ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ? ವೈದ್ಯರು ಏನ್ ಹೇಳ್ತಾರೆ?

Calcium Deficiency: ಕ್ಯಾಲ್ಸಿಯಂ ಕೊರತೆಯು ನೇರವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸದಿದ್ದರೂ, ಇದು ಇತರ ಗಂಭೀರ ಹೃದಯ ಸಂಬಂಧಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು. 

Written by - Yashaswini V | Last Updated : Aug 27, 2024, 01:32 PM IST
  • ಕ್ಯಾಲ್ಸಿಯಂ ಪೂರೈಕೆ ಮತ್ತು ಹೃದಯಾಘಾತದ ಅಪಾಯದ ನಡುವಿನ ಸಂಬಂಧವು ಸಂಕೀರ್ಣವಾಗಿದೆ ಮತ್ತು ಸ್ವಲ್ಪ ವಿವಾದಾತ್ಮಕವಾಗಿದೆ.
  • ಕೆಲವು ಅಧ್ಯಯನಗಳು ಕ್ಯಾಲ್ಸಿಯಂ ಪೂರಕ ಸೇವನೆ ಮತ್ತು ಹೃದಯಾಘಾತದ ಅಪಾಯದ ನಡುವಿನ ಸಂಬಂಧವನ್ನು ಎತ್ತಿ ತೋರಿಸಿವೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ? ವೈದ್ಯರು ಏನ್ ಹೇಳ್ತಾರೆ?  title=

Calcium Deficiency Heart Attack Risk: ಹೃದಯದ ಆರೋಗ್ಯದಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಹೃದಯ ಸ್ನಾಯುಗಳ ಸಂಕೋಚನ (cardiac muscle contraction) ಮತ್ತು ಹೃದಯದ ಲಯವನ್ನು (cardiac rhythm) ನಿಯಂತ್ರಿಸುವ ವಿದ್ಯುತ್ ಪ್ರಚೋದನೆಗಳ ವಹನದಲ್ಲಿ (cardiac conductivity) ಪಾತ್ರವಹಿಸುತ್ತದೆ. ಹೈಪೋಕಾಲ್ಸೆಮಿಯಾ ಎಂದು ಕರೆಯಲ್ಪಡುವ ಕ್ಯಾಲ್ಸಿಯಂ ಕೊರತೆಯು ಹೃದಯದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ, ಅದರಲ್ಲೂ ವಿಶೇಷವಾಗಿ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ.

ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಹೃದಯಾಘಾತದ ಅಪಾಯ ಹೆಚ್ಚಿಸಬಹುದೇ?  ಎಂಬ ಬಗ್ಗೆ ಬೆಂಗಳೂರಿನ ವೈಟ್‌ಫೀಲ್ಡ್ ನಲ್ಲಿರುವ ಮಣಿಪಾಲ ಆಸ್ಪತ್ರೆಯ ಡಾ. ಪ್ರದೀಪ್ ಹಾರನಹಳ್ಳಿ, ಕನ್ಸಲ್ಟೆಂಟ್ - ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಈ ಕುರಿತಂತೆ ವಿವರವಾದ ಮಾಹಿತಿ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ... 

ಕ್ಯಾಲ್ಸಿಯಂ ಕೊರತೆ ಮತ್ತು ಹೃದಯದ ಆರೋಗ್ಯ!
ಕ್ಯಾಲ್ಸಿಯಂ ಕೊರತೆಯು ನೇರವಾಗಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸದಿದ್ದರೂ, ಇದು ಇತರ ಗಂಭೀರ ಹೃದಯ ಸಂಬಂಧಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಉದಾಹರಣೆಗೆ, ವಯಸ್ಸಾದ ವ್ಯಕ್ತಿಗಳಲ್ಲಿ, ಕ್ಯಾಲ್ಸಿಯಂ ಕೊರತೆಯು ರಕ್ತ ಕಟ್ಟಿ ಹೃದಯ ಸ್ಥಂಭನ (Congestive heart failure) ಅಪಾಯವನ್ನು ಹೆಚ್ಚಿಸುತ್ತದೆ. ಹೃದಯ ಸ್ನಾಯು ತುಂಬಾ ದುರ್ಬಲವಾದಾಗ ಅಥವಾ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲು ಅಶಕ್ತವಾದಾಗ ಈ ಸ್ಥಿತಿಯು ಸಂಭವಿಸುತ್ತದೆ, ಇದು ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳಲ್ಲಿ ದ್ರವದ ಸಂಗ್ರಹಕ್ಕೆ ಕಾರಣವಾಗುತ್ತದೆ. ರಕ್ತ ಕಟ್ಟಿ ಹೃದಯ ಸ್ಥಂಭನ ಕಾರಣ ತಿಳಿದಿಲ್ಲದ ಸಂದರ್ಭಗಳಲ್ಲಿ, ಹೈಪೋಕಾಲ್ಸೆಮಿಯಾವನ್ನು ಸಂಭಾವ್ಯ ಅಂಶವಾಗಿ ಪರಿಗಣಿಸುವುದು ಮುಖ್ಯ.

ಇದನ್ನೂ ಓದಿ- ಮಾನ್ಸೂನ್‌ನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಪ್ಪಿಸುವುದು ಹೇಗೆ?

ಕ್ಯಾಲ್ಸಿಯಂ ಹೃದಯ ಸ್ನಾಯುವಿನ ಸರಿಯಾದ ಸಂಕೋಚನ ಮತ್ತು ವಿದ್ಯುತ್ ಸಂಕೇತಗಳ ಸುಗಮ ಪ್ರಸರಣವನ್ನು ಖಾತ್ರಿಪಡಿಸುವ ಪ್ರಮುಖ ಅಯಾನು ಆಗಿರುವುದರಿಂದ, ಅದರ ಕೊರತೆಯು ಹೃದಯದ ಸಾಮಾನ್ಯ ಲಯವನ್ನು ಕೂಡ ಅಡ್ಡಿಪಡಿಸುತ್ತದೆ, ಇದು ಅನಿಯಮಿತ ಹೃದಯ ಬಡಿತಗಳು (cardiac arrhythmia) ಗೆ ಕಾರಣವಾಗುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಹಠಾತ್ ಹೃದಯದ ಸಾವಿಗೆ (sudden cardiac death) ಕೂಡ ಕಾರಣವಾಗಬಹುದು.

ಕ್ಯಾಲ್ಸಿಯಂ ಪೂರಕಗಳು (calcium supplements) ಮತ್ತು ಹೃದಯಾಘಾತದ ಅಪಾಯ: 
ಕ್ಯಾಲ್ಸಿಯಂ ಪೂರೈಕೆ ಮತ್ತು ಹೃದಯಾಘಾತದ ಅಪಾಯದ ನಡುವಿನ ಸಂಬಂಧವು ಸಂಕೀರ್ಣವಾಗಿದೆ ಮತ್ತು ಸ್ವಲ್ಪ ವಿವಾದಾತ್ಮಕವಾಗಿದೆ. ಕೆಲವು ಅಧ್ಯಯನಗಳು ಕ್ಯಾಲ್ಸಿಯಂ ಪೂರಕ ಸೇವನೆ ಮತ್ತು ಹೃದಯಾಘಾತದ ಅಪಾಯದ ನಡುವಿನ ಸಂಬಂಧವನ್ನು ಎತ್ತಿ ತೋರಿಸಿವೆ. ಇನ್ನು, ಕೆಲವು ಅಧ್ಯಯನಗಳು ಈ ಸಂಬಂಧವನ್ನು ನಿರಾಕರಿಸುತ್ತವೆ. 

ಇದನ್ನೂ ಓದಿ- Ghee Benefits: ನಿತ್ಯ ಒಂದು ಚಮಚ ತುಪ್ಪ ತಿನ್ನುವುದರಿಂದ ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು!

ಕ್ಯಾಲ್ಸಿಯಂ ಪೂರಕಗಳ ಪ್ರಯೋಜನಗಳು: 
ಸಂಭಾವ್ಯ ಅಪಾಯಗಳ ಹೊರತಾಗಿಯೂ, ಕ್ಯಾಲ್ಸಿಯಂ ಪೂರಕಗಳು ಕೆಲವು ಜನರಲ್ಲಿ, ವಿಶೇಷವಾಗಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಪ್ರಯೋಜನಕಾರಿ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಈ ಮಹಿಳೆಯರಲ್ಲಿ, ಕ್ಯಾಲ್ಸಿಯಂ ಪೂರೈಕೆಯು ಹೃದಯ ಸಂಬಂಧಿ ಕಾರಣಗಳಿಂದಾಗುವ ಮರಣಗಳ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಇದು ಮೂಳೆಯ ಆರೋಗ್ಯವನ್ನು ಮತ್ತು ಮುರಿತಗಳನ್ನು ತಡೆಗಟ್ಟುವಲ್ಲಿ ಸಹಕರಿಸುತ್ತದೆ. ಆದರೆ ಕ್ಯಾಲ್ಸಿಯಂ ಪೂರಕಗಳ ಪ್ರಯೋಜನಗಳನ್ನು ಪುರುಷರಲ್ಲಿ ಸ್ಪಷ್ಟವಾಗಿ ಸ್ಥಾಪಿಸಲಾಗಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಕ್ಯಾಲ್ಸಿಯಂ ಕೊರತೆಯು ಹೃದಯದ ಆರೋಗ್ಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ರಕ್ತ ಕಟ್ಟಿ ಹೃದಯ ಸ್ಥಂಭನ (Congestive heart failure)  ಮತ್ತು ಹಠಾತ್ ಹೃದಯ ಸಾವಿನ (sudden cardiac death) ವಿಷಯದಲ್ಲಿ ಪಾತ್ರವಹಿಸುತ್ತದೆ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುವಲ್ಲಿ ಕ್ಯಾಲ್ಸಿಯಂ ಪೂರಕಗಳ ಪಾತ್ರವು ಚರ್ಚೆಯ ವಿಷಯವಾಗಿದೆ. ಕ್ಯಾಲ್ಸಿಯಂ ಪೂರೈಕೆಯ ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳು ವಯಸ್ಸು, ಲಿಂಗ ಮತ್ತು ಒಟ್ಟಾರೆ ಆರೋಗ್ಯ ಸ್ಥಿತಿಯಂತಹ ವೈಯಕ್ತಿಕ ಅಂಶಗಳನ್ನು ಅವಲಂಬಿಸಿ ಬದಲಾಗಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News