Social Media On Mental Health: ವಿಶ್ವದ ಜನಸಂಖ್ಯೆಯ ಸುಮಾರು ಶೇಕಡಾ 62.3ರಷ್ಟು ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಭಾರತದಲ್ಲಿ 800 ದಶಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. ಸರಾಸರಿ ದೈನಂದಿನ ಬಳಕೆ ಎರಡು ಗಂಟೆ ಇಪ್ಪತ್ತಮೂರು ನಿಮಿಷಗಳಷ್ಟಿದೆ. ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಮತ್ತು ಅವರ ಚಟುವಟಿಕೆಗಳನ್ನು ನೋಡುವುದರಿಂದ ನಾವು ಜಗತ್ತಿನಾದ್ಯಂತ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಬಹುದು. ಆದರೆ, ಇದರ ಹಿಂದೆ ಕರಾಳ ಮುಖವೂ ಇದೆ. ಈ ಬಗ್ಗೆ ಡಾ. ಪೂನಂ ಸಂತೋಷ್, ಕನ್ಸಲ್ಟೆಂಟ್ ಮನೋವೈದ್ಯರು, ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಮಂಗಳೂರು ಇವರು ಸಲಹೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಡಾ. ಪೂನಂ ಸಂತೋಷ್ ಅವರು ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು, ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ... 


ಮಾನಸಿಕ ಆರೋಗ್ಯದ ಮೇಲೆ ಸೋಷಿಯಲ್ ಮೀಡಿಯಾ ಪರಿಣಾಮಗಳು: 
1. ಸಾಮಾಜಿಕ ಮಾಧ್ಯಮದ ಬಳಕೆಯು ನಮ್ಮಲ್ಲಿ ಕೊರತೆ/ಅಸಮರ್ಪಕತೆ ಮತ್ತು ಖಿನ್ನತೆಯ ಭಾವನೆಗಳನ್ನು ಉಂಟುಮಾಡಬಹುದು. ವಿಶೇಷವಾಗಿ ಹದಿಹರೆಯದವರು ಮತ್ತು ಯುವಜನತೆಯಲ್ಲಿ ಇದು ಹೆಚ್ಚು. ಸಾಮಾಜಿಕ ಮಾಧ್ಯಮವು ಮೆದುಳಿನ ಮೇಲೆ ʻಪ್ರತಿಫಲʼದ ಪರಿಣಾಮವನ್ನು ಬೀರುತ್ತದೆ, ʻಡೋಪಮೈನ್ʼ ಅಥವಾ ʻಫೀಲ್ ಗುಡ್ʼ ರಾಸಾಯನಿಕವನ್ನು ಬಿಡುಗಡೆಗೊಳಿಸುವ ಮೂಲಕ ಅದನ್ನು ವ್ಯಸನವಾಗಿ ಮಾಡುತ್ತದೆ. ನಾವು ಏನನ್ನಾದರೂ ಪೋಸ್ಟ್ ಮಾಡಿದಾಗ, ನಮ್ಮ ಸ್ನೇಹಿತರು ಮತ್ತು ಕುಟುಂಬದವರು ಅದನ್ನು ʻಲೈಕ್‌ʼ ಮಾಡುವ ಮೂಲಕ ʻಡೋಪಮೈನ್ʼ ಸ್ರವಿಸುವಿಕೆಗೆ ಉತ್ತೇಜನ ದೊರೆಯುತ್ತದೆ. ಆದರೆ ʻಲೈಕ್‌ʼ ಬರದಿದ್ದಾಗ, ಅದು ನಮ್ಮ ಸ್ವಯಂಪ್ರಜ್ಞೆ ಮತ್ತು ಸಮರ್ಪಕತೆಯ ಮೇಲೆ ಪರಿಣಾಮ ಬೀರಬಹುದು. ಹೆಚ್ಚುತ್ತಿರುವ ಕ್ಷುಲ್ಲಕ ಡಿಜಿಟಲ್ ಸಂವಹನಗಳಿಂದಾಗಿ ನಿಜ ಜೀವನದ ಸಂವಹನವು ಸೀಮಿತವಾಗುತ್ತದೆ, ಇದು ಒಂಟಿತನ, ಖಿನ್ನತೆ ಮತ್ತು ಆತ್ಮಹತ್ಯೆಯ ನಡವಳಿಕೆಗಳಿಗೆ ಕಾರಣವಾಗುತ್ತದೆ.


2. ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯು ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಕಡಿಮೆ ಮಾಡುತ್ತದೆ. 


3. ʻಎಫ್ಒಎಂಒʼ ಅಥವಾ ʻಫಿಯರ್‌ ಆಫ್‌ ಮಿಸ್ಸಿಂಗ್ ಔಟ್ʼ(ನನಗೆ ಗೊತ್ತಾಗದೆ ಹೋಗಬಹುದೆಂಬ ಭೀತಿ) ಎಂಬುದು ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ವಿಶಿಷ್ಟ ಪದವಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕಂಡುಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ನಿರಂತರವಾಗಿ ಪರಿಶೀಲಿಸಲು ಮತ್ತು ಪದೇಪದೇ ವೆಬ್‌ಸೈಟ್‌ಗಳನ್ನು ಜಾಲಾಡಲು ಈ ಭೀತಿಯು (ಎಫ್ಒಎಂಒ) ಬಳಕೆದಾರರನ್ನು ಒತ್ತಾಯಿಸಬಹುದು. ಅವರು ಇತರ ಬಳಕೆದಾರರ ಜೀವನದ ಅತ್ಯುತ್ತಮ, ಸಂತೋಷದ ಘಟನೆಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತಾರೆ. ಇದು ಅವರಲ್ಲಿ ಆತಂಕ, ಸ್ವಾಭಿಮಾನ ಕೊರತೆ, ಅಸಮರ್ಪಕತೆಯ ಭಾವನೆಗಳ ಲಕ್ಷಣಗಳನ್ನು ಪ್ರಚೋದಿಸುತ್ತದೆ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ. 


4. ʻಸೈಬರ್ ಬೆದರಿಕೆʼ(ಸೈಬರ್‌ ಬುಲ್ಲಿಯಿಂಗ್‌) ಎಂದರೆ ಯಾರಾದರೂ ಎಲೆಕ್ಟ್ರಾನಿಕ್ ಸಾಧನದ ಮೂಲಕ ಇನ್ನೊಬ್ಬ ವ್ಯಕ್ತಿಗೆ ಪದೇ ಪದೇ ಮತ್ತು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವುದು, ಕೆಟ್ಟದಾಗಿ ನಡೆಸಿಕೊಳ್ಳುವುದು ಅಥವಾ ಗೇಲಿ ಮಾಡುವುದು. ಇದು ಮಾನಸಿಕ ಆರೋಗ್ಯ ಮತ್ತು ಸ್ವಾಭಿಮಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸಾಮಾಜಿಕ ನೆಟ್‌ವರ್ಕಿಂಗ್‌ ತಾಣಗಳು ಹಾನಿಕಾರಕ ವದಂತಿ, ತಪ್ಪುಮಾಹಿತಿ ಪ್ರಸಾರ, ನಿಂದನೆ ಮತ್ತು ಸೈಬರ್ ಬೆದರಿಕೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಬಹುದು. ಈ ಅನುಭವಗಳು ದೀರ್ಘಕಾಲೀನ ಮಾನಸಿಕ ಹಾನಿಗೆ ಕಾರಣವಾಗಬಹುದು. 


ಇದನ್ನೂ ಓದಿ- ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗುಪ್ತ ಅಪಾಯಗಳ ಬಗ್ಗೆ ವೈದ್ಯರು ಏನ್ ಹೇಳ್ತಾರೆ..!


5. ಫಿಲ್ಟರ್ ಬಬಲ್ಸ್‌: 
ಸಾಮಾಜಿಕ ಮಾಧ್ಯಮ ಅಲ್ಗರಿಥಂಗಳು ʻಫಿಲ್ಟರ್ ಬಬಲ್ಸ್‌ʼ ಸೃಷ್ಟಿಸುತ್ತವೆ. ಈ ʻಫಿಲ್ಟರ್ ಬಬಲ್ಸ್‌ʼನಿಂದಾಗಿ ವ್ಯಕ್ತಿಯೊಬ್ಬ ತಾನು ಆಸಕ್ತಿ ತೋರುವ ಅದೇ ವಿಷಯಕ್ಕೆ ಪದೇ ಪದೇ ಒಡ್ಡಿಕೊಳ್ಳುತ್ತಾನೆ. ಆತನು ಪದೇ ಪದೇ ನೋಡಿದ ವಿಷಯಗಳ ಆಧಾರದ ಮೇಲೆ ಆತ ಪಕ್ಷಪಾತದ ಅಭಿಪ್ರಾಯಗಳನ್ನು ತಳೆಯಬಹುದು ಮತ್ತು ಪರ್ಯಾಯ ಆಲೋಚನೆಗಳಿಗೆ ಮುಕ್ತವಾಗಿಲ್ಲದೇ ಇರಬಹುದು. 


6. ನಿದ್ರೆಯ ಚಕ್ರದ ಬದಲಾವಣೆಗಳು: 
ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯು ನಿದ್ರೆಯ ಚಕ್ರದಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು. ನಿದ್ರೆಯ ಮಾದರಿ ಮತ್ತು ಲಯದಲ್ಲಿನ ಅಡಚಣೆಯು ತಲೆನೋವು, ಕಿರಿಕಿರಿ ಮತ್ತು ದೇಹದ ನೋವುಗಳಿಗೆ ಕಾರಣವಾಗಬಹುದು. 


ಸಾಮಾಜಿಕ ಮಾಧ್ಯಮ ಬಳಕೆಯೊಂದಿಗೆ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ?
1. ಸಾಮಾಜಿಕ ಮಾಧ್ಯಮ ವಿಷಯಗಳನ್ನು ಅನಗತ್ಯವಾಗಿ ಸ್ಕ್ರಾಲ್ ಮಾಡುವುದನ್ನು ತಪ್ಪಿಸಿ.  ಸಾಮಾಜಿಕ ಮಾಧ್ಯಮ ಬಳಕೆಗೆ ಸಮಯ ಮಿತಿಗಳನ್ನು ನಿಗದಿಪಡಿಸಿ: ಇದನ್ನು ಮಾಡಲು ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್ಸ್ ಅಪ್ಲಿಕೇಶನ್ ಬಳಸಿ. ಸಾಮಾಜಿಕ ಮಾಧ್ಯಮವನ್ನು ಜಾಲಾಡಲು ಗೊತ್ತುಪಡಿಸಿದ ಸಮಯವನ್ನು ಮಾತ್ರ ಬಳಸಿ


2. ನಿಮ್ಮ ಫೀಡ್ ಅನ್ನು ಆಯ್ಕೆ ಮಾಡಿ: ಸಕಾರಾತ್ಮಕತೆ ಮತ್ತು ಸ್ಫೂರ್ತಿಯನ್ನು ಉತ್ತೇಜಿಸುವ ವಿಷಯ ಅಥವಾ ಪೋಸ್ಟ್‌ಗನ್ನು ಅನುಸರಿಸಿ. ನಕಾರಾತ್ಮಕತೆಯನ್ನು ಭಿತ್ತುವ ಮತ್ತು ನಕಾರಾತ್ಮಕ ಭಾವನೆಗಳನ್ನು ಉಂಟು ಮಾಡುವ ಕಂಟೆಂಟ್‌ ಅನ್ನು ಅನ್ ಫಾಲೋ ಮಾಡಿ.  


3. ಹೋಲಿಕೆಗೆ ಕಡಿವಾಣ: ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಅತ್ಯುತ್ತಮ ಆವೃತ್ತಿಯನ್ನು ಬಿಂಬಿಸುತ್ತಾರೆ, ಇದು ಆ ವ್ಯಕ್ತಿಯ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತದೆ.


ಇದನ್ನೂ ಓದಿ- ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ? ವೈದ್ಯರು ಏನ್ ಹೇಳ್ತಾರೆ?​


4. ನಿಯಮಿತವಾಗಿ ಸಾಮಾಜಿಕ ಮಾಧ್ಯಮ ಮತ್ತು ಸ್ಕ್ರಿನ್‌ ಟೈಮ್‌ನಿಂದ ದೂರವಿರಿ. ʻಸ್ಕ್ರೀನ್ ಡಿಟಾಕ್ಸ್ʼ ದಿನಗಳು ಅಥವಾ ವಾರಾಂತ್ಯಗಳನ್ನು ನಿಗದಿಪಡಿಸಿ. ಪ್ರಕೃತಿಯಲ್ಲಿ ಸಮಯ ಕಳೆಯಿರಿ.


5. ನಿಜ ಜೀವನದ ಸಂಪರ್ಕಗಳಿಗೆ ಆದ್ಯತೆ ನೀಡಿ. ನಿಜ ಜೀವನದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ.


6. ಪೌಷ್ಟಿಕ ಆಹಾರ, ಸಾಕಷ್ಟು ದೈಹಿಕ ವ್ಯಾಯಾಮ, ಉಲ್ಲಾಸಕರ ನಿದ್ರೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಇತ್ಯಾದಿ ಸ್ವಯಂ ಆರೈಕೆಗೆ ಆದ್ಯತೆ ನೀಡಿ. 


ಸೋಷಿಯಲ್ ಮೀಡಿಯಾ ಒಂದು ಎರಡಂಚಿನ ಕತ್ತಿ. ಅದನ್ನು ಜಾಣ್ಮೆಯಿಂದ ಬಳಸಿ. ಸಾಮಾಜಿಕ ಮಾಧ್ಯಮದ ಬಳಕೆಯು ನಿಮ್ಮ ಕೈ ಮೀರಿದೆ ಮತ್ತು ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಅಡಚಣೆಯಾಗುತ್ತಿದೆ ಎಂದು ನೀವು ಭಾವಿಸಿದರೆ, ದಯವಿಟ್ಟು ವೃತ್ತಿಪರರ ಸಹಾಯವನ್ನು ಪಡೆಯಿರಿ. 


ಭಾರತದಲ್ಲಿ 800 ದಶಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. ಸರಾಸರಿ ದೈನಂದಿನ ಬಳಕೆ ಎರಡು ಗಂಟೆ ಇಪ್ಪತ್ತಮೂರು ನಿಮಿಷಗಳಷ್ಟಿದೆ. ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಮತ್ತು ಅವರ ಚಟುವಟಿಕೆಗಳನ್ನು ನೋಡುವುದರಿಂದ ನಾವು ಜಗತ್ತಿನಾದ್ಯಂತ ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂಬ ಭಾವನೆ ನಮ್ಮಲ್ಲಿ ಮೂಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.