ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿರುವ ಗರ್ಭಕಂಠದ ಕ್ಯಾನ್ಸರ್‌ (ಸರ್ವಿಕಲ್‌ ಕ್ಯಾನ್ಸರ್‌) ಜಾಗತಿಕವಾಗಿಯೂ ನಿಭಾಯಿಸಲು ದೀರ್ಘಕಾಲದ ಹೆಣಗಾಟ ನಡೆಯುತ್ತಿದೆ. ಪ್ರತೀ ವರ್ಷ ಈ ಕಾಯಿಲೆಯಿಂದ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹ್ಯೂನ್‌ ಪಾಪಿಲ್ಲೋಮಾ ವೈರಸ್‌ (ಎಚ್‌ಪಿವಿ) ಚುಚ್ಚುಮದ್ದಿನ ಆವಿಷ್ಕಾರದಿಂದಾಗಿ ಸರ್ವಿಕಲ್‌ ಕ್ಯಾನ್ಸರ್‌ ವಿರುದ್ಧದ ಹೋರಾಟಕ್ಕೆ ದೊಡ್ಡ ಅಸ್ತ್ರವೊಂದು ಸಿಕ್ಕಂತಾಗಿದೆ. ಈ ಚುಚ್ಚುಮದ್ದು ಕೇವಲ ರೋಗಪ್ರತಿರೋಧಕ ಮಾತ್ರವಲ್ಲ, ಮನುಕುಲವನ್ನು ದೀರ್ಘಕಾಲದಿಂದ ಕಾಡುತ್ತಿರುವ ರೋಗದ ಇತಿಹಾಸದಲ್ಲಿಯೇ ದೊಡ್ಡ ತಿರುವು ತರುವ ನಿರೀಕ್ಷೆ ಇದೆ.


COMMERCIAL BREAK
SCROLL TO CONTINUE READING

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ 30 ವರ್ಷ ವಯಸ್ಸು ಮೇಲ್ಪಟ್ಟ ಮಹಿಳೆಯರು ಪ್ರತಿ ಐದರಿಂದ ಹತ್ತು ವರ್ಷಗಳಿಗೊಮ್ಮೆ ಸರ್ವಿಕಲ್‌ ಕ್ಯಾನ್ಸರ್‌ ತಪಾಸಣೆಗೆ ಒಳಪಡಬೇಕು. ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯ ಮೂಲಕ ತಡೆಗಟ್ಟಲು ಇದು ಸಹಕಾರಿಯಾಗುತ್ತದೆ. ಆದರೆ ಈ ಮಾನದಂಡಗಳನ್ನು ಜಾರಿಗೆ ತರುವುದು ಕಷ್ಟವಾಗುತ್ತಿದೆ. ವಿಶೇಷವಾಗಿ ಭಾರತದಂತಹ ರಾಷ್ಟ್ರಗಳಲ್ಲಿ ಮಹಿಳೆಯರ ಸಾವಿಗೆ ಸರ್ವಿಕಲ್‌ ಕ್ಯಾನ್ಸರ್‌ ಎರಡನೇ ಅತಿದೊಡ್ಡ ಕಾರಣವೆಂದು ವಿಶ್ಲೇಷಿಸಲಾಗಿದೆ. ಪ್ರತಿವರ್ಷ ಸುಮಾರು 70,000 ಮಹಿಳೆಯರು ಇದರಿಂದ ಮರಣ ಹೊಂದುತ್ತಿದ್ದಾರೆ. ಕ್ಯಾನ್ಸರ್‌ ತಪಾಸಣೆಗೆ ಒಳಪಡುವ 30-49 ವರ್ಷ ವಯಸ್ಸಿನ ಭಾರತೀಯ ಮಹಿಳೆಯರ ಪ್ರಮಾಣ ಕೇವಲ ಎರಡರಷ್ಟು ಮಾತ್ರ ಇದೆ. ಹಾಗಾಗಿ ದೇಶದಲ್ಲಿ ಸರ್ವಿಕಲ್‌ ಕ್ಯಾನ್ಸರ್‌ ಪ್ರಮಾಣ ಮಾರಣಾಂತಿಕವಾಗಿದೆ.


ಇದನ್ನೂ ಓದಿ: ಕಡೆಗಣಿಸು, ನಿರ್ಲಕ್ಷಿಸು, ನಿದ್ರಿಸು, ಮತ್ತದನ್ನೇ ಪುನರಾವರ್ತಿಸು; ಇದುವೇ ಪ್ರಧಾನಿ ಮೋದಿ ಮಂತ್ರ!


ಈ ಹಂತದಲ್ಲಿಯೇ ಎಚ್‌ಪಿವಿ ಚುಚ್ಚುಮದ್ದಿನ ಆವಿಷ್ಕಾರವಾಗಿದೆ. ಸರ್ವಿಕಲ್‌ ಕ್ಯಾನ್ಸರ್‌ಗೆ ಮುಖ್ಯ ಕಾರಣ ಹ್ಯೂಮನ್‌ ಪಾಪಿಲ್ಲೊಮಾವೈರಸ್‌. ಎಚ್‌ಪಿವಿ ಸಾಮಾನ್ಯ ವೈರಸ್‌ ಆಗಿದ್ದು ಸಾಮಾನ್ಯವಾಗಿ ಲೈಂಗಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವರ ಶರೀರದ ರೋಗಪ್ರತಿರೋಧಕ ಶಕ್ತಿ ಈ ವೈರಸ್‌ ಎದುರು ಕ್ರಮೇಣ ದುರ್ಬಲಗೊಳ್ಳುತ್ತದೆ. ಆಗ ಕೆಲವೊಂದು ಪ್ರಕರಣಗಳಲ್ಲಿ ಸರ್ವಿಕಲ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಎಚ್‌ಪಿವಿ ಚುಚ್ಚುಮದ್ದು ಕ್ಯಾನ್ಸರ್‌ ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಚುಚ್ಚುಮದ್ದು ಮಹಿಳೆಯ ಶರೀರದ ರೋಗಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಎಚ್‌ಪಿವಿ ವಿರುದ್ಧ ಹೋರಾಡಲು ಜೀವಕಣಗಳನ್ನು ಸೃಷ್ಟಿಸುತ್ತದೆ. ಇದರಿಂದ ಸರ್ವಿಕಲ್‌ ಕ್ಯಾನ್ಸರ್‌ ಬೆಳೆಯುವುದನ್ನು ತಡೆಯುತ್ತದೆ.


ಎಚ್‌ಪಿವಿ ಚಚ್ಚುಮದ್ದಿನ ಪ್ರಯೋಗಗಳು ಗಣನೀಯವಾಗಿ ಯಶಸ್ವಿಯಾಗಿದೆ. ಶೇಕಡ 90ರಷ್ಟು ಸರ್ವಿಕಲ್‌ ಕ್ಯಾನ್ಸರ್‌ ಪ್ರಕರಣಗಳನ್ನು ಇದು ತಡೆಯಲು ಶಕ್ತವಾಗಿದೆ. ಕ್ಯಾನ್ಸರ್‌ ವಿರುದ್ಧದ ಜಾಗತಿಕ ಹೋರಾಟಕ್ಕೆ ಬಲತುಂಬಿದೆ. ವ್ಯಕ್ತಿಗತವಾಗಿ ಮಾತ್ರವಲ್ಲದೇ ಸಾಮೂಹಿಕವಾಗಿಯೂ ಕ್ಯಾಂಪ್‌ಗಳ ಮೂಲಕ ಚುಚ್ಚುಮದ್ದು ನೀಡುವುದರಿಂದ ಕ್ಯಾನ್ಸರ್‌ ಪ್ರಕರಣಗಳು ಹರಡುವುದನ್ನು ತಡೆಯಬಹುದು. ಆದರೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಚುಚ್ಚುಮದ್ದಿನ ಲಭ್ಯತೆ ಮತ್ತು ಸ್ವೀಕಾರಾರ್ಹತೆಯ ಕುರಿತು ಅನುಮಾನಗಳಿವೆ.


ಇದನ್ನೂ ಓದಿ: ರವಿ ಬಸ್ರೂರು ನಿರ್ದೇಶನದ ಕಡಲ್ ಸಿನಿಮಾ ಜ.೧೯ಕ್ಕೆ ಬಿಡುಗಡೆ


ಸರಿಯಾದ ಅರಿವು ಇಲ್ಲದಿರುವುದು, ನಂಬಿಕೆಗಳು, ಬೆಲೆ ಮತ್ತು ಕಡಿಮೆ ಲಭ್ಯತೆ ಇದಕ್ಕೆ ಕಾರಣ. ಸರಕಾರ ಈ ಸವಾಲುಗಳನ್ನು ನಿಭಾಯಿಸಬೇಕು. ಮಹಿಳೆಯರಲ್ಲಿರುವ ಅಪನಂಬಿಕೆಗಳನ್ನು ದೂರಗಾಣಿಸಬೇಕು. ಸರಕಾರ ತನ್ನ ರಾಷ್ಟ್ರೀಯ ರೋಗಪ್ರತಿಬಂಧಕ ಕಾರ್ಯಕ್ರಮಗಳಲ್ಲಿ ಈ ಚುಚ್ಚುಮದ್ದನ್ನು ಸೇರ್ಪಡೆ ಮಾಡಬೇಕು. ಮಾರುಕಟ್ಟೆಯಲ್ಲಿ ಕೆಲವೊಂದು ಕಂಪೆನಿಗಳು ಈಗಾಗಲೇ ಎಚ್‌ಪಿವಿ ಚುಚ್ಚುಮದ್ದು ಪರಿಚಯಿಸಿವೆ. ಉದಾಹರಣೆಗೆ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಭಾರತದ ಮೊದಲ ಎಚ್‌ಪಿವಿ ಚುಚ್ಚುಮದ್ದು ಸರ್ವಾವಾಕ್‌ ಬಿಡುಗಡೆ ಮಾಡಿತ್ತು. ಚುಚ್ಚುಮದ್ದಿನ ಪ್ರಯೋಗಗಳು ಯಶಸ್ವಿಯಾಗಿರುವುದರಿಂದ ಬಳಕೆಯ ಪರವಾನಿಗಿ ಸುಲಲಿತವಾಗಬೇಕು. ಸಾಮಾನ್ಯ ರೋಗ ತಪಾಸಣೆ ಮತ್ತು ಮಹಿಳೆಯರ ಆರೋಗ್ಯ ತಪಾಸಣೆಗಳಲ್ಲಿ ಎಚ್‌ಪಿವಿ ಚುಚ್ಚುಮದ್ದು ಬಳಕೆಯಾಗಬೇಕು ಎಂದು ತಜ್ಞರು ಹೇಳುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.