Bengaluru South Lok Sabha Election Results 2024: ಸತತ ಎರಡನೇ ಬಾರಿ ತೇಜಸ್ವಿ ಸೂರ್ಯಗೆ ಗೆಲುವು

Bangalore South Lok Sabha Election Results 2024: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು (ಕೆಂಗೇರಿ ಲೋಕಸಭಾ ಕ್ಷೇತ್ರ) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮ ಲೋಕಸಭೆ ಕ್ಷೇತ್ರಗಳಲ್ಲಿ ಒಂದಾಗಿದೆ.ಈ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆದ ಮತದಾನವು ಯಶಸ್ವಿಯಾಗಿದೆ.ಈ ಕ್ಷೇತ್ರದಲ್ಲಿ ಶೇ ಶೇ 53.17 ರಷ್ಟು ಮತದಾನವಾಗಿದೆ.

Written by - Manjunath N | Last Updated : Jun 4, 2024, 07:27 PM IST
  • ೧೯೮೪ರ ಚುನಾವಣೆ ತತ್ಕಾಲೀನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಕಾರಣ ನಡೆದ ಲೋಕಸಭಾ ಚುನಾವಣೆ.
  • ಈ ಚುನಾವಣೆಯಲ್ಲಿ ರಾಜೀವ ಗಾಂಧಿಯವರು ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು.
  • ಆದರೆ ಈ ಕ್ಷೇತ್ರದಲ್ಲಿ ವಿ.ಎಸ್.ಕೃಷ್ಣ ಅಯ್ಯರ್ ಜನತಾ ಪಕ್ಷದಿಂದ ಗೆದ್ದರು.
Bengaluru South Lok Sabha Election Results 2024:  ಸತತ ಎರಡನೇ ಬಾರಿ ತೇಜಸ್ವಿ ಸೂರ್ಯಗೆ ಗೆಲುವು  title=

Bangalore South Lok Sabha Election Results 2024: ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು (ಕೆಂಗೇರಿ ಲೋಕಸಭಾ ಕ್ಷೇತ್ರ) ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ೨೮ ಲೋಕಸಭೆ ಕ್ಷೇತ್ರಗಳಲ್ಲಿ ಒಂದಾಗಿದೆ.ಈ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ನಡೆದ ಮತದಾನವು ಯಶಸ್ವಿಯಾಗಿದೆ.ಈ ಕ್ಷೇತ್ರದಲ್ಲಿ ಶೇ ಶೇ 53.17 ರಷ್ಟು ಮತದಾನವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸೌಮ್ಯಾ ರೆಡ್ಡಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರೆ, ಇನ್ನೊಂದೆಡೆಗೆ ತೇಜಸ್ವಿ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶದ ಕನಸು ಕಾಣುತ್ತಿದ್ದಾರೆ.1998 ರಿಂದ ಸತತ ಆರು ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿ ಪಾರಮ್ಯ ಮೆರೆದಿದೆ, ಈಗ ಕಾಂಗ್ರೆಸ್ ಪಕ್ಷವು ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕೆ ಇಳಿಸುವುದರ ಮೂಲಕ ಮೊದಲ ಬಾರಿಗೆ ಬಿಜೆಪಿ ಭದ್ರಕೋಟೆಯನ್ನು ಭೇದಿಸುವ ವಿಶ್ವಾಸದಲ್ಲಿದೆ.

ಪ್ರಸ್ತುತ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ೮ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ:

ಮೈಸೂರು ರಾಜ್ಯ

ಬೆಂಗಳೂರು ದಕ್ಷಿಣ:

೧೯೫೨: ಟಿ.ಮಾದಯ್ಯ ಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಬೆಂಗಳೂರು:

೧೯೫೭: ಎಚ್.ಸಿ.ದಾಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಬೆಂಗಳೂರು:

೧೯೬೨: ಎಚ್.ಸಿ.ದಾಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಬೆಂಗಳೂರು:

೧೯೬೭: ಕೆಂಗಲ್ ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
೧೯೭೧: ಕೆಂಗಲ್ ಹನುಮಂತಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಬೆಂಗಳೂರು ದಕ್ಷಿಣ ಕ್ಷೇತ್ರ

ವರ್ಷ    ಸದಸ್ಯ    ಪಾರ್ಟಿ    ಪಡೆದ ಮತಗಳು
೧೯೭೭    ಕೆ.ಎಸ್ ಹೆಗ್ಡೆ    ಜನತಾ ಪಕ್ಷ    ೨,೨೧,೯೭೪
೧೯೮೦    ಟಿ.ಆರ್ ಶಾಮಣ್ಣ    ಜನತಾ ಪಕ್ಷ    ೧,೯೮,೩೯೦
೧೯೮೪    ವಿ.ಎಸ್.ಕೃಷ್ಣ ಅಯ್ಯರ್    ಜನತಾ ಪಕ್ಷ    ೨,೬೪,೭೬೫
೧೯೮೯    ಆರ್. ಗುಂಡು ರಾವ್    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್    ೪,೧೩,೫೭೪
೧೯೯೧    ಕೆ. ವೆಂಕಟಗಿರಿ ಗೌಡ    ಭಾರತೀಯ ಜನತಾ ಪಕ್ಷ    ೨,೭೫,೦೮೩
೧೯೯೬    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೨,೫೧,೨೩೫
೧೯೯೮    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೪,೨೯,೬೪೮
೧೯೯೯    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೪,೧೦,೧೬೧
೨೦೦೪    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೩,೮೬,೬೮೨
೨೦೦೯    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೪,೩೭,೯೫೩
೨೦೧೪    ಅನಂತ್ ಕುಮಾರ್    ಭಾರತೀಯ ಜನತಾ ಪಕ್ಷ    ೬,೩೩,೮೧೬
೨೦೧೯    ತೇಜಸ್ವಿ ಸೂರ್ಯ    ಭಾರತೀಯ ಜನತಾ ಪಕ್ಷ    ೭,೩೯,೨೨೯

ಚುನಾವಣಾ ಇತಿಹಾಸ
೧೯೭೭ರಲ್ಲಿ ಕ್ಞೇತ್ರ ವಿಂಗಡನೆಯ ನಂತರ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೂ ನಡೆದ ೧೨ ಚುನಾವಣೆಗಳಲ್ಲಿ ೩ ಬಾರಿ ಜನತಾ ಪಕ್ಷ, ಒಮ್ಮೆ ಕಾಂಗ್ರೆಸ್ ಮತ್ತು ೮ ಬಾರಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಭಾರತೀಯ ಜನತಾ ಪಕ್ಷದ ನಾಯಕರಾಗಿದ್ದ ಅನಂತ್ ಕುಮಾರ್, ೬ ಬಾರಿ ಸತತವಾಗಿ ಇಲ್ಲಿಂದ ಸಂಸದರಾಗಿ ಚುನಾಯಿತರಾಗಿದ್ದರು.

೧೯೭೭ರ ಚುನಾವಣೆಯಲ್ಲಿ, ಕೆ.ಎಸ್ ಹೆಗ್ಡೆಯವರು (ನಿಟ್ಟೆ ಸಂತೋಷ್‌ ಹೆಗ್ಡೆಯವರ ತಂದೆ) ಜನತಾ ಪಕ್ಷದ ಉಮೇದುವಾರರಾಗಿ ಮೈಸೂರಿನ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸೌಧದ ನಿರ್ಮಾತೃವಾದ ಕೆಂಗಲ್ ಹನುಮಂತಯ್ಯನವರ ವಿರುದ್ಧ ಗೆದ್ದರು.ಅವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ರಾಜೀನಾಮೆ ನೀಡಿದ್ದರು. ೭೦ರ ದಶಕದ ಮಧ್ಯಭಾಗದಲ್ಲಿ ತತ್ಕಾಲೀನ ಕೇಂದ್ರ ಸರ್ಕಾರ, ಅವರು ಮತ್ತು ಇನ್ನು ಇಬ್ಬರು ಹಿರಿಯ ನ್ಯಾಯಾಧೀಸರನ್ನು ಕಡೆಗಣಿಸಿ ಇವರೆಲ್ಲರಿಗಿಂತ ಕಿರಿಯರನ್ನು ಮುಖ್ಯನಾಯಾಧೀಶರನ್ನಾಗಿ ನೇಮಿಸಿದಾಗ, ಸ್ವಾಭಿಮಾನಿ ಹೆಗ್ಡೆಯವರು ರಾಜೀನಾಮೆ ನೀಡಿದ್ದರು.ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹಾಸನ ಹೊರತುಪಡಿಸಿ ಜನತಾ ಪಕ್ಷ ಗೆದ್ದಂತಹ ಒಂದೇ ಒಂದು ಕ್ಷೇತ್ರ ಇದು. ನಂತರ ಅವರು ಲೋಕಸಭೆಯ ಮೊದಲ ಕಾಂಗ್ರೆಸೇತರ ಸಭಾಪತಿ (ಸ್ಪೀಕರ್)ರಾಗಿ ತಮ್ಮ ಶಿಸ್ತುಬದ್ಧ, ನ್ಯಾಯಯುತ ನಡುವಳಿಕೆಯಿಂದಾಗಿ ಖ್ಯಾತರಾದರು.

೧೯೮೦ರ ಚುನಾವಣೆಯಲ್ಲಿ ಟಿ.ಆರ್ ಶಾಮಣ್ಣ ಜನತಾ ಪಕ್ಷದಿಂದ ಗೆದ್ದರು. ಈ ಚುನಾವಣೆಯಲ್ಲಿ ಕಾಂಗ್ರಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು.

೧೯೮೪ರ ಚುನಾವಣೆ ತತ್ಕಾಲೀನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ಕಾರಣ ನಡೆದ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ರಾಜೀವ ಗಾಂಧಿಯವರು ದೇಶದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಈ ಕ್ಷೇತ್ರದಲ್ಲಿ ವಿ.ಎಸ್.ಕೃಷ್ಣ ಅಯ್ಯರ್ ಜನತಾ ಪಕ್ಷದಿಂದ ಗೆದ್ದರು.

೧೯೮೯ರ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರಸ್ ಸೋತರೂ ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಗುಂಡು ರಾಯರು ಗೆದ್ದರು. ಇದೊಂದೇ ಸಲ ಕಾಂಗ್ರಸ್ ಈ ಕ್ಷೇತ್ರದಲ್ಲಿ ಗೆದ್ದಿರುವುದು.

೧೯೯೧ರ ಚುನಾವಣೆಯಲ್ಲಿ ಗುಂಡು ರಾಯರನ್ನು ಖ್ಯಾತ ಅರ್ಥಶಾಸ್ತ್ರಜ್ಞ ಕೆ. ವೆಂಕಟಗಿರಿ ಗೌಡರು ಸೋಲಿಸಿ ಭಾರತೀಯ ಜನತಾ ಪಕ್ಷಕ್ಕೆ ಮೊದಲ ಬಾರಿ ಜಯ ಗಳಿಸಿಕೊಟ್ಟರು.

೧೯೯೬ ರಿಂದ ೨೦೧೪ರವರೆಗೆ, ಭಾರತೀಯ ಜನತಾ ಪಕ್ಷದಲ್ಲಿ ತಳಮಟ್ಟದಿಂದ ಬೆಳೆದು ಬಂದ ಅನಂತ್ ಕುಮಾರ್, ಸತತ ೬ ಬಾರಿ ಈ ಕ್ಷೇತ್ರವನ್ನು ಗೆದ್ದಿದ್ದರು. ಇಲ್ಲಿಯವರೆಗೆ ಈ ಕ್ಷೇತ್ರವನ್ನು ಗೆದ್ದವರು ಆನುಭವಿಗಳಾಗಿದ್ದು. ಹಿರಿಯ ರಾಜಕಾರಣಿಗಳು, ಖ್ಯಾತ ನ್ಯಾಯಾಧೀಶರು, ಅರ್ಥಶಾಸ್ತ್ರಜ್ಞರು ಆಗಿದ್ದರು. ಈ ನಡುವೆ ವಾಜಪೇಯಿ ಸರ್ಕಾರಗಳಲ್ಲಿ ಮತ್ತು ಮೋದಿ ಸರ್ಕಾರದಲ್ಲಿಯೂ ಮಂತ್ರಿಆದರು. ವಿಶೇಷವೆಂದರೆ ಅವರ ವಿರುದ್ದ ಆರು ಬಾರಿ ಬೇರೆ ಬೇರೆ ಕಾಂಗ್ರೆಸ್ ಉಮೇದುವಾರರು ನಿಂತು ಸೋತರು.

೨೦೧೯ರಲ್ಲಿ ೨೮ ವರ್ಷದ ತೇಜಸ್ವಿ ಸೂರ್ಯ ಮೊದಲ ಬಾರಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ೩,೩೧,೧೯೨ ಮತಗಳ ಅಂತರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಬಿ.ಕೆ. ಹರಿಪ್ರಸಾದ್ ವಿರುದ್ಧ ಗೆಲುವನ್ನು ಸಾಧಿಸಿದ್ದರು
ಈ ಬಾರಿಯು ಸಹ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ತೇಜಸ್ವಿ ಸೂರ್ಯ  ಕಾಂಗ್ರೆಸ್ ನ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News