Immunity: ಬ್ರೇಕ್ ಫಾಸ್ಟ್ ಸಮಯದಲ್ಲಿನ ಈ ಅಭ್ಯಾಸವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ
Immune System: ಅನೇಕ ಬಾರಿ ನಾವು ಬೆಳಗಿನ ಉಪಾಹಾರದಲ್ಲಿ ಹೆಚ್ಚಾಗಿ ತಿನ್ನುತ್ತೇವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಚಳಿಗಾಲದಲ್ಲಿ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ.
Immune System: ಚಳಿಗಾಲದಲ್ಲಿ (Winter Season) ರೋಗಗಳನ್ನು ತಪ್ಪಿಸಲು, ನಿಮ್ಮ ರೋಗನಿರೋಧಕ ಶಕ್ತಿ ಬಲವಾಗಿರುವುದು ಮುಖ್ಯ. ಇದರೊಂದಿಗೆ, ನೀವು ಜ್ವರ ಮತ್ತು ಅನೇಕ ರೀತಿಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಪ್ರತಿರಕ್ಷಣಾ ವ್ಯವಸ್ಥೆಯು (Immune System) ಉತ್ತಮವಾಗಿ ಕಾರ್ಯನಿರ್ವಹಿಸಲು, ಮೊದಲು ನೀವು ಉಪಾಹಾರದಲ್ಲಿ ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಕೆಲವೊಮ್ಮೆ ನಿಮ್ಮ ಉಪಹಾರದ ಅಭ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತವೆ. ಹಾಗಾಗಿ, ನೀವು ಪ್ರತಿದಿನ ನಿಮ್ಮ ಬೆಳಗಿನ ಉಪಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಅನೇಕ ಬಾರಿ ನಾವು ಬೆಳಗಿನ ಉಪಾಹಾರದಲ್ಲಿ (Breakfast) ಹೆಚ್ಚಾಗಿ ತಿನ್ನುತ್ತೇವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದಲ್ಲದೆ ಬೆಳಗಿನ ಉಪಹಾರದಲ್ಲಿ ನಾವು ಮಾಡುವ ಇನ್ನೂ ಕೆಲವು ತಪ್ಪುಗಳಿವೆ. ಆ ತಪ್ಪುಗಳು ಯಾವುವು? ನಾವು ಮುಂಜಾನೆ ಬ್ರೇಕ್ ಫಾಸ್ಟ್ ವೇಳೆ ಯಾವ ಆಹಾರಗಳನ್ನು ತಪ್ಪಿಸಿದರೆ ಒಳ್ಳೆಯದು ಎಂದು ತಿಳಿಯೋಣ...
ಇದನ್ನೂ ಓದಿ- Fruits Side Effects: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಎಂದಿಗೂ ತಿನ್ನಬೇಡಿ
ಕಿತ್ತಳೆ ರಸವನ್ನು ಕುಡಿಯಬೇಡಿ:
ನೀವೂ ಸಹ ಬೆಳಗಿನ ಉಪಹಾರದ ವೇಳೆ ಕಿತ್ತಳೆ ರಸ ಅಂದರೆ ಆರೆಂಜ್ ಜ್ಯೂಸ್ (Orange Juice) ಕುಡಿಯುವ ಅಭ್ಯಾಸ ಹೊಂದಿದ್ದರೆ ಅದು ನಿಮಗೆ ಹಾನಿ ಮಾಡುತ್ತದೆ. ಕಿತ್ತಳೆ ರಸವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆದರೆ ಅದನ್ನು ಮಧ್ಯಾಹ್ನ ಭೋಜನಕ್ಕೂ ಮುನ್ನ ಅಥವಾ ನಂತರ ಸೇವಿಸಿದರೆ ಉತ್ತಮ.
ಸಕ್ಕರೆಯ ವಸ್ತುಗಳು :
ಬೆಳಗಿನ ಉಪಾಹಾರದಲ್ಲಿ ಬಹಳಷ್ಟು ಸಕ್ಕರೆ ಇರುವ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿ. ಪೇಸ್ಟ್ರಿ ಅಥವಾ ಪ್ಯಾನ್‌ಕೇಕ್‌ಗಳಂತಹ ಹೆಚ್ಚು ಸಕ್ಕರೆ ಪದಾರ್ಥಗಳನ್ನು ತಿನ್ನುವುದರಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದೇ ಸಮಯದಲ್ಲಿ, ಹೆಚ್ಚು ಸಕ್ಕರೆ ಸೇವನೆಯು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಹೆಚ್ಚಿನ ಸೋಡಿಯಂ ಆಹಾರ :
ಬೆಳಗಿನ ಉಪಾಹಾರದಲ್ಲಿ ಫಾಸ್ಟ್ ಫುಡ್ (Fastfood) ಆಹಾರವನ್ನು ಸೇವಿಸದಿದ್ದರೆ ಒಳ್ಳೆಯದು. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ಹೆಚ್ಚಿನ ಉಪ್ಪಿನಂಶವನ್ನು ಹೊಂದಿರುತ್ತದೆ. ಹೆಚ್ಚಿನ ಸೋಡಿಯಂ ಆಹಾರವು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಇದನ್ನೂ ಓದಿ- Ridge Gourd Benefits: ದೇಹದ ಈ 5 ಸಮಸ್ಯೆಗಳಿಗೆ ಹೀರೆಕಾಯಿ ರಾಮಬಾಣವಿದ್ದಂತೆ
ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಭರಿತ ವಸ್ತುಗಳನ್ನು ಸೇವಿಸಿ:
ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಭರಿತ ವಸ್ತುಗಳನ್ನು ಸೇವಿಸಿ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರೋಟೀನ್ ಬಹಳ ಮುಖ್ಯ. ಬೆಳಗಿನ ಉಪಾಹಾರಕ್ಕಾಗಿ ನಾವು ಅನೇಕ ಬಾರಿ ಫ್ರೆಂಚ್ ಟೋಸ್ಟ್ ಅಥವಾ ಪೇಸ್ಟ್ರಿಗಳನ್ನು ತಿನ್ನುತ್ತೇವೆ. ಈ ವಸ್ತುಗಳಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ತುಂಬಾ ಹೆಚ್ಚಾಗಿದೆ, ಆದರೆ ಪ್ರೋಟೀನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ಬೆಳಗಿನ ಉಪಾಹಾರದಲ್ಲಿ ಮೊಟ್ಟೆ, ಹಾಲು ಸೇರಿದಂತೆ ಪ್ರೋಟೀನ್ ಭರಿತ ಆಹಾರ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.
ವಿಟಮಿನ್ ಡಿ ಅತ್ಯಗತ್ಯ :
ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ವಿಟಮಿನ್ ಡಿ ಕೂಡ ಬಹಳ ಮುಖ್ಯ. ವಿಟಮಿನ್ ಡಿ (Vitamin D) ಸಾಲ್ಮನ್, ಓಟ್ ಮೀಲ್, ಮೊಟ್ಟೆ, ಹಾಲು ಮತ್ತು ಕೆಲವು ವಿಧದ ರಸಗಳಲ್ಲಿ ಕಂಡುಬರುತ್ತದೆ. ಬೆಳಗಿನ ಉಪಾಹಾರದಲ್ಲಿ ಈ ವಸ್ತುಗಳನ್ನು ಸೇರಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ