Corona, Sub Variant : JN.1 ಭಾರತ, ಚೀನಾ, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದೆ. ಆದರೆ ಪ್ರಸ್ತುತ ಇದರಿಂದ ಸಾರ್ವಜನಿಕರಿಗೆ ಅಪಾಯವು ಕಡಿಮೆಯಾಗಿದೆ ಎಂದು WHO ಹೇಳುತ್ತದೆ. ಈಗಿರುವ ಲಸಿಕೆಗಳು ಕೂಡ ರೂಪಾಂತರ ತಳಿಗಳಿಂದ  ರಕ್ಷಣೆ ನೀಡುತ್ತಿವೆ ಅಂದು ಸಹ ಹೇಳಿದ್ದಾರೆ. ಆದರೆ ಈ ಚಳಿಗಾಲದಲ್ಲಿ ಕೋವಿಡ್ ಮತ್ತು ಇತರ ಸೋಂಕುಗಳು ಹೆಚ್ಚಾಗಬಹುದು ಎಂದು ಸಂಸ್ಥೆ ಎಚ್ಚರಿಸಿದೆ.


COMMERCIAL BREAK
SCROLL TO CONTINUE READING

ಉಸಿರಾಟದ ವೈರಸ್‌ಗಳಾದ ಫ್ಲೂ, ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (RSV) ಮತ್ತು ಬಾಲ್ಯದ ನ್ಯುಮೋನಿಯಾ ಕೂಡ  ಹೆಚ್ಚಾಗುತ್ತಿರುವುದು ವರದಿಯಲ್ಲಿ ಕೇಳಿ ಬರುತಿದೆ.


ಇದನ್ನೂ ಓದಿ: Corona ಅಷ್ಟೇ ಅಲ್ಲ ಇದೀಗ ಈ ಮಾರಣಾಂತಿಕ ವೈರಸ್ ಕೂಡ ಡಬ್ಲ್ಯೂಹೆಚ್ಓ ಚಿಂತೆ ಹೆಚ್ಚಿಸಿದೆ! ಇಲ್ಲಿವೆ ಅದರ ಲಕ್ಷಣಗಳು


ಕೋವಿಡ್‌ಗೆ ಕಾರಣವಾಗುವ ವೈರಸ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಈ ಕಾರಣದಿಂದಾಗಿ, ಕೆಲವೊಮ್ಮೆ ಹೊಸ ರೂಪಾಂತರಗಳು ಅಭಿವೃದ್ಧಿಗೊಳ್ಳುತ್ತವೆ. ಓಮಿಕ್ರಾನ್‌ ಅಂತರಾಷ್ಟ್ರೀಯವಾಗಿ ಸ್ವಲ್ಪ ಸಮಯದವರೆಗೆ ಪ್ರಬಲವಾದ ರೂಪಾಂತರವಾಗಿ ಎಲ್ಲರನ್ನು ಕಾಡಿತ್ತು. ಆದರೆ ಈಗ ಮತ್ತೊಂದು ರೂಪಾಂತರ ತಳಿ JN.1 ಕೂಡ ಕಾಡಲಾರಂಭಿಸಿದೆ.


ಜೆಎನ್.1 ಪ್ರಕರಣಗಳು ಎಲ್ಲಿ ಕಂಡುಬಂದಿವೆ?


ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಸ್ತುತ ಓಮಿಕ್ರಾನ್‌ಗೆ ಲಿಂಕ್ ಮಾಡಲಾದ ವೈರಸ್‌ನ ಹಲವಾರು ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ - JN-1 ಕೂಡ ಸೇರಿದು, ಪ್ರಪಂಚದ ಹಲವು ಮೂಲೆಗಳಲ್ಲಿ ವೇಗವಾಗಿ ಹರಡುತ್ತಿದೆ.


ಇದನ್ನೂ ಓದಿ:  ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆರ್ಭಟ


ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಇದು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ರೂಪಾಂತರವಾಗಿದೆ, ಇದು 15-29 ಪ್ರತಿಶತ ಸೋಂಕುಗಳಿಗೆ ಕಾರಣವಾಗಿದೆ.


ಚಳಿಗಾಲದಲ್ಲಿ ಪ್ರಕರಣಗಳು ಹೆಚ್ಚಾಗುತ್ತವೆ


ಜೆಎನ್.1 ಎಲ್ಲಾ ಪ್ರದೇಶಗಳಲ್ಲಿ ವೇಗವಾಗಿ ಹರಡುತ್ತಿದ್ದು, BA-2-86 ರೂಪಾಂತರಕ್ಕೆ ಹೋಲಿಸಿದರೆ ಸ್ಪೈಕ್ ಪ್ರೊಟೀನ್‌ನಲ್ಲಿ ಹೆಚ್ಚುವರಿ ರೂಪಾಂತರವನ್ನು ಹೊಂದಿರುವ ಕಾರಣ ಇದು ಹೊಂದಿದೆ.


ಇದನ್ನೂ ಓದಿ:  ಕಾಡುತ್ತಿದೆ ಕರೋನಾ JN.1 ರೂಪಾಂತರ ಆತಂಕ ! ತಜ್ಞರ ಪ್ರಕಾರ ಯಾರು ಕಡ್ಡಾಯವಾಗಿ ಧರಿಸಲೇ ಬೇಕು ಮಾಸ್ಕ್ !


WHO ತನ್ನ ಅಪಾಯದ ಮೌಲ್ಯಮಾಪನದಲ್ಲಿ, "ಈ ರೂಪಾಂತರವು ಇತರ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಸೋಂಕಿನ ಮಧ್ಯೆ ಸಾರ್ಸ್-ಕೋವ್-2 (ಕರೋನಾ ವೈರಸ್) ಪ್ರಕರಣಗಳಲ್ಲಿ ಉಲ್ಬಣಗೊಳ್ಳಲು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ, ವಿಶೇಷವಾಗಿ ಚಳಿಗಾಲವು ಸಂಭವಿಸುವ ದೇಶಗಳಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತಿದೆ."


ಕರೋನಾ ಲಸಿಕೆಗಳು ಒದಗಿಸಿದ ರೋಗನಿರೋಧಕ ಶಕ್ತಿಯನ್ನು ಪೂರ್ಣಗೊಳಿಸುವಲ್ಲಿ ಕರೋನಾದ ಈ ರೂಪಾಂತರವು (ಜೆಎನ್.1) ಎಷ್ಟು ಸಮರ್ಥವಾಗಿದೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಪುರಾವೆಗಳಿಲ್ಲ ಎಂದು WHO ತಿಳಿಸಿದೆ.


ಹಿಂದಿನ ರೂಪಾಂತರಕ್ಕೆ ಹೋಲಿಸಿದರೆ ಈ ರೂಪಾಂತರದಿಂದ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆಯೇ ಎಂಬ ಬಗ್ಗೆ ಯಾವುದೇ ವರದಿ ಇಲ್ಲ.


ಇದನ್ನೂ ಓದಿ:  Covid-19: ತಲ್ಲಣ ಸೃಷ್ಟಿಸಿದ ಕೋವಿಡ್ ಜೆಎನ್.1 ರೂಪಾಂತರ- ಅಗತ್ಯವಿದೆಯೇ ಬೂಸ್ಟರ್ ಡೋಸ್!


ಆದರೆ ಆರೋಗ್ಯದ ಪರಿಣಾಮವನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ ಎಂದು WHO ಹೇಳುತ್ತದೆ, ಏಕೆಂದರೆ ಆಸ್ಪತ್ರೆಗೆ ದಾಖಲಾದ ಡೇಟಾವನ್ನು ಒದಗಿಸುವ ದೇಶಗಳ ಸಂಖ್ಯೆ ಕಡಿಮೆಯಾಗಿದೆ.


ಕರೋನಾದಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು


ಸೋಂಕು ಮತ್ತು ಗಂಭೀರ ಕಾಯಿಲೆಯನ್ನು ತಡೆಗಟ್ಟಲು WHO ಸಲಹೆಗಳನ್ನು ನೀಡಿವೆ.


* ಕಿಕ್ಕಿರಿದ ಮತ್ತು ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಧರಿಸಿ


* ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮುಚ್ಚಿಕೊಳ್ಳಿ


* ನಿಯಮಿತವಾಗಿ ಹಾಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಿ


* ಕೋವಿಡ್ ಮತ್ತು ಫ್ಲೂ ಲಸಿಕೆಗಳ ಬಗ್ಗೆ ನವೀಕೃತವಾಗಿರಿ, ವಿಶೇಷವಾಗಿ ನೀವು ದುರ್ಬಲರಾಗಿದ್ದರೆ
ಅನಾರೋಗ್ಯವಿದ್ದರೆ ಮನೆಯಲ್ಲೇ ಇರಿ


* ನಿಮ್ಮಲ್ಲಿ ರೋಗಲಕ್ಷಣಗಳು ಕಂಡು ಬಂದದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.