Health Benefit of Pulses water: ಆರೋಗ್ಯವೇ ಭಾಗ್ಯ. ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸುಲಭದ ಮಾತಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ತಮ್ಮ ಮತ್ತು ತಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಹಲವು ರೀತಿಯ ಪ್ರಯತ್ನ ಮಾಡುತ್ತಾರೆ. ಆದರೆ ನಮ್ಮ ದೇಹಕ್ಕೆ ದ್ವಿದಳ ಧಾನ್ಯಗಳು ಎಷ್ಟು ಮುಖ್ಯ ಎಂಬುದನ್ನು ಹಲವು ಬಾರಿ ಮರೆಯುತ್ತೇವೆ. ಬೇಳೆಕಾಳುಗಳು ಪೌಷ್ಠಿಕಾಂಶವನ್ನು ಹೊಂದಿದ್ದು ಅವು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿಯೇ ನಾವು ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಅವಶ್ಯಕವಾಗಿದೆ. ದ್ವಿದಳ ಧಾನ್ಯಗಳಲ್ಲಿ ಅನೇಕ ವಿಧದ ಜೀವಸತ್ವಗಳು, ಖನಿಜಗಳು ಮತ್ತು ನಾರುಗಳು ಕಂಡುಬರುತ್ತವೆ.
ಬೇಳೆಕಾಳುಗಳು ಪೌಷ್ಟಿಕವಾಗಿದ್ದು, ಅದ ನೀರು ಕೂಡ ಅದ್ಭುತ ಪ್ರಯೋಜನ ನೀಡಲಿದೆ:
ಭಾರತೀಯ ಆಹಾರದಲ್ಲಿ ಬೇಳೆಕಾಳುಗಳನ್ನು ಸಾಕಷ್ಟು ಬಳಸಲಾಗುತ್ತದೆ. ಬೇಳೆಕಾಳುಗಳು ನಮ್ಮ ಆಹಾರದ ಅವಿಭಾಜ್ಯ ಆಹಾರ ಪದಾರ್ಥ ಎಂದರೂ ತಪ್ಪಾಗಲಾರದು. ಬೇಳೆಕಾಳುಗಳು ಪೌಷ್ಠಿಕಾಂಶವನ್ನು ಹೊಂದಿವೆ, ಆದರೆ ದ್ವಿದಳ ಧಾನ್ಯಗಳ ನೀರು ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ಇದಲ್ಲದೆ, ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅದನ್ನು ಸೂಪ್ ರೂಪದಲ್ಲಿ ಕುಡಿಯುವುದರಿಂದ ಸಹ ಪ್ರಯೋಜನಕಾರಿಯಾಗಿದೆ. ಇಂದು, ಈ ವರದಿಯಲ್ಲಿ, ದ್ವಿದಳ ಧಾನ್ಯಗಳಿಗಿಂತ ಅದರ ನೀರಿನಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಲಭ್ಯವಿದೆ ಎಂದು ತಿಳಿಯೋಣ...
ಬೇಳೆ ನೀರನ್ನು ಕುಡಿಯುವುದರಿಂದಾಗುವ ಪ್ರಯೋಜನಗಳು:-
ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:
ಬೇಳೆ ನೀರಿನಲ್ಲಿರುವ ಕ್ಯಾಲೊರಿಗಳ ಪ್ರಮಾಣ ಉತ್ತಮವಾಗಿರುವುದು ಮಾತ್ರವಲ್ಲ, ಜೊತೆಗೆ ಅದರಲ್ಲಿರುವ ಪ್ರೋಟೀನ್ ಕೂಡ ತುಂಬಾ ಒಳ್ಳೆಯದು. ಆದ್ದರಿಂದ ಎರಡು ಮೂರು ಬಟ್ಟಲು ದಾಲ್ ಎಂದರೆ ಬೇಳೆಯ ನೀರನ್ನು ಕುಡಿಯುವುದರಿಂದ ಹೊಟ್ಟೆ ತುಂಬುತ್ತದೆ, ಹಸಿವು ಉಂಟಾಗುವುದಿಲ್ಲ. ಇದರಿಂದಾಗಿ ಆಗಾಗ್ಗೆ ತಿನ್ನುವುದು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದರಿಂದ ತೂಕವನ್ನು ಕಡಿಮೆ (Weight Loss) ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ - ಹಾಲು ಯಾವಾಗ ಕುಡಿದರೆ ಒಳ್ಳೆಯದು..! ಸಿಂಪಲ್ ಹೆಲ್ತ್ ಟಿಪ್ಸ್
ಪುಟ್ಟ ಮಕ್ಕಳಿಗೆ ಬೇಳೆ ತೊವೆ ನೀಡಲಾಗುತ್ತದೆ:
ಬೇಳೆ ನೀರನ್ನು ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ, ಅಂದರೆ ಯಾರೇ ಆದರೂ ಅದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ನಾವು ಚಿಕ್ಕ ಮಕ್ಕಳಿಗೆ ಬೇಳೆ ತೊವೆ ನೀಡುತ್ತೇವೆ.
ಜೀರ್ಣಾಂಗ ವ್ಯವಸ್ಥೆ:
ನಾರಿನಂಶ ಸಮೃದ್ಧವಾಗಿರುವ ಕಾರಣ, ಬೇಳೆ ನೀರು ಮಲಬದ್ಧತೆ, ಅನಿಲ, ಆಮ್ಲೀಯತೆಯಂತಹ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಹಲವು ಬಾರಿ ಕೆಲವರಿಗೆ ಏನೇ ತಿಂದರೂ ವಾಂತಿಯಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಬೇಳೆ ನೀರನ್ನು ಮಾತ್ರ ಕುಡಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ.
ಉತ್ತಮ ಎನರ್ಜಿ ಲೆವಲ್:
ನಿಮಗೆ ಸುಸ್ತು, ಆಯಾಸದಂತಹ ಅನುಭವವಾಗುತ್ತಿದ್ದರೆ ಗ್ಲೂಕೋಸ್, ಎಲೆಕ್ಟ್ರೋಲ್ ಕುಡಿಯುವ ಬದಲು, ನೀವು ಬೇಯಿಸಿದ ಬೆಲೆ ನೀರನ್ನು ಸಹ ಕುಡಿಯಬಹುದು. ಇದನ್ನು ಕುಡಿಯುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು:
ಬೇಳೆ ನೀರಿನಲ್ಲಿರುವ (Dal Water) ಕರಗುವ ನಾರಿನ ಅಂಶದಿಂದಾಗಿ, ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದಿಲ್ಲ, ಇದು ಹೃದ್ರೋಗದ ಜೊತೆಗೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್ ನಿಮ್ಮ ನಿಯಂತ್ರಣದಲ್ಲಿ ಉಳಿಯುತ್ತದೆ ಎಂದು ನೀವು ಹೇಳಬಹುದು.
ಇದನ್ನೂ ಓದಿ - ಆರೋಗ್ಯ ಚೆನ್ನಾಗಿರಬೇಕಾದರೆ ಕರಂಡೆಕಾಯಿಯನ್ನು ಕಡೆಗಣಿಸಬಾರದು..!
ಬೇಳೆ ನೀರನ್ನು ಹೇಗೆ ತಯಾರಿಸುವುದು?
ಬೇಕಾದದ ಪದಾರ್ಥಗಳು:
* ತೊಗರಿ ಬೆಲೆ - 2-3 ಚಮಚ
* ಅರಿಶಿನ - 1 ಪಿಂಚ್
* ಎರಡು ಮೂರು ಕಪ್ ನೀರು
* ರುಚಿಗೆ ತಕ್ಕಷ್ಟು ಉಪ್ಪು
ಬೇಳೆ ನೀರನ್ನು ತಯಾರಿಸುವ ಸುಲಭ ವಿಧಾನ:
ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, ಬೇಳೆ ಜೊತೆಗೆ ಅರಿಶಿನ, ಉಪ್ಪು ಮತ್ತು ನೀರನ್ನು ಕುಕ್ಕರ್ನಲ್ಲಿ ಹಾಕಿ. ಕುಕ್ಕರ್ ಮೂರರಿಂದ ನಾಲ್ಕು ವಿಸ್ಹಲ್ ಕೂಗಲು ಬಿಡಿ. ಬಳಿಕ ಕೆಲ ಸಮಯದ ನಂತರ ಕುಕ್ಕರ್ ತೆರೆಯಿರಿ ಮತ್ತು ಬೇಳೆ ಬೇಯಿಸಿದ ನೀರನ್ನು ಬೇರೆ ಪಾತ್ರೆಯಲ್ಲಿ ಸೋಸಿಕೊಳ್ಳಿ. ನೀವು ಉಳಿದ ಬೇಳೆಯನ್ನು ಅನ್ನದೊಂದಿಗೆ ಸೇವಿಸಬಹುದು. ಸೋಸಿಟ್ಟ ಬೇಳೆ ನೀರಿನಲ್ಲಿ ತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಿರಿ.
ನೀವು ಶೀಘ್ರದಲ್ಲೇ ತೂಕ ಇಳಿಸಿಕೊಳ್ಳಲು ಬಯಸಿದರೆ, ಕೆಲವು ದಿನಗಳವರೆಗೆ ಪ್ರತಿ ದಿನ ರಾತ್ರಿ ಊಟಕ್ಕೆ ಬದಲು ಕೇವಲ ಬೇಳೆ ನೀರನ್ನು ಮಾತ್ರ ಕುಡಿಯಿರಿ. ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ನೀವು ಕಂಡುಕೊಳ್ಳುತ್ತೀರಿ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.