Ramfal Benefits For Diabetes: ಸೀತಾಫಲದಂತೆಯೇ ರಾಮಫಲ ಕೂಡ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ, ಇದು ಒಂದು ರೀತಿಯ ಋತುಮಾನದ ಹಣ್ಣಾಗಿದೆ, ಇದು ಹೆಚ್ಚಾಗಿ ಅಸ್ಸಾಂ, ಮಹಾರಾಷ್ಟ್ರದಲ್ಲಿ ಸಿಗುತ್ತದೆ. ರಾಮಫಲ ಸಕ್ಕರೆ ರೋಗಿಗಳಿಗೆ ತುಂಬಾ ಉಪಯುಕ್ತ ಹಣ್ಣಾಗಿದೆ, ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಹಣ್ಣುಗಳನ್ನು ಎಚ್ಚರಿಕೆಯಿಂದ ತಿನ್ನಲು ಸಲಹೆ ನೀಡಲಾಗುತ್ತದೆ, ಆದರೆ, ರಾಮಫಲ ಸೇವನೆಯಿಂದ ಕೇವಲ ಸಕ್ಕರೆ ನಿಯಂತ್ರಣ ಅಷ್ಟೇ ಅಲ್ಲ, ಇದರಿಂದ ನೀವು ನಿಮ್ಮ ತೂಕವನ್ನು ಕೂಡ ಇಳಿಕೆ ಮಾಡಿಕೊಳ್ಳಬಹುದು.
ರಕ್ತದಲ್ಲಿನ ಸಕ್ಕರೆಯ ಏರಿಳಿತ ನಿಯಂತ್ರಣ
ರಾಮ ಫಲ ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಸಾಬೀತಾಗುತ್ತದೆ. ಸಕ್ಕರೆ ಪ್ರಮಾಣ ನಿಯಂತ್ರಿಸುವ ಗುಣಧರ್ಮಗಳು ಈ ಹನ್ನಿನಲ್ಲಿವೆ, ಇದು ದೇಹದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ಕಾಡು ಸಿಹಿ ಎಂದೂ ಕರೆಯುತ್ತಾರೆ.
ತೂಕ ಇಳಿಕೆ
ಒಂದು ವೇಳೆ ನೀವು ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ. ಈ ಹಣ್ಣು ನಿಮಗೆ ತುಂಬಾ ಸಹಕಾರಿಯಾಗಿದೆ. ಅದರ ಸೇವನೆಯಿಂದಾಗಿ, ದೇಹದ ಕೊಬ್ಬು ವೇಗವಾಗಿ ಕಡಿಮೆಯಾಗುತ್ತದೆ, ಇದರಿಂದಾಗಿ ನಿಮ್ಮ ಬೊಜ್ಜು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ
ಕೂದಲು ಉದುರುವಿಕೆ, ನೆತ್ತಿಯಲ್ಲಿನ ತುರಿಕೆ, ಈ ರೀತಿಯ ಸಮಸ್ಯೆಗಳಿಗೂ ಕೂಡ ಇದೊಂದು ಉಪಯುಕ್ತ ಹಣ್ಣಾಗಿದೆ, ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರಾಮಫಲ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ರಾಮಫಲ ಚರ್ಮದ ಕಲೆಗಳು, ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Health Tips: ಹಾಲಿನಲ್ಲಿ ಇಂಗು ಬೆರೆಸಿ ಕುಡಿಯುವುದರ ಈ ಅದ್ಭುತ ಲಾಭಗಳು ನಿಮಗೆ ತಿಳಿದಿವೆಯೇ?
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ವಿಟಮಿನ್ ಸಿ ಸಮೃದ್ಧವಾಗಿರುವ ರಾಮಫಲ ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಬೇಗನೆ ರೋಗಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಾರೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮಲ್ಲಿ ರೋಗ ಮತ್ತು ವೈರಲ್ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರಾಮಫಲ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದನ್ನೂ ಓದಿ-Health Care Tips: ಪೋಷಕಾಂಶಗಳ ಆಗರವಾಗಿರುವ ಈ ತರಕಾರಿ ಚಳಿಗಾಲದ ಹಲವು ಕಾಯಿಲೆಗಳಿಗೆ ರಾಮಬಾಣ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಯೇ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.