ನಿಮಗೂ ಈ ಸಮಸ್ಯೆಗಳಿದ್ದರೆ ರಾಗಿ ಸೇವನೆ ಖಂಡಿತಾ ಒಳ್ಳೆಯದಲ್ಲ
ತಿಳಿದಿರಲಿ ಎಲ್ಲಾ ಸಂದರ್ಭಗಳಲ್ಲೂ ರಾಗಿಯ ಸೇವನೆ ಲಾಭವನ್ನೇ ನೀಡುವುದಿಲ್ಲ. ಇದರ ಸೇವನೆ ಅಡ್ಡ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ರಾಗಿ ಸೇವನೆಯಿಂದ ಅನೇಕ ಅನಾನುಕೂಲಗಳು ಕೂಡಾ ಆಗುತ್ತವೆ.
ಬೆಂಗಳೂರು : ಬರಪೂರ ಔಷಧೀಯ ಗುಣಗಳಿಂದ ಕೂಡಿರುವ ರಾಗಿಯನ್ನು (Ragi) ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ರಾಗಿಯನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್ ಫೈಬರ್, ಲೈಸಿನ್ ಅಮೈನೋ ಆಮ್ಲಗಳು, ಮೆಥಿಯೋನಿನ್ ಮತ್ತು ವಿಟಮಿನ್ ಡಿ ಹೇರಳವಾಗಿರುತ್ತದೆ. ಇದರ ಸೇವನೆ ಅನೇಕ ಪ್ರಯೋಜನಗಳನ್ನು (Benefits of ragi) ನೀಡುತ್ತದೆ. ಆದರೆ, ತಿಳಿದಿರಲಿ ಎಲ್ಲಾ ಸಂದರ್ಭಗಳಲ್ಲೂ ರಾಗಿಯ ಸೇವನೆ ಲಾಭವನ್ನೇ ನೀಡುವುದಿಲ್ಲ. ಇದರ ಸೇವನೆ ಅಡ್ಡ ಪರಿಣಾಮಗಳನ್ನೂ (Side effects of ragi) ಉಂಟು ಮಾಡುತ್ತದೆ. ರಾಗಿ ಸೇವನೆಯಿಂದ ಅನೇಕ ಅನಾನುಕೂಲಗಳು ಕೂಡಾ ಆಗುತ್ತವೆ.
ಮೂತ್ರಪಿಂಡಕ್ಕೆ ಹಾನಿಕಾರಕ :
ಮೂತ್ರಪಿಂಡದ (Kidney) ಸಮಸ್ಯೆ ಇದ್ದವರು, ರಾಗಿ ಸೇವಿಸುವುದರಿಂದ ಹಾನಿಕಾರಕವೆಂದು ಸಾಬೀತಾಗಬಹುದು.
ಇದನ್ನೂ ಓದಿ : ಆರೋಗ್ಯ ಚೆನ್ನಾಗಿರಬೇಕಾದರೆ ಕರಂಡೆಕಾಯಿಯನ್ನು ಕಡೆಗಣಿಸಬಾರದು..!
ಥೈರಾಯ್ಡ್:
ಥೈರಾಯ್ಡ್ (thyroid) ರೋಗಿಗಳು ರಾಗಿಯನ್ನು ಸೇವಿಸಬಾರದು. ಥೈರಾಯ್ಡ್ ಸಮಸ್ಯೆಯಿಂದ ಬಳಲುವವರು, ರಾಗಿ ಸೇವಿಸಿದರೆ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಿಮಗೆ ಥೈರಾಯ್ಡ್ ಸಮಸ್ಯೆಯಿದ್ದರೆ ರಾಗಿ (Ragi) ಸೇವನೆಗೆ ಮುನ್ನ ನಿಮ್ಮ ವೈದ್ಯರ ಸಲಹೆ ಕೇಳುವುದು ಅಗತ್ಯ.
ಮಲಬದ್ಧತೆ :
ಮಲಬದ್ಧತೆ (Constipation) ಸಮಸ್ಯೆ ಇರುವವರು ರಾಗಿ ಸೇವನೆಯನ್ನು ಕಡಿಮೆ ಮಾಡಬೇಕು. ಯಾಕೆಂದರೆ ರಾಗಿ ಸುಲಭವಾಗಿ ಜೀರ್ಣವಾಗುವುದಿಲ್ಲ (Digestion) . ಹಾಗಾಗಿ ಮಲಬದ್ಧತೆ ಸಮಸ್ಯೆಯಿದ್ದವರು ಮತ್ತೆ ರಾಗಿ ಸೇವಿಸಿದರೆ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ.
ಇದನ್ನೂ ಓದಿ : Weight Loss: ಪ್ರತಿದಿನ ಒಂದು ಬಟ್ಟಲು ದಾಲ್ ಪಾನಿ ಕುಡಿದು ಬೇಗ ತೂಕ ಇಳಿಸಿ
ಗ್ಯಾಸ್ ಸಮಸ್ಯೆ :
ರಾಗಿಯಲ್ಲಿ ಇಂತಹ ಅನೇಕ ಅಂಶಗಳಿವೆ, ಇದು ಅತಿಯಾದ ಬಳಕೆಯಿಂದಾಗಿ ಅತಿಸಾರ, ಹೊಟ್ಟೆಯ ಗ್ಯಾಸ್ ಗೆ ಕಾರಣವಾಗಬಹುದು. ನಿಮಗೆ ಮೊದಲೇ ಗ್ಯಾಸ್ ಅಥವಾ ಆಸಿಡಿಟಿ ಸಮಸ್ಯೆಯಿದ್ದರೆ ರಾಗಿಯನ್ನು ಸೇವಿಸಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.