ನಿಮ್ಮ ದೇಹದ ರೋಗನಿರೋಧಕ ಶಕ್ತಿಯ ಮೇಲೆ ಸ್ನಾಯುಗಳ ಕಳಪೆ ಆರೋಗ್ಯದ ಪರಿಣಾಮ
ಆರೋಗ್ಯಕರ, ಸಂಪೂರ್ಣ ಜೀವನವನ್ನು ನಡೆಸಲು, ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು ಪ್ರಮುಖ, ಇತ್ತೀಚಿನ ದಿನಗಳಲ್ಲಂತೂ ಅತಿ ಹೆಚ್ಚಿನ ಆದ್ಯತೆಯಾಗಿದೆ. ದೀರ್ಘಕಾಲದ ಕಾಯಿಲೆಗಳೊಂದಿಗೆ ಹೋರಾಡುವ ಜನರಲ್ಲಿ ಸೌಮ್ಯವಾದ ಸೋಂಕುಗಳು ಮತ್ತಷ್ಟು ತೀವ್ರತರವಾದ ತೊಡಕುಗಳಾಗಿ ಉಲ್ಬಣಗೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಇನ್ನಷ್ಟು ನಿರ್ಣಾಯಕವಾಗಿದೆ.
ಆರೋಗ್ಯಕರ, ಸಂಪೂರ್ಣ ಜೀವನವನ್ನು ನಡೆಸಲು, ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು ಪ್ರಮುಖ, ಇತ್ತೀಚಿನ ದಿನಗಳಲ್ಲಂತೂ ಅತಿ ಹೆಚ್ಚಿನ ಆದ್ಯತೆಯಾಗಿದೆ. ದೀರ್ಘಕಾಲದ ಕಾಯಿಲೆಗಳೊಂದಿಗೆ ಹೋರಾಡುವ ಜನರಲ್ಲಿ ಸೌಮ್ಯವಾದ ಸೋಂಕುಗಳು ಮತ್ತಷ್ಟು ತೀವ್ರತರವಾದ ತೊಡಕುಗಳಾಗಿ ಉಲ್ಬಣಗೊಳ್ಳದಿರುವುದನ್ನು ಖಚಿತಪಡಿಸಿಕೊಳ್ಳಲು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಇನ್ನಷ್ಟು ನಿರ್ಣಾಯಕವಾಗಿದೆ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲು ಉತ್ತಮವಾದ ಹಾಗೂ ಸಮತೋಲಿತ ಪೋಷಣೆಯು ಜನಪ್ರಿಯ ಕೊಡುಗೆಯಾಗಿದೆ, ಸ್ನಾಯುಗಳ ಕಳಪೆ ಆರೋಗ್ಯವು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲದ ವಿಷಯವಾಗಿದೆ. ಅಬಾಟ್‍ನ ನ್ಯೂಟ್ರಿಷನ್ ವ್ಯವಹಾರದಲ್ಲಿ ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಮುಖ್ಯಸ್ಥರಾದ ಡಾ. ಇರ್ಫಾನ್ ಶೇಖ್, ಅದು ಹೇಗೆ ಎಂದು ನಮಗೆ ತಿಳಿಸುತ್ತಾರೆ:
ಸ್ನಾಯುಗಳು, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ರೋಗ ನಿರ್ವಹಣೆಗಳ ನಡುವಿನ ಸಂಬಂಧ :
ಸ್ನಾಯುಗಳು ಚಲನೆಯಲ್ಲಿನ ತಮ್ಮ ಪಾತ್ರಕ್ಕೆ ಹೆಸರುವಾಸಿಯಾಗಿರುವ ಕಾರಣದಿಂದ ಅವು ಪ್ರಮುಖವಾಗಿವೆ ಮತ್ತು ನಮಗೆ ವಯಸ್ಸಾದಂತೆ ಶಕ್ತಿಗಾಗಿ ಮತ್ತು ಕಾರ್ಯನಿರ್ವಹಣೆಗಾಗು ಸ್ನಾಯುಗಳ ಸಂರಕ್ಷಣೆ ಅತ್ಯಗತ್ಯ. ಪ್ರತಿರಕ್ಷಣಾ ಕಾರ್ಯದಲ್ಲಿ ಸ್ನಾಯುಗಳು ಪಾತ್ರವಹಿಸುತ್ತವೆ ಎಂಬುದಕ್ಕೆ ಪುರಾವೆಗಳಿವೆ. ಸ್ನಾಯುಗಳು ಕೆಲವು ಪ್ರತಿರಕ್ಷಣಾ ಕೋಶಗಳ ರಚನೆ, ಸಕ್ರಿಯಗೊಳಿಸುವಿಕೆ ಮತ್ತು ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ ಮತ್ತು ಬಿಡುಗಡೆ ಮಾಡುತ್ತವೆ. ಸ್ನಾಯುಗಳು, ಒತ್ತಡ ಅಥವಾ ಸೋಂಕಿನ ಸಮಯದಲ್ಲಿ ದೇಹವು ಬಳಸುವ ಅಮೈನೋ ಆಮ್ಲಗಳ ಪ್ರಮುಖ ಮೂಲಗಳಾಗಿವೆ. 40 ವರ್ಷಗಳ ನಂತರ, ಪುರುಷರು ಮತ್ತು ಮಹಿಳೆಯರ ಶರೀರಶಾಸ್ತ್ರವು ಬದಲಾವಣೆ ಹೊಂದುತ್ತದೆ. ಹೆಚ್ಚು ಮುಖ್ಯವಾಗಿ, ದೇಹವು ಸ್ನಾಯುವಿನ ದ್ರವ್ಯರಾಶಿಯನ್ನು ವೇಗವಾಗಿ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಇದು 40-80 ವರ್ಷಗಳ ನಡುವಿನ ಸ್ನಾಯುವಿನ ದ್ರವ್ಯರಾಶಿಯ ನಷ್ಟದ 33% ನಷ್ಟು ನಷ್ಟಿರುತ್ತದೆ.
ಇದನ್ನೂ ಓದಿ: ಗಂಡಂದಿರು ಮನೆಯಲ್ಲಿ ಒಬ್ಬರೇ ಇದ್ದಾಗ ಮಾಡುವ 5 ಕೆಲಸಗಳಿವು.. ಪತ್ನಿಗೆ ಊಹಿಸಲೂ ಸಾಧ್ಯವಿಲ್ಲ!
ಸ್ನಾಯುವಿನ ಕಡಿಮೆ ದ್ರವ್ಯರಾಶಿ ಮತ್ತು ಅಸಮರ್ಪಕ ಪ್ರೋಟೀನ್ ಸೇವನೆಯು ಗಾಯ ಅಥವಾ ಸೋಂಕಿಗೆ ದೇಹದ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸಬಹುದು, ಮತ್ತು ಉದಯೋನ್ಮುಖ ಸಂಶೋಧನೆಯು ಸ್ನಾಯುವಿನ ದ್ರವ್ಯರಾಶಿಯ ನಷ್ಟವು ದುರ್ಬಲ ಪ್ರೆತಿರಕ್ಷಣೆ ಮತ್ತು ಸೋಂಕುಗಳಿಗೆ ಕಾರಣವಾಗಬಹುದು ಎಂದು ಸೂಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಸ್ನಾಯುಗಳ ಆರೋಗ್ಯಕ್ಕೆ ಆದ್ಯತೆ ನೀಡುವುದು ಮತ್ತು ವಯಸ್ಸಾದಂತೆ ಸ್ನಾಯುವಿನ ನಷ್ಟವನ್ನು ತಡೆಗಟ್ಟುವುದು ಮುಖ್ಯವಾದರೂ, ದೀರ್ಘಕಾಲದ ಕಾಯಿಲೆಯ ತೊಂದರೆಗಳನ್ನು ಅನುಭವಿಸುತ್ತಿರುವವರು ಇನ್ನಷ್ಟು ಜಾಗರೂಕರಾಗಿರಬೇಕು. ಉದಾಹರಣೆಗೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು, ಮಧುಮೇಹ, ಹೃದಯ ಕಾಯಿಲೆಗಳು ಮುಂತಾದ ಪರಿಸ್ಥಿತಿಗಳು ಸ್ನಾಯುವಿನ ನಷ್ಟವನ್ನು ವೇಗಗೊಳಿಸಬಹುದು ಮತ್ತು ಶಕ್ತಿಯನ್ನು ಕುಗ್ಗಿಸಬಹುದು.
ಆರೋಗ್ಯಕರ ಜೀವನಶೈಲಿಯು ಸ್ನಾಯುವಿನ ಆರೋಗ್ಯದ ತೊಂದರೆಗಳನ್ನು ಪರಿಹರಿಸಲು ಸಹಾಯ ಮಾಡಬಹುದೇ? ಅದಕ್ಕೆ ಉತ್ತರ - ಹೌದು
ನಿಯಮಿತವಾಗಿ ವ್ಯಾಯಾಮ ಮಾಡುವುದು - ವಾರದಲ್ಲಿ ಕನಿಷ್ಠ 150 ನಿಮಿಷಗಳ ಮಧ್ಯಮ-ತೀವ್ರತೆಯ ವ್ಯಾಯಾಮದ ಗುರಿಯನ್ನು ಇಟ್ಟುಕೊಳ್ಳುವುದು - ಮತ್ತು ಆರೋಗ್ಯಕರವಾಗಿ ಉಳಿಯಲು, ಸ್ನಾಯುಗಳನ್ನು ಬೆಂಬಲಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡಲು ಉತ್ತಮವಾದ ಆಹಾರವನ್ನು ಸೇವಿಸುವುದು ಅತ್ಯಗತ್ಯ.
ದೈಹಿಕ ವ್ಯಾಯಾಮದ ಪ್ರಯೋಜನಗಳು ಬಹಳಷ್ಟು! ನಾವು ದೈಹಿಕ ಚಟುವಟಿಕೆಯನ್ನು ಸೇರಿಸಿದಾಗ ಅದು ಕೆಳಹೊಟ್ಟೆಯ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನಮ್ಮ ಲಿಪಿಡ್ ಪ್ರೊಫೈಲ್ ಅನ್ನು ಸುಧಾರಿಸುತ್ತದೆ; ಇನ್ಸುಲಿನ್ ಸಂವೇದನೆ, ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನಾ ಅಧ್ಯಯನಗಳು ತೋರಿಸಿವೆ. ಕುರ್ಚಿ ಸವಾಲಿನ ಪರೀಕ್ಷೆಯು ನಿಮ್ಮ ಸ್ನಾಯುವಿನ ಶಕ್ತಿಯನ್ನು ಪರೀಕ್ಷಿಸಲು, ನಿಮ್ಮ ಸ್ನಾಯುವಿನ ವಯಸ್ಸನ್ನು ಅರ್ಥಮಾಡಿಕೊಳ್ಳಲು ಮತ್ತು ಯಾವುದೇ ಸಮಯೋಚಿತ ಸರಿಪಡಿಸುವ ಕ್ರಮಗಳನ್ನು ಅಳವಡಿಸಿಕೊಳ್ಳಲು ಸುಲಭವಾದ ಮಾರ್ಗವಾಗಿದೆ.
ಸರಿಸುಮಾರು 43 ಸೆಂ (1.4 ಅಡಿ) ಎತ್ತರದ ಕುರ್ಚಿಯ ಮೇಲೆ 5 ಸಿಟ್-ಅಪ್‍ಗಳನ್ನು ಮಾಡಲು ನೀವು ತೆಗೆದುಕೊಳ್ಳುವ ಸಮಯವು ನಿಮ್ಮ ಸ್ನಾಯುವಿನ ವಯಸ್ಸನ್ನು ಹೇಳುತ್ತದೆ. ಉದಾಹರಣೆಗೆ, 40 ರಿಂದ 50 ವರ್ಷಗಳ ಸ್ನಾಯು ವಯಸ್ಸಿನ ಪುರುಷರಿಗೆ ಇದು ಸುಮಾರು 6.8 ರಿಂದ 7.5 ಸೆಕೆಂಡುಗಳು ಹಿಡಿಯುತ್ತದೆ ಮತ್ತು ಮಹಿಳೆಯರಿಗೆ, ಪರೀಕ್ಷೆಯನ್ನು ಮಾಡಲು ಹಿಡಿಯುವ ಸಮಯವು 6.9 ರಿಂದ 7.4 ಸೆಕೆಂಡುಗಳಾಗಿರಬೇಕು. ಕುರ್ಚಿ ಸವಾಲು ಪರೀಕ್ಷೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, www.muscleagetest.in ಗೆ ಭೇಟಿ ನೀಡಬಹುದು. ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ದೈನಂದಿನ ಜೀವನದಲ್ಲಿ ಉತ್ತಮ ಪೋಷಣೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಸಹ ಅಗತ್ಯವಾಗಿದೆ.
ಇದನ್ನೂ ಓದಿ: ಇನ್ಮುಂದೆ UPI ಆಧರಿತ ವಹಿವಾಟಿಗೆ ಬೀಳಲಿದೆಯಾ ಶುಲ್ಕ! ಎಷ್ಟಾಗಬಹುದು ಚಾರ್ಜ್?
ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುವ ಸಮತೋಲಿತ ಆಹಾರಪದ್ಧತಿಯನ್ನು ಕಾಪಾಡಿಕೊಳ್ಳಿ. ಸಾಕಷ್ಟು ಪ್ರೋಟೀನ್-ಭರಿತ ಆಹಾರಗಳಾದ ಕೋಳಿ, ಸಮುದ್ರಾಹಾರ, ಮೊಟ್ಟೆ, ಬೀಜಗಳು, ಬೀನ್ಸ್ ಅಥವಾ ಹಾಲಿನ ಪದಾರ್ಥಗಳನ್ನು ಸೇವಿಸಿ. ವಯಸ್ಕರು ಪ್ರತಿ ಪ್ರಮುಖ ಊಟಕ್ಕೆ ಸುಮಾರು 15 ರಿಂದ 20 ಗ್ರಾಂ ಪ್ರೋಟೀನ್ ಸೇವನೆಯ ಗುರಿಯನ್ನು ಹೊಂದಿರಬೇಕು. ಆದಾಗ್ಯೂ, 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ - ವಿಶೇಷವಾಗಿ ಆರೋಗ್ಯದ ತೊಂದರೆ ಇರುವವರಿಗೆ - ಕಿರಿಯ ವಯಸ್ಕರಿಗಿಂತ ಹೆಚ್ಚು ಪ್ರೋಟೀನ್ ಬೇಕಾಗಬಹುದು.
ವಿಟಮಿನ್ ಸಿ, ಸತು, ವಿಟಮಿನ್ ಇ, ವಿಟಮಿನ್ ಎ ಮತ್ತು ವಿಟಮಿನ್ ಡಿ ಯಂತಹ ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿರುವ ಗುಣಮಟ್ಟದ ಆಹಾರಗಳಿಗೆ ಆದ್ಯತೆ ನೀಡಿ. ಸ್ನಾಯು ಮತ್ತು ರೋಗನಿರೋಧಕ ಆರೋಗ್ಯವನ್ನು ಸಮರ್ಪಕವಾಗಿ ಬೆಂಬಲಿಸಲು ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯಲು ಸದಾ ಸುಲಭವಲ್ಲ. ದೀರ್ಘಕಾಲದ ಕಾಯಿಲೆಗಳಿರುವ ಜನರಿಗೆ ಇದು ಇನ್ನೂ ದೊಡ್ಡ ಸವಾಲಾಗಿದೆ, ಅವರು ತಮ್ಮ ಔಷಧಿಗಳು ಮತ್ತು ದಿನಚರಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಮತ್ತು ಊಟ ಮತ್ತು ತಿಂಡಿಗಳ ವಿಷಯಕ್ಕೆ ಬಂದಾಗ ಅವರು ಮುಂದೆ ಯೋಜಿಸಲು ಸಾಕಷ್ಟು ಸಮಯವಿಲ್ಲ ಎಂದು ಭಾವಿಸುತ್ತಾರೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗಳು -ಆರೋಗ್ಯಕರ ಜೀವನಶೈಲಿಯ ಕಾರ್ಯಕ್ರಮದ ಭಾಗವಾಗಿ ರೋಗ-ನಿರ್ದಿಷ್ಟ ಪೌಷ್ಟಿಕಾಂಶದ ಪೂರಕಗಳನ್ನು ಆಯ್ಕೆ ಮಾಡಬಹುದು - ಇದು ಆ ಅಂತರವನ್ನು ಕಡಿಮೆ ಮಾಡಲು ಮತ್ತು ಸರಿಯಾದ ಪೋಷಕಾಂಶಗಳ ಸೇವನೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
( ಲೇಖಕರು - Dr. Irfan Shaikh, Head Adult Nutrition, Scientific & Medical Affairs, Abbott's Nutrition business )
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.