ಬೆಂಗಳೂರು: ಋತುಚಕ್ರದ ಸಮಯದಲ್ಲಿ ಯಾವುದನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಎಂಬುದನ್ನು ತಿಳಿಯುವುದು ಬಹಳ ಅವಶ್ಯಕ. ಈ ಸಮಯದಲ್ಲಿ ಬಹಳಷ್ಟು ನಿಮ್ಮ ಆಹಾರವನ್ನು ಅವಲಂಬಿಸಿರುತ್ತದೆ. ಈ ಸಮಯದಲ್ಲಿ, ಮಹಿಳೆಯರು ಆಯಾಸ ಮತ್ತು ನೋವಿನಿಂದ ಬಳಲುತ್ತಿರುತ್ತಾರೆ. ಕೆಲವು ಮಹಿಳೆಯರಿಗೆ ಈ ನೋವನ್ನು ತಡೆಯುವುದು ಕಷ್ಟವಾಗಬಹುದು. ಕೆಲವರಿಗೆ ಕೋಪವೂ ಹೆಚ್ಚಾಗಬಹುದು. ಈ ಸಮಯದಲ್ಲಿ ತಲೆತಿರುಗುವಿಕೆ, ಆಯಾಸ ಮತ್ತು ಸೆಳೆತಗಳು ಸಾಮಾನ್ಯ. ಆದ್ದರಿಂದ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ನೀವು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು. ಸರಿಯಾದ ಆಹಾರವನ್ನು ತೆಗೆದುಕೊಳ್ಳುವ ಮೂಲಕ, ಸೆಳೆತ ಕಡಿಮೆಯಾಗುತ್ತದೆ ಮತ್ತು ಇತರ ಸಮಸ್ಯೆಗಳನ್ನು ಕಡಿಮೆಗೊಳಿಸಲಾಗುತ್ತದೆ. ಸರಿಯಾದ ಆಹಾರ ತೆಗೆದುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.


COMMERCIAL BREAK
SCROLL TO CONTINUE READING

ಕಲ್ಲಂಗಡಿ: ಈ ಸಮಯದಲ್ಲಿ ನೀವು ನಿಮ್ಮ ಆಹಾರಕ್ಕೆ ಕಲ್ಲಂಗಡಿ, ಮೊಸರು, ಕಿತ್ತಳೆ, ಬಾದಾಮಿ ಮತ್ತು ಡಾರ್ಕ್ ಚಾಕೊಲೇಟ್ ಅನ್ನು ಸೇರಿಸಬಹುದು. ಕಲ್ಲಂಗಡಿ ಸೇವನೆಯಿಂದ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ದೇಹದಲ್ಲಿನ ಸಕ್ಕರೆ ಪ್ರಮಾಣ ಕೂಡ ನಿಯಂತ್ರಣದಲ್ಲಿರಲು ಸಹಾಯವಾಗುತ್ತದೆ.


ಮೊಸರು: ಮೊಸರಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇದೆ. ಮೂಳೆಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಈ ಅವಧಿಯಲ್ಲಿ, ಮೊಸರು ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ನಿರ್ದಿಷ್ಟ ಪ್ರಮಾಣದಲ್ಲಿರಲು ಸಹಾಯವಾಗುತ್ತದೆ. ಅಲ್ಲದೆ, ಸೆಳೆತವನ್ನೂ ಕೂಡ ಅದು ಕಡಿಮೆಮಾಡುತ್ತದೆ.


ಈ ಅವಧಿಯಲ್ಲಿ ಚಹಾ ಸೇವನೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ. ಇದು ಸ್ನಾಯುಗಳಿಗೆ ಪರಿಹಾರವನ್ನು ನೀಡುತ್ತದೆ. ಸೆಳೆತವನ್ನು ಕಡಿಮೆಗೊಳಿಸುತ್ತದೆ. ಚಹಾವನ್ನು ಕುಡಿಯುವ ಮೂಲಕ ಹಾರ್ಮೊನ್ ಬದಲಾವಣೆಯ ನಿಯಂತ್ರಣದಲ್ಲಿ ಉಳಿಯುತ್ತದೆ.


ಡಾರ್ಕ್ ಚಾಕೊಲೇಟ್: ಋತು ಚಕ್ರದ ಸಮಯದಲ್ಲಿ ಡಾರ್ಕ್ ಚಾಕೊಲೇಟ್ ತಿನ್ನುವುದು ಬಹಳ ಪ್ರಯೋಜನಕಾರಿಯಾಗಿದೆ. ಇದು ವಿರೋಧಿ ಆಕ್ಸಿಡೆಂಟ್ ಸಿರೊಟೋನಿನ್ ಅನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಶಾಂತವಾಗಿರಿಸುತ್ತದೆ.


ಇದಲ್ಲದೆ, ಈ ಅವಧಿಯಲ್ಲಿ, ಜೀವಸತ್ವಗಳು ಮತ್ತು ಕಬ್ಬಿಣಾಂಶವುಳ್ಳ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು. ಈ ಅವಧಿಯಲ್ಲಿ ಕೆಫೀನ್ ಅನ್ನು ತಪ್ಪಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಆಸಿಡ್ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನೋವು ಹೆಚ್ಚುತ್ತದೆ.