ನವದೆಹಲಿ :  Side Effects Of Cashew:  ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕೆ ಬಹಳಷ್ಟು  ಪ್ರಯೋಜನವಾಗುತ್ತದೆ. ಗೋಡಂಬಿ ತಿನ್ನಲು ಇಷ್ಟಪಡದವರು ಬಹಳ ವಿರಳ. ಭಕ್ಷ್ಯಗಳ ಅಲಂಕಾರಕ್ಕಾಗಿಯೂ ಗೋಡಂಬಿಯನ್ನು ಬಳಸಲಾಗುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್, ಕಬ್ಬಿಣ, ಫೈಬರ್, ಫೋಲೇಟ್, ಸೆಲೆನಿಯಮ್, ಆಂಟಿ-ಆಕ್ಸಿಡೆಂಟ್, ಖನಿಜಗಳು ಮತ್ತು ಜೀವಸತ್ವಗಳು ಹೇರಳವಾಗಿ ಕಂಡು ಬರುತ್ತವೆ.  ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಗೋಡಂಬಿ ಸೇವನೆಯು ದೇಹವನ್ನು ಅನೇಕ ಸಮಸ್ಯೆಗಳಿಂದ ದೂರವಿಡುತ್ತದೆ.  ಇಷ್ಟೆಲ್ಲಾ ಉತ್ತಮ ಗುಣಗಳಿರುವ ಗೋಡಂಬಿಯ (Side Effects Of Cashew) ಸೇವನೆ ಕೂಡಾ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದೊಡ್ಡಬಹುದು 


COMMERCIAL BREAK
SCROLL TO CONTINUE READING

ಗೋಡಂಬಿ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು : 
1. ಹೊಟ್ಟೆಯ ಸಮಸ್ಯೆಗಳು : ಗೋಡಂಬಿಗಳಲ್ಲಿ (Cashew) ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಗೋಡಂಬಿಯನ್ನು ಅಧಿಕವಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು.


ಇದನ್ನೂ  ಓದಿ : Diabetes Treatment : ಮಧುಮೇಹವನ್ನು ಈ ರೀತಿ ತ್ವರಿತವಾಗಿ ಗುಣಪಡಿಸಿ : ಚಿಕಿತ್ಸೆಗೆ ಭಾರತದಲ್ಲಿ ದೊಡ್ಡ ಸಂಶೋಧನೆ


2. ಬೊಜ್ಜು: ನೀವು ತೂಕ ಇಳಿಸಿಕೊಳ್ಳಲು (Weight loss) ಪ್ರಯತ್ನಿಸುತ್ತಿದ್ದಾರೆ, ಅಥವಾ ಡಯೆಟ್ ನಲ್ಲಿದ್ದರೆ (Diet) ತಪ್ಪಿಯೂ ಗೋಡಂಬಿ ಬೀಜಗಳನ್ನು ಸೇವಿಸಬೇಡಿ. ಇದರಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ .


3. ಅಲರ್ಜಿಗಳು: ಅನೇಕ ಜನರು ಗೋಡಂಬಿ ಅಲರ್ಜಿಯನ್ನು ಹೊಂದಿರುತ್ತಾರೆ. ಗೋಡಂಬಿ ತಿಂದ ನಂತರ ಉಸಿರಾಟದ ಸಮಸ್ಯೆ , ತುರಿಕೆ, ವಾಂತಿ (Vomiting) ಅಥವಾ ಅತಿಸಾರದ ತೊಂದರೆಗಳನ್ನು ಎದುರಿಸುತ್ತಾರೆ. ಹೀಗಿದ್ದರೆ ಗೋಡಂಬಿಯನ್ನು ಸೇವಿಸಲೇಬಾರದು, ಇದು ಅಲರ್ಜಿಯ (Allergy) ಪ್ರತಿಕ್ರಿಯೆಯನ್ನು ಉಂಟುಮಾಡಬಹುದು .


4. ತಲೆನೋವು: ಗೋಡಂಬಿ ತಿನ್ನುವುದರಿಂದ  ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಗೋಡಂಬಿಯಲ್ಲಿರುವ ಅಮೈನೊ ಆಮ್ಲಗಳಾದ ಟೈರಮೈನ್ ಮತ್ತು ಫಿನೈಲೆಥೈಲಮೈನ್ ಅಂಶವು ತಲೆನೋವುವಿಗೆ ಕಾರಣವಾಗಿರುತ್ತದೆ.  


ಇದನ್ನೂ  ಓದಿ : Kidney Health : ಈ 5 ಆಹಾರಗಳು ಕಿಡ್ನಿ ಸಮಸ್ಯೆಗಳನ್ನ ತಡೆಯುತ್ತವೆ : ಇಂದಿನಿಂದ ಸೇವಿಸಲು ಆರಂಭಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ