ಅಜೀರ್ಣವು ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಏನನ್ನೂ ತಿನ್ನದಿದ್ದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದರೆ, ಅದಕ್ಕೆ ಕಾರಣವೇನು? ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದಾಗ ಅಜೀರ್ಣ ಉಂಟಾಗುತ್ತದೆ. ನಿಮ್ಮ ಹೊಟ್ಟೆ ಉರಿಯಾದಾಗ ಮತ್ತು ಕಿರಿಕಿರಿಯನ್ನು ಉಂಟುಮಾಡಿದಾಗ ಇದು ಉಂಟಾಗುತ್ತದೆ. ಚೆನ್ನಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ನೋವು ಮತ್ತು ವಾಕರಿಕೆ ಮುಂತಾದ ದೊಡ್ಡ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಔಷಧಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಲು ಸಾಧ್ಯವಿಲ್ಲ. ಏಕೆಂದರೆ ಔಷಧಿಗಳು ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಬಹುದು, ಆದರೆ ದೀರ್ಘಾವಧಿಯಲ್ಲಿ ಹೆಚ್ಚು ಸಹಾಯಕವಲ್ಲ. ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುವ ಅನೇಕ ನೈಸರ್ಗಿಕ ಆಹಾರಗಳು ಮತ್ತು ಪಾನೀಯಗಳಿವೆ ಮತ್ತು ಅವುಗಳಲ್ಲಿ ವೀಳ್ಯದೆಲೆಯೂ ಒಂದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶೀಘ್ರದಲ್ಲಿಯೇ ಶನಿಯ ನೇರ ನಡೆ ಆರಂಭ... ಈ ರಾಶಿಗಳ ಜನರ ಮೇಲೆ ನೇರ ಅಶುಭ ಪ್ರಭಾವ


ಊಟದ ನಂತರ ಪಾನ್ ಅಥವಾ ವೀಳ್ಯದೆಲೆಯನ್ನು ಜಗಿಯುವುದು ಭಾರತದಲ್ಲಿ ಪ್ರಾಚೀನ ಆಹಾರ ಸಂಪ್ರದಾಯವಾಗಿದೆ. ಜನರು, ತಮ್ಮ ಊಟದ ನಂತರ, ಸಾಮಾನ್ಯವಾಗಿ ಹತ್ತಿರದ ಪಾನ್ ಅಂಗಡಿಗಳಿಗೆ ಪಾನ್ ತಿನ್ನಲು ಹೋಗುತ್ತಾರೆ, ಆದರೆ ಕೆಲವರು ಗುಲ್ಕಂದ್, ಕತ್ತರಿಸಿದ ಅಡಿಕೆ, ಒಣ ಹುರಿದ ಬಡೆಸೋಪು, ಕೊಬ್ಬರಿ ಪುಡಿ, ಜೇನುತುಪ್ಪ, ಲವಂಗ ಮತ್ತು ಏಲಕ್ಕಿ ಕಾಳುಗಳನ್ನು ಹಾಕಿ ಮಾಡುತ್ತಾರೆ. ಇನ್ನೂ ಕೆಲವರು ಈ ಪಾನ್‌ ಅನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸುತ್ತಾರೆ. ಇದು ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ತಿಳಿದುಬಂದಿದೆ. ಆಯುರ್ವೇದದ ಪ್ರಕಾರ, ಊಟದ ನಂತರ ಪಾನ್ ಅಗಿಯುವುದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಏಕೆಂದರೆ ಇದು ಜೀರ್ಣಕಾರಿ ರಸದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹೊಟ್ಟೆಯ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನ ಪರಾವಲಂಬಿಗಳನ್ನು ನಾಶಪಡಿಸುತ್ತದೆ.


ಇದನ್ನೂ ಓದಿ: ಈ ಅಪರೂಪದ ಮರಗಳಲ್ಲಿದೆ ದೇವರ ವಾಸ: ಪೂಜೆ ಮಾಡಿದರೆ ಊಹಿಸದಷ್ಟು ಲಾಭ ಗ್ಯಾರಂಟಿ


ವೀಳ್ಯದೆಲೆಯು ಕಾರ್ಮಿನೇಟಿವ್, ಗ್ಯಾಸ್ಟ್ರೋ-ಪ್ರೊಟೆಕ್ಟಿವ್ ಮತ್ತು ವಾಯು ವಿರೋಧಿ ಗುಣಗಳನ್ನು ಹೊಂದಿದೆ. ಇವೆಲ್ಲವೂ ಉತ್ತಮ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಲಾಲಾರಸದ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯ ಮೊದಲ ಹಂತವಾಗಿದೆ. ಏಕೆಂದರೆ ಅದರಲ್ಲಿರುವ ವಿವಿಧ ಕಿಣ್ವಗಳು ಆಹಾರವನ್ನು ಒಡೆಯುತ್ತವೆ. ಇದು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ವೀಳ್ಯದೆಲೆಯಿಂದ ಎಣ್ಣೆಯನ್ನು ತಯಾರಿಸಿ ಮತ್ತು ನಿಮ್ಮ ಹೊಟ್ಟೆಯ ಮೇಲೆ ಮಸಾಜ್ ಮಾಡುವುದು ಸಹ ಗ್ಯಾಸ್ಟ್ರಿಕ್ ಜ್ಯೂಸ್ ಮತ್ತು ಜೀರ್ಣಕಾರಿ ಆಮ್ಲಗಳ ಸ್ರವಿಸುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 


ವೀಳ್ಯದೆಲೆಯು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿರುತ್ತದೆ. ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ಹೊಟ್ಟೆಯ ಪಿಹೆಚ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆಯನ್ನು ನೀರಿನಲ್ಲಿ ನೆನೆಸಿ ರಾತ್ರಿಯಿಡೀ ಇಡಬೇಕು. ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿದು ಅಥವಾ ನೆನೆಸಿದ ವೀಳ್ಯದೆಲೆಯನ್ನು ಜಗಿದು ತಿನ್ನಿ. ಇದು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.