ಬೆಂಗಳೂರು : ನಮ್ಮದು ಕೃಷಿ ಪ್ರಧಾನ ದೇಶ, ಹೈನುಗಾರಿಕೆಯಲ್ಲಿಯೂ ನಾವು ಮುಂದಿದ್ದೇವೆ. ಹಾಲು ಉತ್ಪಾದನೆಯಲ್ಲಿ ಭಾರತ ಯಾವಾಗಲೂ ಅಗ್ರ ಸ್ಥಾನದಲ್ಲಿರುತ್ತದೆ.  ಇನ್ನು ನಮ್ಮಲ್ಲಿ ತುಪ್ಪ ತಿನ್ನುವ ಪ್ರವೃತ್ತಿಯೂ ಹೆಚ್ಚಾಗಿದೆ. ಅನ್ನ, ಇಡ್ಲಿ, ದೋಸೆ, ರೊಟ್ಟಿ, ಚಪಾತಿ ಹೀಗೆ ಎಲ್ಲದಕ್ಕೂ ಒಂದು ಚಮಚ ತುಪ್ಪ ಸೇರಿಸಿ ತಿನ್ನುವ ಪರಿಪಾಠ ನಮ್ಮಲ್ಲಿದೆ.  ಇನ್ನು ಹೆಚ್ಚಿನ ಆರೋಗ್ಯ ತಜ್ಞರ ಪ್ರಕಾರ ಅಡುಗೆ ಎಣ್ಣೆಗೆ ಆರೋಗ್ಯಕರ ಪರ್ಯಾಯವೆಂದರೆ ಅದು ತುಪ್ಪ.  ತುಪ್ಪವನ್ನು ಸೂಪರ್‌ಫುಡ್‌ ಎಂದು ಕರೆಯುವುದೂ ಇದೆ.  ಅಡಿಯಿಂದ ಮುಡಿಯವರೆಗೂ ತುಪ್ಪ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 


COMMERCIAL BREAK
SCROLL TO CONTINUE READING

ಅನೇಕರಲ್ಲಿದೆ ತುಪ್ಪ ತಿನ್ನಬಹುದೇ ತಿನ್ನಬಾರದೇ ಎನ್ನುವ ಜಿಜ್ಞಾಸೆ  : 
ದೇಸಿ ತುಪ್ಪವನ್ನು ತಿಂದರೆ ದೇಹ ಗಟ್ಟಿ ಮುಟ್ಟಾಗಿರುತ್ತದೆ ಎನ್ನುವುದನ್ನು ಎಲ್ಲರೂ ಹೇಳುತ್ತಿರುತ್ತಾರೆ. ಇದು ಖಂಡಿತವಾಗಿಯೂ ಸುಳ್ಳಲ್ಲ. ಆದರೆ ಎಲ್ಲಾ ಸಂದರ್ಭಗಳಲ್ಲಿ ನಿಜವೂ ಅಲ್ಲ.  ಕೆಲವು ಸಂದರ್ಭಗಳಲ್ಲಿ  ತುಪ್ಪ ತಿಂದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಮೊದಲನೆಯದಾಗಿ, ತುಪ್ಪವನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ಇತಿ ಮಿತಿಯಲ್ಲಿದ್ದರೆ  ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.  ಆದರೆ ಕೆಲವೊಂದು ವೈದ್ಯಕೀಯ ಪರಿಸ್ಥಿತಿಗಳಲ್ಲಿ ದೇಸಿ ತುಪ್ಪವನ್ನು ಸೇವಿಸಬಾರದು. 


ಇದನ್ನೂ ಓದಿ : ತೂಕ ಕಳೆದುಕೊಳ್ಳಬೇಕು ಎಂದು ರಾತ್ರಿ ಊಟ ಮಾಡದಿರುವುದು ಈ ಅಪಾಯಗಳನ್ನು ತಂದೊಡ್ಡಬಹುದು .!


ಇವರು ತುಪ್ಪದಿಂದ ಅಂತರ ಕಾಯ್ದುಕೊಳ್ಳಬೇಕು : 
-  8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಿಲ್ಲದಿದ್ದರೆ, ತುಪ್ಪ ಸೇವನೆಯಿಂದ ದೂರ ಉಳಿಯಬೇಕು. 


- ಮಧುಮೇಹ ರೋಗದಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ತುಪ್ಪ ಸೇವಿಸುವಂತಿಲ್ಲ. ಇದರಿಂದ ಆರೋಗ್ಯ  ಮತ್ತಷ್ಟು ಬಿಗಡಾಯಿಸುತ್ತದೆ. 


ಇದನ್ನೂ ಓದಿ  : Dates Benefits : ಮದುವೆಯಾದ ಪುರುಷರೆ ತಪ್ಪದೆ ಸೇವಿಸಿ ಖರ್ಜೂರ : ನಿಮ್ಮ ಸಮಸ್ಯೆ ದೂರವಾಗುತ್ತೆ!


ತುಪ್ಪ ಯಾರಿಗೆ ಸಹಕಾರಿ ? : 
- ದೀರ್ಘ ಗಂಟೆಗಳ ತಾಲೀಮು ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡುವವರಿಗೆ, ತುಪ್ಪ ಪ್ರಯೋಜನಕಾರಿ ಸಾಬೀತಾಗಬಹುದು.  
- ಓಡಾಡಿ ಕೆಲಸ ಮಾಡುವ ಸಂದರ್ಭಗಲ್ಲಿ ತುಪ್ಪ ತಿನ್ನಲೇ ಬೇಕು. 
- ತೆಳ್ಳಗಿರುವವರು ಮತ್ತು ತಮ್ಮ ತೂಕವನ್ನು ಹೆಚ್ಚಿಸಲು ಬಯಸುವವರು, ತುಪ್ಪದ ಸೇವಿಸಿದರೆ ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.