ನವದೆಹಲಿ : ನಮ್ಮ ದಿನವನ್ನು ಆರೋಗ್ಯಕರ ಉಪಹಾರದೊಂದಿಗೆ ಪ್ರಾರಂಭಿಸಬೇಕು. ಬೆಳಗಿನ ಉಪಾಹಾರಕ್ಕಾಗಿ (Healthy breakfast)ನಾವು ಸೇವಿಸುವ ಆಹಾರದಿಂದ ನಮ್ಮ ದೇಹವು ಬೆಳವಣಿಗೆಯಾಗುತ್ತದೆ. ನಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರ ವಸ್ತುಗಳನ್ನು ತೆಗೆದುಕೊಳ್ಳಬೇಕು (high protein breakfast). ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಭರಿತ ಪದಾರ್ಥಗಳನ್ನು ತಿಂದರೆ ಮನಸ್ಸು ದೇಹ ಎರಡೂ ಉಲ್ಲಾಸದಾಯಕವಾಗಿರುತ್ತದೆ. ಇದಲ್ಲದೇ ತೂಕ ಇಳಿಸಿಕೊಳ್ಳಲು ಬಯಸುವವರ  ಗುರಿಯೂ ಈಡೇರುತ್ತದೆ. ಮೊಟ್ಟೆ,  ಅವಲಕ್ಕಿ  ಸೇರಿದಂತೆ ಹಲವು ಪ್ರೊಟೀನ್ ಭರಿತ ಪದಾರ್ಥಗಳೊಂದಿಗೆ ದಿನವನ್ನು ಪ್ರಾರಂಭಿಸುವುದು ಒಳ್ಳೆಯದು. 


COMMERCIAL BREAK
SCROLL TO CONTINUE READING

ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿ :
ನಿಮ್ಮ ಉಪಾಹಾರದಲ್ಲಿ ಮೊಟ್ಟೆಗಳನ್ನು (egg) ಸೇರಿಸಬಹುದು. ಮೊಟ್ಟೆಗಳನ್ನು ಬೇಯಿಸಿ ತಿನ್ನಬಹುದು ಅಥವಾ ಆಮ್ಲೆಟ್ (omlet for breakfast)ಮಾಡುವ ಮೂಲಕ ಬೆಳಗಿನ ಉಪಾಹಾರದಲ್ಲಿ ತೆಗೆದುಕೊಳ್ಳಬಹುದು.  ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಹೆಚ್ಚಿನ ಪ್ರೋಟೀನ್ ಪಡೆಯಲು ಮೊಟ್ಟೆಯ ಬಿಳಿಭಾಗವನ್ನು ಸೇರಿಸಬಹುದು.


ಇದನ್ನೂ ಓದಿ : Jack Fruit: ಹಲಸಿನ ಹಣ್ಣು ಸೇವಿಸಿದ ಬಳಿಕ ಅಪ್ಪಿ-ತಪ್ಪಿಯೂ ಕೂಡ ಇವುಗಳನ್ನು ಸೇವಿಸಬೇಡಿ, ಶರೀರಕ್ಕೆ ಹಾನಿ ತಪ್ಪಿದ್ದಲ್ಲ!


ಬೆಳಗಿನ ಉಪಾಹಾರದಲ್ಲಿ ಗ್ರೀಕ್ ಮೊಸರು ಸೇರಿಸಿ :
ನಿಮ್ಮ ಬೆಳಗಿನ ಉಪಾಹಾರದಲ್ಲಿ ನೀವು ಮೊಸರನ್ನು (curd) ಸಹ ಸೇರಿಸಬಹುದು. ಗ್ರೀಕ್ ಮೊಸರು ನೈಸರ್ಗಿಕ ಮೊಸರುಗಿಂತ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ನೀವು ಹಣ್ಣುಗಳು, ಜೇನುತುಪ್ಪ (honey)ಮತ್ತು ಕೆಲವು ಬೀಜಗಳೊಂದಿಗೆ ಬೆರೆಸಿದ ಮೊಸರು ತಿನ್ನಬಹುದು. ಈ ಉಪಹಾರವನ್ನು ತಯಾರಿಸಲು ಹೆಚ್ಚು ಸಮಯ ಕೂಡಾ ಬೇಕಾಗುವುದಿಲ್ಲ. 


ಅವಲಕ್ಕಿ ಪ್ರೋಟೀನ್‌ನ ಉತ್ತಮ ಮೂಲವಾಗಿದೆ :
ಅವಲಕ್ಕಿ ಪ್ರೊಟೀನ್‌ನ ಉತ್ತಮ ಮೂಲವಾಗಿದೆ. ಹಾಗಾಗಿ ಬೆಳಗಿನ ಉಪಹಾರದಲ್ಲಿ ಅವಲಕ್ಕಿಯನ್ನು ಸೇರಿಸಬಹುದು. ಅವಲಕ್ಕಿ ಮಾಡುವಾಗ, ಅದರಲ್ಲಿ ಕಾಳು ಮತ್ತು ಒಣ ಹಣ್ಣುಗಳನ್ನು (dry fruits)ಸೇರಿಸಿಕೊಳ್ಳಬಹುದು. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. 


ಇದನ್ನೂ ಓದಿ : Green Tea Side Effects: Size Zero ಗಾಗಿ Green Tea ಸೇವಿಸುವವರು ಈಗಲೇ ಎಚ್ಚೆತ್ತುಕೊಳ್ಳಿ


ಕಾಳುಗಳನ್ನು ತಿಂದು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು : 
ನಿಮ್ಮ ಬೆಳಗಿನ ಉಪಾಹಾರದಲ್ಲಿ ನೀವು ಕಾಳುಗಳನ್ನು ಸಹ ಬಳಸಬಹುದು. ರಾತ್ರಿಯಿಡೀ ನೆನೆಸಿಟ್ಟ ಕಾಳುಗಳನ್ನು ಬೆಳಗ್ಗೆ ತಿಂದರೆ ದಿನವಿಡೀ ಚೈತನ್ಯದಿಂದ ಇರಲು ಸಾಧ್ಯವಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ