ನವದೆಹಲಿ : ಕೆಲವರಿಗೆ ಊಟದ ಜೊತೆ ಮೊಸರು (Curd) ಇಲ್ಲ ಅಂದರೆ ಊಟ ಸೇರುವುದಿಲ್ಲ, ಇನ್ನು ಕೆಲವರು ಮೊಸರನ್ನು ತಮ್ಮ ಸಮೀಪ ಕೂಡಾ ಇಟ್ಟುಕೊಳ್ಳುವುದಿಲ್ಲ. ಆದರೆ ಮೊಸರು ನಮ್ಮ ಆರೋಗ್ಯಕ್ಕೆ (Health benefits of curd) ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ಖಂಡಿತವಾಗಿಯೂ ಎಲ್ಲರು ಮೊಸರು ಸೇವಿಸಲು ಆರಂಭಿಸುತ್ತೀರಿ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್-ಬಿ 6 ಮತ್ತು ವಿಟಮಿನ್-ಬಿ 12 ಮತ್ತು ರಿಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇವುಗಳು ಉತ್ತಮ  ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಿದ್ದರೆ ಪ್ರತಿ ದಿನ ಮೊಸರು ಸೇವನೆಯಿಂದ ಯಾವೆಲ್ಲಾ ಪ್ರಯೋಜನಗಳುವೆ ನೋಡೋಣ ..


COMMERCIAL BREAK
SCROLL TO CONTINUE READING

ಪ್ರತಿದಿನ ಮೊಸರು (Curd) ತಿನ್ನುವುದರಿಂದ, ನಮಗೆ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು (Digestion) ಉತ್ತಮವಾಗಿ ಕೆಲಸ ಮಾಡುತ್ತದೆ. ಮೊಸರು ದೇಹವನ್ನು ತಾಜಾವಾಗಿಡಲು ಸಹ ಸಹಾಯ ಮಾಡುತ್ತದೆ.  ಹೃದಯ ಸಂಬಂಧಿತ ಕಾಯಿಲೆ (Heart disease) ಇರುವವರಿಗೆ ಮೊಸರು ತಿನ್ನಲು ಸೂಚಿಸಲಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೊಸರು ಸೇವನೆಯು ಅಂತಹ ಜನರಿಗೆ ತುಂಬಾ ಪ್ರಯೋಜನಕಾರಿ (Benefits of curd) ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ : Banana Benefits : ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಅನೇಕ ಪ್ರಯೋಜನಗಳು: ಇಲ್ಲಿವೆ ನೋಡಿ


ಮೊಸರಿನ ಅದ್ಭುತ ಪ್ರಯೋಜನಗಳು : 
1. ಮೊಸರು ಹೊಟ್ಟೆಯಲ್ಲಿ ಸೋಂಕು (Infection) ಬರದಂತೆ ತಡೆಯುತ್ತದೆ. ಅಲ್ಲದೆ, ಹಸಿವು ಕಡಿಮೆ ಇರುವವರಿಗೂ ಇದು ಪ್ರಯೋಜನಕಾರಿಯಾಗಿದೆ.
2. ಮೊಸರು ಕೂದಲು, ರಕ್ತದೊತ್ತಡ, ಆಸ್ಟಿಯೊಪೊರೋಸಿಸ್ ಮತ್ತು ಮೂಳೆಗಳಿಗೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
3. ಮೊಸರು ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ (Cholestrol) ಅನ್ನು ಕಡಿಮೆ ಮಾಡಲು ಮತ್ತು ನಮ್ಮ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
4. ಚರ್ಮದ ಕಾಯಿಲೆಗಳನ್ನು ಗುಣಪಡಿಸಲು ಮೊಸರನ್ನು ಉಪಯುಕ್ತವೆಂದು ಪರಿಗಣಿಸಲಾಗುತ್ತದೆ.
5. ಮೊಸರು ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.
6. ಮೊಸರನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಎಲ್ಲಾ ರೀತಿಯ ತ್ವಚೆಯ ಸಮಸ್ಯೆಗೆ ಚಿಟಿಕೆ ಉಪ್ಪೇ ಪರಿಹಾರ


ಆದರೆ ನೆನಪಿರಲಿ ಶೀತ (Cold) ಮತ್ತು ಕೆಮ್ಮು ಇರುವವರು ಮೊಸರು ತಿನ್ನಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ