ಚಳಿಗಾಲದಲ್ಲಿ ಮಧುಮೇಹ ರೋಗಿಗಳು ಈ ರೀತಿ ಕಾಳಜಿ ವಹಿಸಿದರೆ ತಪ್ಪುವುದು ಅನಾಹುತ .!
ಮಧುಮೇಹ ರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಸವಾಲೇ ಸರಿ. ಮಧುಮೇಹ ರೋಗಿಗಳು ಈ ರೀತಿಯಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಬೆಂಗಳೂರು : ಚಳಿಗಾಲದಲ್ಲಿ ಜನರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳೆಂದರೆ ಶೀತ, ಕೆಮ್ಮು, ಜ್ವರ. ಹೀಗಿರುವಾಗ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯವಾಗಿರುತ್ತದೆ. ಬದಲಾಗುತ್ತಿರುವ ಋತುವಿಗೆ ಅನುಗುಣವಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಜನರು ವಿಧದ ಕಷಾಯಗಳು, ತರಕಾರಿಗಳು, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಸವಾಲೇ ಸರಿ.
ಮಧುಮೇಹ ರೋಗಿಗಳು ಈ ರೀತಿಯಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು :
ಒತ್ತಡವನ್ನು ನಿಯಂತ್ರಿಸಿ : ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಲು ಒತ್ತಡ ಕೂಡಾ ಪ್ರಮುಖ ಕಾರಣ. ಒತ್ತಡದಿಂದಾಗಿ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹೀಗಾದಾಗ ಇಡೀ ದೇಹದ ಸಮತೋಲನವೇ ಹಾಳಾಗುತ್ತದೆ. ಇದೇ ಕಾರಣಕ್ಕೆ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮಧುಮೇಹ ರೋಗಿಗಳು ಸ್ನೇಹಿತರೊಂದಿಗೆ ಮಾತನಾಡುವುದು, ಯೋಗ, ಪುಸ್ತಕಗಳನ್ನು ಓದುವುದು ಇಂಥಹ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಒತ್ತಡ ಕಡಿಮೆಯಾದಷ್ಟೂ ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಯಂತ್ರಣದಲ್ಲಿರುತ್ತದೆ.
ಇದನ್ನೂ ಓದಿ : Peanuts Benefits: ಗೋಡಂಬಿ-ಬಾದಾಮಿ ತಿಂದಷ್ಟೇ ಪ್ರಯೋಜನ ನೀಡುತ್ತೆ ಕಡಲೆಬೀಜ
ವ್ಯಾಯಾಮ ಮಾಡಿ : ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಯಾಮ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ, ಮನೆಯ ಒಳಗೆಯೇ ನಡೆದಾಡಬಹುದು. ಆದರೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ವ್ಯಾಯಾಮ ಮಾಡುವುದು ಬಹಳ ಮುಖ್ಯ.
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು :
ಚಳಿಗಾಲದಲ್ಲಿ, ದಾಹ ಕಡಿಮೆ. ಹಾಗಾಗಿ ಜನರು ಕಡಿಮೆ ಪ್ರಮಾಣದ ನೀರನ್ನು ಕುಡಿಯುತ್ತಾರೆ. ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಸಾಕಷ್ಟು ನೀರು ಕುಡಿಯದ ಕಾರಣ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
ಇದನ್ನೂ ಓದಿ : Bad Cholesterol Control: ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯದಿಂದ ಪಾರಾಗಲು ಈ ಎಣ್ಣೆ ರಾಮಬಾಣ
ಸಾಕಷ್ಟು ನಿದ್ರೆ : ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಬಾರದು ಎನ್ನುವುದಾದರೆ ದಿನಕ್ಕೆ 5 ಗಂಟೆಗಳ ಕಾಲ ನಿದ್ರೆ ಮಾಡಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.