ಈ ಆಹಾರವನ್ನು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿಂದರೆ ವಿಷದಂತೆ ಕೆಲಸ ಮಾಡುತ್ತದೆ !
ಕೆಲವು ಆಹಾರಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.ಇವುಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬೆಂಗಳೂರು : ರಾತ್ರಿ ಉಳಿದ ಅನ್ನ, ಚಪಾತಿ, ಪಲ್ಯ, ಸಾಂಬಾರ್ ಹೀಗೆ ಎಲ್ಲವನ್ನೂ ಫ್ರಿಡ್ ಒಳಗೆ ಇಡುವ ಅಭ್ಯಾಸ ಇರುತ್ತದೆ. ನಂತರ ಇವುಗಳನ್ನು ಬಿಸಿ ಮಾಡಿ ಸೇವಿಸಲಾಗುತ್ತದೆ. ಹೀಗೆ ಮಾಡುವುದರಿಂದ ಉಳಿದ ಆಹಾರವನ್ನು ಎಸೆಯುವ ಅಗತ್ಯ ಇರುವುದಿಲ್ಲ. ಆದರೆ ಕೆಲವು ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವ ಹಾಗಿಲ್ಲ. ಕೆಲವು ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಅದು ವಿಷವಾಗಿ ಪರಿಣಮಿಸುತ್ತದೆ. ಇವುಗಳು ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.
ಈ ಆಹಾರವನ್ನು ಬಿಸಿ ಮಾಡುವುದರಿಂದ ಹಾನಿಯಾಗುತ್ತದೆ :
ಕೆಲವೊಮ್ಮೆ ಆಹಾರವನ್ನು ಬಿಸಿ ಮಾಡುವುದರಿಂದ ಅದರ ರುಚಿ, ಟೆಕ್ಸ್ಚರ್, ಮತ್ತು ಪೋಷಕಾಂಶಗಳು ನಾಶವಾಗುತ್ತವೆ. ಕೆಲವು ಆಹಾರಗಳನ್ನು ಬಿಸಿ ಮಾಡಿ ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : ಗ್ಯಾಸ್ಟ್ರಿಕ್, ಎದೆಯುರಿ ಸಮಸ್ಯೆಯಿಂದ ಪರಿಹಾರಕ್ಕಾಗಿ ಬೇಸಿಗೆಯಲ್ಲಿ ತಪ್ಪದೇ ಸೇವಿಸಿ ಈ 5 ತರಕಾರಿ
ಪಾಲಕ್ ಸೊಪ್ಪು :
ಪಾಲಕ್ ಎಲೆಗಳಲ್ಲಿ ನೈಟ್ರೇಟ್ ಕಂಡುಬರುತ್ತದೆ. ಪಾಲಕ್ ಅನ್ನು ಮತ್ತೆ ಮತ್ತೆ ಬಿಸಿ ಮಾಡಿದಾಗ, ಅದು ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಹೀಗಾದಾಗ ಕ್ಯಾನ್ಸರ್ ಕಾರಕ ತತ್ವಗಳಾಗಿ ಬದಲಾಗುತ್ತದೆ.ಅದೇ ರೀತಿ ಪಾಲಕ್ ಸೊಪ್ಪನ್ನು ಪದೇ ಪದೇ ಬಿಸಿ ಮಾಡುವುದರಿಂದ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಯಂತಹ ಅಂಶಗಳು ನಾಶವಾಗುತ್ತವೆ.
ಚಹಾ :
ಹೆಚ್ಚಿನವರಿಗೆ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸವಿರುತ್ತದೆ.ಆದರೆ, ಚಹಾದಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಪಾಲಿಫಿನಾಲ್‌ಗಳು, ಮೊದಲ ಬಾರಿಗೆ ಕುದಿಸಿದಾಗ,ಅದರ ರುಚಿಯನ್ನು ಹೆಚ್ಚಿಸುತ್ತದೆ.ಅದೇ ತಣ್ಣಗಾದ ಮೇಲೆ ಮತ್ತೆ ಬಿಸಿ ಮಾಡಿದಾಗ ಅವುಗಳ ಗುಣಲಕ್ಷಣಗಳು ನಾಶವಾಗುತ್ತವೆ.ಅಲ್ಲದೆ ಚಹಾದಲ್ಲಿ ಟ್ಯಾನಿಕ್ ಆಮ್ಲ ಉತ್ಪತ್ತಿಯಾಗಿ ಅದು ಆಸಿಡಿಟಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Health Tips: ಬೇಯಿಸಿದ ಮೊಟ್ಟೆ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ
ಎಣ್ಣೆ :
ಉಳಿದಿರುವ ಎಣ್ಣೆಯನ್ನು ಪದೇ ಪದೇ ಬಿಸಿಮಾಡುವುದು ಅದನ್ನು ಮರು ಬಳಕೆ ಮಾಡುವುದರಿಂದ ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿಯನ್ನುಂಟುಮಾಡುತ್ತದೆ. ಹೀಗಾದಾಗ ಎಣ್ಣೆಯಲ್ಲಿ ಹಾನಿಕಾರಕ ರಾಸಾಯನಿಕಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.ಈ ರಾಸಾಯನಿಕಗಳು ಉರಿಯೂತ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.