ನವದೆಹಲಿ : ಶುದ್ಧ ತುಪ್ಪ ಆರೋಗ್ಯಕ್ಕೆ ಬಹಳ ಸಹಕಾರಿ. ಆದರೆ, ತುಪ್ಪದ (Ghee) ಹೆಸರಿನಲ್ಲಿ ನಕಲಿ ತುಪ್ಪ ಮಾರುವ ದಂಧೆ ವ್ಯಾಪಕವಾಗಿದೆ.  ಮಾರುಕಟ್ಟೆಯಲ್ಲಿ ಅಸಲಿ ತುಪ್ಪದ ಜೊತೆ ನಕಲಿ ತುಪ್ಪ ಕೂಡಾ ಭರ್ಜರಿಯಾಗಿ ಸೇಲ್ ಆಗುತ್ತಿವೆ.  ನಕಲಿ ತುಪ್ಪದಲ್ಲಿ ಶೇ. 40 ರಷ್ಟು ರಿಫೈನ್ಡ್ ಆಯಿಲ್ ಮತ್ತು ಶೇ. 60 ರಷ್ಟು ವನಸ್ಪತಿ ಇರುತ್ತದೆ.  ನಕಲಿ ತುಪ್ಪ ಪತ್ತೆ ಹಚ್ಚುವ ಕೆಲವು ಟ್ರಿಕ್ಸ್ ಇಲ್ಲಿವೆ. ಚೆಕ್ ಮಾಡಿ. 


COMMERCIAL BREAK
SCROLL TO CONTINUE READING

1. ಪಾತ್ರೆಗೆ ಒಂದು ಚಮಚ ತುಪ್ಪ (Ghee) ಹಾಕಿ ಬಿಸಿ ಮಾಡಿ. ತುಪ್ಪ ಕೂಡಲೇ ಕರಗಿ , ಕಂದು ಬಣ್ಣಕ್ಕೆ ತಿರುಗಿದರೆ ಅದು ಶುದ್ದ ದೇಶಿ ತುಪ್ಪ  (pure ghee) .  ಒಂದು ವೇಳೆ ಬಣ್ಣ ಹಳದಿಗೆ ತಿರುಗಿದರೆ ಅದು ಕಲಬೆರಕೆ.


ಇದನ್ನೂ ಓದಿ : ಎಚ್ಚರ..! ಆರೋಗ್ಯಕ್ಕಾಗಿ ಮಾಡುವ ಈ ಐದು ತಪ್ಪು ಆರೋಗ್ಯ ಕೆಡಿಸಬಹುದು..!


2.  ಕೈಗೆ  ಸ್ವಲ್ಪ ತುಪ್ಪ ಹಾಕಿಕೊಳ್ಳಿ. ಕೈ ಉಲ್ಟಾ ಮಾಡಿಅದನ್ನು ತಿಕ್ಕಿ.  ತುಪ್ಪು ಕಾಳಿನ ರೀತಿಯಲ್ಲಿ ದಪ್ಪ ದಪ್ಪ ಆದರೆ,  ನೋ ಡೌಟ್ ಅದು ನಕಲಿ. ಅಸಲಿ ತುಪ್ಪವಾಗಿದ್ದರೆ, ಕೈಗೆ ಹಾಕಿದ ತುಪ್ಪ ಕೈಗೆ ಹಾಕುತ್ತಲೇ ಅದು ಅಲ್ಲೇ ಸಮಾಹಿತವಾಗಿಬಿಡುತ್ತದೆ. ಪತ್ತೆ ಹಚ್ಚುವಅತ್ಯಂತ ಸುಲಭ ವಿಧಾನ ಇದು.


3.  ಒಂದು ಚಮಚ ತುಪ್ಪಕ್ಕೆ ನಾಲ್ಕು ಹನಿ ಅಯೋಡಿನ್ (iodine)  ಹಾಕಿ. ನೀಲಿ ಬಣ್ಣಕ್ಕೆ ತಿರುಗಿದರೆ ತುಪ್ಪದಲ್ಲಿ ಬೇಯಿಸಿದ ಅಲೂಗಡ್ಡೆ ಕಲಬೆರಕೆ ಆಗಿದೆ ಎಂದರ್ಥ. 


4. ಒಂದು ಚಮಚ ತುಪ್ಪಕ್ಕೆ ಒಂದು ಚಮಚ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಒಂದು ಚಿಟಿಕೆ ಸಕ್ಕರೆ (Sugar) ಸೇರಿಸಿ.  ತುಪ್ಪ ಕೆಂಪು ಬಣ್ಣಕ್ಕೆ ತಿರುಗಿದರೆ ಅದರಲ್ಲಿ ಡಾಲ್ಡಾ (Dalda) ಮಿಕ್ಸ್ ಆಗಿದೆ ಎಂದರ್ಥ.


ಇದನ್ನೂ ಓದಿ : ಕೂದಲ ಆರೋಗ್ಯಕ್ಕೆ ತೆಂಗಿನ ಎಣ್ಣೆ ಯಾಕೆ ಬೆಸ್ಟ್..? ಇಲ್ಲಿದೆ 7 ಕಾರಣ


5. ಅಂಗೈಗೆ ಒಂದು ಚಮಚ ತುಪ್ಪ ಹಾಕಿ ನೋಡಿ.  ಅದು ಸ್ವಯಂ ಕರಗಲು ಶುರುವಾದರೆ, ಅದು ಖಂಡಿತವಾಗಿ ಶುದ್ದ ತುಪ್ಪ.  ಆದರೆ ತುಪ್ಪ ಗಟ್ಟಿಯಾದರೆ, ಅಥವಾ ಸುಗಂಧ ಬರುವುದು ನಿಂತುಬಿಟ್ಟರೆ ಅದು ಖಂಡಿತವಾಗಿಯೂ ಕಲಬೆರಕೆ ತುಪ್ಪ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ