ಬೆಂಗಳೂರು : ಬೇಸಿಗೆಯಲ್ಲಿ (Summer) ಅನೇಕ ರೀತಿಯ ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಈ ಋತುವಿನಲ್ಲಿ, ಸೂರ್ಯನ ಸುಡು ಬಿಸಿಲಿನ ಕಾರಣ, ಟ್ಯಾನಿಂಗ್ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಬೇಸಿಗೆಯಲ್ಲಿ ಚರ್ಮದ ಬಗ್ಗೆ ವಿಶೇಷ ಕಾಳಜಿ (Skin care) ವಹಿಸುವುದು ಬಹಳ ಮುಖ್ಯ. ಈ ಸಮಸ್ಯೆಗಳನ್ನು ತೊಡೆದುಹಾಕಲು ಸುಲಭವಾದ ಮನೆಮದ್ದು (Home remedy) ಯಾವುದು ಎಂದು, ಕೇಳಿದರೆ ಅದು ಉಪ್ಪು. ಹೌದು ಚಿಟಿಕೆ ಉಪ್ಪಿನ ಸಹಾಯದಿಂದ ತ್ವಚೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಾದರೆ, ಮನೆ ಮದ್ದಿನ ರೀತಿಯಲ್ಲಿ ಉಪ್ಪನ್ನು ಯಾವ ರೀತಿಯಲ್ಲಿ ಬಳಸಬಹುದು ನೋಡೋಣ..
ಟೋನರ್ನಂತೆ ಉಪ್ಪನ್ನು ಬಳಸಿ :
ಎಣ್ಣೆಯುಕ್ತ ಚರ್ಮದ (oily skin) ಸಮಸ್ಯೆ ನಿವಾರಣೆಗೆ ಉಪ್ಪನ್ನು ಬಳಸಬಹುದು. ಟೋನರ್ (Skin toner) ಆಗಿಯೂ ಉಪ್ಪು ಉಪಯೋಗಕ್ಕೆ ಬರುತ್ತದೆ. ಸ್ಪ್ರೇ ಬಾಟಲಿಯಲ್ಲಿ ಉಗುರು ಬೆಚ್ಚಗಿನ ನೀರನ್ನು ಹಾಕಿ ಅದಕ್ಕೆ ಉಪ್ಪು (Salt) ಬೆರೆಸಿ. ನಂತರ ಹತ್ತಿಯ ಸಹಾಯದಿಂದ ಈ ನೀರನ್ನು ಮುಖದ ಮೆಲೆ ಹಚ್ಚುತ್ತಿರಿ.
ಇದನ್ನೂ ಓದಿ : Curd Benefits : ಮೊಸರನ್ನ ಪ್ರತಿದಿನ ಈ ಸಮಯದಲ್ಲಿ ಸೇವಿಸಬೇಕು : ಇಲ್ಲಿದೆ ಅದರ ಪ್ರಯೋಜನಗಳು!
ಸ್ನಾನದ ನೀರಿನಲ್ಲಿ ಉಪ್ಪು ಮಿಶ್ರಣ ಮಾಡಿ :
ಒಣ ಚರ್ಮದಿಂದ ಬಳಲುತ್ತಿದ್ದರೆ ಅದಕ್ಕೂ ಉಪ್ಪು ಪರಿಹಾರವಾಗಲಿದೆ. ಸ್ನಾನದ ನೀರಿಗೆ (water) ಉಪ್ಪನ್ನು ಬೆರೆಸಬೇಕು. ಒಂದು ಕಪ್ ನೀರಿನಲ್ಲಿ ಅರ್ಧ ಕಪ್ ಉಪ್ಪನ್ನು ಸುರಿಯಿರಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸ್ನಾನದ ನೀರಿಗೆ ಬೆರೆಸಿ ಆ ನೀರಿನಿಂದ ಸ್ನಾನ ಮಾಡಿ. ಇನ್ನು ಬಾತ್ ಟಬ್ ನೀರಿಗೆ ಇದನ್ನು ಹಾಕಿ ಆ ನೀರಿನಲ್ಲಿ 15 ನಿಮಿಷಗಳ ಕಾಲ ಕುಳಿತುಕೊಳ್ಳಬಹುದು.
ಸ್ಕ್ರಬ್ ಆಗಿಯೂ ಬಳಸಿ :
ಸೂರ್ಯನ ಬಿಸಿಲಿನಿಂದ ಚರ್ಮ ಟ್ಯಾನ್ (skin tan)ಆಗಿದ್ದರೆ, ಒಂದು ಟೀಸ್ಪೂನ್ ಕೊಬ್ಬರಿ ಎಣ್ಣೆಗೆ ಉಪ್ಪು ಸೇರಿಸಿ. ಈ ಮಿಶ್ರಣವನ್ನು ಸ್ಕ್ರಬ್ ನಂತೆ (scrub) ಬಳಸಿ. ಸ್ಕಿನ್ ಟ್ಯಾನ್ ಗೆ ಇದು ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ.
ಇದನ್ನೂ ಓದಿ : Pineapple Benefits : ಪೈನಾಪಲ್ ನಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ ಪ್ರಯೋಜನಗಳು!
ಉಪ್ಪಿನ ಫೇಸ್ ಮಾಸ್ಕ್ :
ಉಪ್ಪಿನ ಫೇಸ್ ಮಾಸ್ಕ್ (face mask) ಮೂರು ಟೀ ಚಮಚ ಜೇನುತುಪ್ಪ (honey) ಮತ್ತು ಒಂದು ಟೀ ಚಮಚ ಉಪ್ಪು ಸೇರಿಸಿ. ಈ ಪೇಸ್ಟ್ ಅನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿ. 10 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ