ಯಂತ ದೀರ್ಘಕಾಲದ ಕಾಯಿಲೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಟೈಪ್ 1 ಮತ್ತು ಟೈಪ್ 2 ಎಂಬ ಎರಡು ವಿಧಗಳನ್ನು ಹೊಂದಿದೆ. ಈ ರೋಗವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಇದು ಇತರ ಅನೇಕ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಮಧುಮೇಹವನ್ನು ನಿಯಂತ್ರಿಸಲು, ಅದರ ಲಕ್ಷಣಗಳನ್ನು ಗುರುತಿಸುವುದು ಮುಖ್ಯ.
ಇದನ್ನೂ ಓದಿ: ಆರೋಗ್ಯಕರವಾಗಿ ತೂಕ ತಿಳಿಸಲು ನಿಮ್ಮ ಬೆಳಗಿನ ಉಪಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ
ಮಧುಮೇಹದ ಲಕ್ಷಣಗಳನ್ನು ಗುರುತಿಸುವುದು ಹೇಗೆ?
1.ಆಗಾಗ್ಗೆ ಹಸಿವು: ಮಧುಮೇಹ ರೋಗಿಗಳು ಮತ್ತೆ ಮತ್ತೆ ಹಸಿವನ್ನು ಅನುಭವಿಸುತ್ತಾರೆ. ನೀವು ಸಹ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ತಡಮಾಡದೆ ತಕ್ಷಣವೇ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿ.
2.ತಣಿಸಲಾಗದ ಬಾಯಾರಿಕೆ: ಪದೇ ಪದೇ ಗಂಟಲು ಒಣಗುತ್ತಿದ್ದರೆ ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಶುಗರ್ ಟೆಸ್ಟ್‌ನ್ನು ಮಾಡಿಸಬೇಕು.
3.ಆಗಾಗ್ಗೆ ಮೂತ್ರ ವಿಸರ್ಜನೆ: ನೀವು ರಾತ್ರಿಯಲ್ಲಿ ನಾಲ್ಕೈದು ಬಾರಿ ಮೂತ್ರ ವಿಸರ್ಜಿಸಲು ಎದ್ದರೆ, ಶುಗರ್ ಟೆಸ್ಟ್‌ನ್ನು ಮಾಡಿಸಬೇಕು. ಏಕೆಂದರೆ ಇದು ಮಧುಮೇಹದ ದೊಡ್ಡ ಲಕ್ಷಣವಾಗಿದೆ.
4.ತೂಕ ನಷ್ಟ: ನಿಮ್ಮ ತೂಕವು ಇದ್ದಕ್ಕಿದ್ದಂತೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ಆದ್ದರಿಂದ ಸಮಯಕ್ಕೆ ಎಚ್ಚರಿಕೆಯ ಅಗತ್ಯವಿದೆ.
5.ದಣಿವಾಗುವುದು: 10 ರಿಂದ 12 ಗಂಟೆಗಳ ಕಾಲ ದಣಿವಾಗದೆ ಕೆಲಸ ಮಾಡುತ್ತಿದ್ದ ನೀವು ಈಗ 8 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಸುಸ್ತಾಗಲು ಪ್ರಾರಂಭಿಸಿದರೆ, ನೀವು ಮಧುಮೇಹ ಪರೀಕ್ಷೆಗೆ ಒಳಗಾಗಬೇಕು.
ಮಧುಮೇಹದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
ಸಾಮಾನ್ಯವಾಗಿ ರೋಗಲಕ್ಷಣಗಳಿಗಾಗಿ ಕಾಯದೇ 30 ವರ್ಷ ದಾಟಿದ ನಂತರ ಕಾಲಕಾಲಕ್ಕೆ ಮಧುಮೇಹವನ್ನು ಪರೀಕ್ಷಿಸುವುದು ಬಹಳ ಮುಖ್ಯ. ಯಾವುದೇ ಕ್ಷಣದಲ್ಲಿ ನಿಮ್ಮಲ್ಲಿ ಮಧುಮೇಹದ ಲಕ್ಷಣಗಳು ಕಂಡುಬಂದರೆ, ನೀವು ವಿಳಂಬ ಮಾಡದೆ ಶುಗರ್ ಲೆವಲ್ ಪರೀಕ್ಷಿಸಿಕೊಳ್ಳಬೇಕು.
ಇದನ್ನೂ ಓದಿ: Hibiscus Tea: ಮಧುಮೇಹ ರೋಗಿಗಳಿಗೆ ದಾಸವಾಳದ ಟೀ! ಇಲ್ಲಿದೆ ತಯಾರಿಸುವ ವಿಧಾನ..
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.