Dengue ಜ್ವರ ಇದ್ದಾಗ ಈ ತರಕಾರಿಗಳ ಸೇವನೆಯಿಂದ ಶೀಘ್ರದಲ್ಲೇ ಸಿಗುತ್ತೆ ಪರಿಹಾರ
Dengue Fever: ವಾತಾವರಣ ಬದಲಾದಂತೆ ನೆಗಡಿ, ಕೆಮ್ಮು, ಜ್ವರ ಸರ್ವೇ ಸಾಮಾನ್ಯ. ಆದರೆ, ಕೆಲವೊಮ್ಮೆ ಇವುಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಆರೋಗ್ಯವನ್ನು ಉಲ್ಬಣಿಸಬಹುದು.
Dengue Fever: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಡೆಂಗ್ಯೂ ಜ್ವರ ಬಂದಾಗ ದೇಹದಲ್ಲಿ ಬಿಳಿ ರಕ್ತಕಣಗಳು ಎಂದರೆ ಪ್ಲೇಟ್ಲೆಟ್ ಎಣಿಕೆ ಗಣನೀಯವಾಗಿ ಕಡಿಮೆ ಆಗುತ್ತದೆ. ಈ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಇದು ಮಾರಣಾಂತಿಕವೂ ಆಗಬಹುದು. ಹಾಗಾಗಿ, ಡೆಂಗ್ಯೂ ಜ್ವರದ ಸಂದರ್ಭದಲ್ಲಿ ದೇಹದಲ್ಲಿ ಪ್ಲೇಟ್ಲೇಟ್ ಸಂಖ್ಯೆಯನ್ನು ಹೆಚ್ಚಿಸುವುದು ಬಹಳ ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಯಾವುದೇ ಆರೋಗ್ಯ ಸಮಸ್ಯೆಗಳಿದ್ದಾಗ ಔಷಧಿಗಳನ್ನು ತೆಗೆದುಕೊಳ್ಳುವುದು ಅತೀ ಅಗತ್ಯ. ನಿಮ್ಮ ದೈನಂದಿನ ಆಹಾರದಲ್ಲಿ ವಿಶೇಷ ಕಾಳಜಿ ವಹಿಸುವುದರಿಂದಲೂ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಲು ನೆರವಾಗುತ್ತದೆ. ಅಂತೆಯೇ, ಡೆಂಗ್ಯೂ ಜ್ವರದ ಸಂದರ್ಭದಲ್ಲಿ ನಿಮ್ಮ ಡಯಟ್ನಲ್ಲಿ ಕೆಲವು ತರಕಾರಿಗಳನ್ನು ಸೇರಿಸುವುದರಿಂದ ಪ್ಲೇಟ್ಲೆಟ್ ಕೌಂಟ್ ಸುಧಾರಿಸಬಹುದು ಎಂದು ಹೇಳಲಾಗುತ್ತದೆ.
ಡೆಂಗ್ಯೂ ಜ್ವರದ ಸಂದರ್ಭದಲ್ಲಿ ಪ್ಲೇಟ್ಲೆಟ್ ಕೌಂಟ್ ಸುಧಾರಿಸಲು ನಿಮ್ಮ ಆಹಾರದಲ್ಲಿರಲಿ ಈ ತರಕಾರಿಗಳು:-
ಪಾಲಕ್ ಸೊಪ್ಪು:
ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಅದರಲ್ಲೂ ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಯತೇಚ್ಛವಾಗಿದ್ದು ಇದು ಆರೋಗ್ಯಕರ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್ಲೆಟ್ ರಚನೆಗೆ ಪ್ರಯೋಜನಕಾರಿ ಆಗಿದೆ. ಹಾಗಾಗಿ, ಡೆಂಗ್ಯೂ ಸಮಸ್ಯೆ ಇದ್ದಾಗ ತಪ್ಪದೆ ಪಾಲಕ್ ಸೊಪ್ಪನ್ನು ನಿಮ್ಮ ಆಹಾರದ ಭಾಗವಾಗಿಸಿ.
ಇದನ್ನೂ ಓದಿ- ತೂಕ ಕಳೆದುಕೊಳ್ಳಲು ಮಾತ್ರವಲ್ಲ ಹೊಟ್ಟೆ ಕೂಡಾ ಚಪ್ಪಟೆಯಾಗಿಸುತ್ತದೆ ಈ ಸೊಪ್ಪು
ಬೀಟ್ರೂಟ್:
ಎಲ್ಲಾ ರುತುಮಾನದಲ್ಲಿಯೂ ಬಹಳ ಸುಲಭವಾಗಿ ಲಭ್ಯವಿರುವ ತರಕಾರಿ ಎಂದರೆ ಬೀಟ್ರೂಟ್. ಇದರ ಸೇವನೆಯಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಮಾತ್ರವಲ್ಲ, ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿಆಕ್ಸಿಡೆಂಟ್‌ಗಳಿದ್ದು ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಿಸಲು ಕೂಡ ಇದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಕ್ಯಾರೆಟ್:
ಕ್ಯಾರೆಟ್‌ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಹೀಗಾಗಿ ಕ್ಯಾರೆಟ್ ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ ಆಗಿದೆ. ಆದ್ದರಿಂದ ಡೆಂಗ್ಯೂ ರೋಗಿಗಗಳಿಗೆ ಕ್ಯಾರೆಟ್ ತಿನ್ನುವಂತೆ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ- ಬೊಜ್ಜು ಸಮಸ್ಯೆ : ಬೆಳಗೆದ್ದು ಬಾಳೆಹಣ್ಣನ್ನು ಇದರ ಜೊತೆ ತಿಂದ್ರೆ ವಾರದಲ್ಲೇ ಇಳಿಯುತ್ತೆ ಅಧಿಕ ತೂಕ!
ಬ್ರೊಕೊಲಿ:
ಬ್ರೊಕೊಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಕೆ ಕಂಡು ಬರುತ್ತದೆ. ಇದು ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವಲ್ಲಿ ಪ್ರಯೋಜನಕಾರಿ ಆಗಿದೆ. ಹಾಗಾಗಿ, ಯಾವುದೇ ರೀತಿಯ ಜ್ವರದಿಂದ ಬಳಲುತ್ತಿರುವವರಿಗೆ ಬ್ರೊಕೊಲಿ ಉತ್ತಮ ತರಕಾರಿ ಎಂದು ಪರಿಗಣಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.