ಬೆಂಗಳೂರು : ಮೊಬೈಲ್ ಇಂದಿನ ಕಾಲದ ಪ್ರಮುಖ ಗ್ಯಾಜೆಟ್ ಆಗಿದೆ. ಈ ಮೊಬೈಲ್ ನಮ್ಮ ಜೀವನದ ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಕೂಡಾ ಬಹಳ ಸರಳೀಕರಿಸುತ್ತದೆ. ಆದರೆ, ಈ ಮೊಬೈಲ್ ಮಕ್ಕಳಿಗೆ ಮಾತ್ರ ಅಪಾಯಕಾರಿ. ಒಂದರ್ಥದಲ್ಲಿ ಮಕ್ಕಳ ಬಾಲ್ಯವನ್ನೇ ಕಸಿದುಕೊಳ್ಳುತ್ತಿದೆ. ಮೊಬೈಲ್ ನಿಂದಾಗಿ ಮಕ್ಕಳು ದೈಹಿಕ ಚಟುವಟಿಕೆಯನ್ನೇ ಮರೆತು ಮೊಬೈಲ್ ನಲ್ಲಿಯೇ ಮುಳುಗಿ ಬಿಡುತ್ತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕು ಎಂದು ವೈದ್ಯರು ಹಾಗೂ ಮನಶ್ಶಾಸ್ತ್ರಜ್ಞರು ಸೂಚಿಸುತ್ತಾರೆ. 


COMMERCIAL BREAK
SCROLL TO CONTINUE READING

ಮೊದಲು ಹೆತ್ತವರು ಟೈಮ್ ಪಾಸ್ ಗಾಗಿ ಮಕ್ಕಳಿಗೆ ಮೊಬೈಲ್ ಕೊಡುತ್ತಾರೆ. ನಂತರ ಮಕ್ಕಳಿಗೆ ಇದುವೇ ಅಭ್ಯಾಸವಾಗಿ ಬಿಡುತ್ತದೆ. ಬರ ಬರುತ್ತಾ ಇದೇ ಅಭ್ಯಾಸ ಚಟವಾಗಿ ಬದಲಾಗುತ್ತದೆ. ಪೋಷಕರಿಗೆ ಸಮಸ್ಯೆಯಾಗಿ ಕಾಡುತ್ತದೆ. ಇದು ಮಕ್ಕಳ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಮಗು ಕೂಡಾ ಮೊಬೈಲ್ ಚಟಕ್ಕೆ ಬಿದ್ದಿದ್ದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸುವ ಮೂಲಕ ಮಗುವನ್ನು ಈ ಅಭ್ಯಾಸದಿಂದ ಹೊರ ತನ್ನಿ .. 


ಇದನ್ನೂ ಓದಿ : Women Health : 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಈ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ


ಮೊದಲು ಹೆತ್ತವರು ತಮ್ಮನ್ನು ನಿಯಂತ್ರಿಸಿಕೊಳ್ಳಬೇಕು :  
ಮಕ್ಕಳು ತಮ್ಮ ಹೆತ್ತವರನ್ನು ಅನುಕರಿಸಿಕೊಂಡೇ ಬೆಳೆಯುತ್ತಾರೆ. ಮಕ್ಕಳ ಮುಂದೆ ನೀವು ಏನು ಮಾಡುತ್ತೀರಿ ಎನ್ನುವುದು ಕೂಡಾ ಅವರ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಹೆತ್ತವರು ಮಕ್ಕಳ ಮುಂದೆ ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. 


ಗದರಿಸುವ ಮೂಲಕ ಒತ್ತಡ ಹೇರಬೇಡಿ :
ಮೊಬೈಲ್ ಬಗ್ಗೆ ಮಕ್ಕಳ ಮೇಲೆ ದಿಢೀರ್ ಒತ್ತಡ ಹೇರುವುದು ಸರಿಯಲ್ಲ.  ಅದಕ್ಕಾಗಿಯೇ ಅವರಿಗೆ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಪ್ರೀತಿಯಿಂದ ವಿವರಿಸಿ ಹೇಳಿ. ಮಕ್ಕಳು ಫೋನ್ ಬಳಸುತ್ತಿದ್ದರೆ ಅವರ ಮೇಲೆ ಕೋಪ ಮಾಡಿಕೊಳ್ಳಬೇಡಿ. ಬದಲಾಗಿ ಪ್ರೀತಿಯಿಂದ ಅದರ ದುಷ್ಪರಿಣಾಮಗಳನ್ನು ವಿವರಿಸಿ ಅರಿವು ಮೂಡಿಸಬೇಕು. 


ಫೋನ್ ನಿಂದಾಗುವ ನಷ್ಟದ ಬಗ್ಗೆ ಮಾಹಿತಿ ನೀಡಿ :
ಮಕ್ಕಳಿಗೆ ಮೊಬೈಲ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೇಳಲೇಬೇಕು. ಫೋನ್‌ನ ಅತಿಯಾದ ಬಳಕೆ ಕಣ್ಣಿನಿಂದ ಚರ್ಮದವರೆಗೂ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅವರಿಗೆ ತಿಳಿಸಬೇಕು. 


ಇದನ್ನೂ ಓದಿ : ಈ ಸಮಸ್ಯೆಗಳಿದ್ದಲ್ಲಿ ಅರಿಶಿನದ ಹಾಲು ಕುಡಿಯಬೇಡಿ, ಲಾಭಕ್ಕಿಂತ ಹಾನಿಯೇ ಹೆಚ್ಚು!


ಮಕ್ಕಳಿಗೆ ಫೋನ್ ಕೊಡಬೇಡಿ  : 
ಇಂದಿನ ಯುಗದಲ್ಲಿ, ಮಕ್ಕಳು ಅಳುವುದನ್ನು ನೋಡಿ, ಪೋಷಕರು ಅವರನ್ನು ಸುಮ್ಮನಾಗಿಸಲು ಥಟ್ ಅಂತ ಫೋನ್ ಕೊಟ್ಟು ಬಿಡುತ್ತಾರೆ.  ವಾಸ್ತವದಲ್ಲಿ ಇದು ಅವರ ಅಭ್ಯಾಸವನ್ನು ಹೆಚ್ಚು ಹಾಳು ಮಾಡುತ್ತದೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ಕೊಡಬೇಡಿ.


ಮಕ್ಕಳನ್ನು ಬೇರೆ ಕೆಲಸಗಳಲ್ಲಿ ನಿರತರಾಗಿರುವಂತೆ ಮಾಡಿ : 
ಫೋನ್ ಬಿಟ್ಟರೆ ಬೇರೆ ಕೆಲಸಗಳಲ್ಲಿ ಮಕ್ಕಳು ಬ್ಯುಸಿಯಾಗಿರುವಂತೆ  ಮಾಡಿ. ಅವರು ತಮ್ಮ ನೆಚ್ಚಿನ ಚಟುವಟಿಕೆಯನ್ನು ಮಾಡಲು ಅವಕಾಶ ಮಾಡಿಕೊಡಿ. ಹೆಚ್ಚು ಹೆಚ್ಚು ಸೃಜನಾತ್ಮಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ನಿರತರಾಗಿರುವಂತೆ ಮಾಡಿ. ಹೀಗೆ ಮಾಡಿದರೆ ಅವರ ಮನಸ್ಸು ಕೂಡಾ ಫೋನ್ ನಿಂದ ಬೇರೆ ಹರಿಯುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.