ವಿದೇಶಗಳಿಗೂ Corona Vaccine ನೀಡಲು ನಿರ್ಧಾರ !
ಭಾರತದ ಜನಸಂಖ್ಯೆ 136 ಕೋಟಿ ಮೀರಿದೆ. ದೇಶದಲ್ಲೇ ಲಸಿಕೆಯ ಅಭಾವ ಇದೆ. ಆದರೂ ವಿದೇಶಗಳಿಗೆ ಕೋವಿಡ್ ಲಸಿಕೆಗಳನ್ನು ನೀಡುವ ಜರೂರತ್ತು ಏನಿದೆ ಎಂಬ ಪ್ರಶ್ನೆಯ ನಡುವೆಯೂ ಗುಡವಿಲ್ ಗೆಸ್ಚರ್ ದೃಷ್ಟಿಯಿಂದ ವಿದೇಶಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.
ನವದೆಹಲಿ : ಜಗತ್ತಿನ ಅನೇಕ ರಾಷ್ಡ್ರಗಳು ಈಗಾಗಲೇ ಕೋವಿಡ್-19 ಲಸಿಕೆ (Covid -19 Vaccine) ವಿತರಿಸುತ್ತಿದ್ದು ನಿನ್ನೆಯಿಂದ ದೇಶದಲ್ಲೂ ಮೊದಲ ಹಂತದ ಲಸಿಕೆ ಅಭಿಯಾನ ಆರಂಭವಾಗಲಿದೆ. ಅದೂ ಅಲ್ಲದೆ ಈಗ ವಿದೇಶಗಳಿಗೂ ಕೊರೋನಾ ವ್ಯಾಕ್ಸಿನ್ (Corona Vaccine) ನೀಡಲು ಆಲೋಚನೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.
ಭಾರತದ ಜನಸಂಖ್ಯೆ 136 ಕೋಟಿ ಮೀರಿದೆ. ದೇಶದಲ್ಲೇ ಲಸಿಕೆಯ ಅಭಾವ ಇದೆ. ಆದರೂ ವಿದೇಶಗಳಿಗೆ ಕೋವಿಡ್ ಲಸಿಕೆಗಳನ್ನು (Covid Vaccine) ನೀಡುವ ಜರೂರತ್ತು ಏನಿದೆ ಎಂಬ ಪ್ರಶ್ನೆಯ ನಡುವೆಯೂ ಗುಡವಿಲ್ ಗೆಸ್ಚರ್ (Good Gestures) ದೃಷ್ಟಿಯಿಂದ ವಿದೇಶಗಳಿಗೆ ವ್ಯಾಕ್ಸಿನ್ ನೀಡಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಭಾರತದಲ್ಲಿ ಮೊದಲ ಹಂತದ ಲಸಿಕೆ ಅಭಿಯಾನ ಮುಗಿದ ಬಳಿಕ ಜನವರಿ 22ರ ನಂತರದಲ್ಲಿ ಬೇರೆ ದೇಶಗಳಿಗೆ ಲಸಿಕೆ ನೀಡಲು ನಿಶ್ಚಯಿಸಲಾಗಿದೆ. ಒಟ್ಟು 8.1 ಲಕ್ಷ ಕೊರೋನಾ ವ್ಯಾಕ್ಸಿನ್ ನೀಡಲು ನಿರ್ಧಾರ ಮಾಡಲಾಗಿದೆ ಮತ್ತು ಈ ಬಗ್ಗೆ ಈಗಾಗಲೇ ವಿದೇಶಾಂಗ ಇಲಾಖೆಯು ಇಂಡಿಯನ್ ಕೌನ್ಸಿಲ್ ಆಪ್ ಮೆಡಿಕಲ್ ರಿಸರ್ಚ್ (Indian Council Of Medical Research) ಸಹಯೋಗದೊಂದಿಗೆ ಲಸಿಕೆ ಅಭಿವೃದ್ಧಿ ಪಡಿಸಿರುವ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (Bharath Biotech International Limited) ಸಂಸ್ಥೆಗೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ - Corona Vaccine ಪಡೆದ ಬಳಿಕ ಹಲವರಲ್ಲಿ ಅಡ್ಡಪರಿಣಾಮ, ಇಲ್ಲಿದೆ ಸಂಪೂರ್ಣ ವಿವರ
ದೇಶಾದ್ಯಂತ ಒಟ್ಟು 3,006 ಲಸಿಕಾ ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಕೇಂದ್ರಗಳ ಜೊತೆ ಆನ್‌ಲೈನ್ ಮೂಲಕ ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ ಪ್ರತಿ ದಿನ ಸಮಾರು 100 ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಆಸ್ಟ್ರಾ ಜೆನೆಕಾ (Astrazeneca) ಮತ್ತು ಆಕ್ಸ್‌ಫರ್ಡ್ ಯುನಿವರ್ಸಿಟಿ (Oxford University) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಹಾಗೂ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute Of India) ಪ್ರಯೋಗ ನಡೆಸುತ್ತಿರುವ ಕೋವಿಶೀಲ್ಡ್ (Covishield) ಹಾಗೂ ಹೈದರಾಬಾದ್‌ನ ಭಾರತ್ ಬಯೊಟೆಕ್ (Bharath Biotech) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (Indian Council Of Medical Research) ಅಭಿವೃದ್ಧಿ ಪಡಿಸಿರುವ (CoVaccine) ಲಸಿಕೆಗಳನ್ನು ವಿತರಿಸಲಾಗುತ್ತದೆ.
ದೇಶದಲ್ಲಿ ವಿತರಣೆ ಮಾಡಲು ಮೊದಲ ಹಂತದಲ್ಲಿ ಒಟ್ಟು 1.65 ಕೋಟಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್‌ಗಳನ್ನು ಖರೀದಿಸಲಾಗಿದೆ. ಮೊದಲಿಗೆ ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರತರಾಗಿರುವ ಸಿಬ್ಬಂದಿಗೆ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ (Corona Warriors) ಗಳಿಗೆ ನೀಡಲಾಗುತ್ತದೆ. ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರತರಾಗಿರುವ ಸಿಬ್ಬಂದಿಗೆ ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ - Corona Vaccine: ಗರ್ಭವತಿ ಹಾಗೂ ಹಾಲುಣಿಸುವ ತಾಯಂದಿರರಿಗೆ ಲಸಿಕೆ ಬೇಡ: ಸರ್ಕಾರ
ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು, 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಇದಾದಮೇಲೆ 50 ವರ್ಷ ದಾಟಿದವರಿಗೆ ನೀಡಲಾಗುತ್ತದೆ. ಆನಂತರ, 50 ವರ್ಷದೊಳಗಿನ ಇತರ ಕಾಯಿಲೆಗಳಿರುವವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರವು 'ಗರಿಷ್ಠ 10 ದಿನಗಳ ಒಳಗೆ ಮೊದಲ ಹಂತದ ಅಭಿಯಾನವನ್ನು ಪೂರ್ಣಗೊಳಿಸಬೇಕು. ಪ್ರತಿ ದಿನ ಸರಾಸರಿ 100 ಮಂದಿಗೆ ಲಸಿಕೆ ಹಾಕಬೇಕು. ಶೇಕಡಾ 10ರಷ್ಟು ಲಸಿಕೆಗಳನ್ನು ಮೀಸಲು ಡೋಸ್‌ಗಳೆಂದು ಸಂಗ್ರಹಿಸಿಡಬೇಕು. ನಿಗದಿಗಿಂತ ಹೆಚ್ಚು ಜನರಿಗೆ ಲಸಿಕೆ ಹಾಕಲು ಮುಂದಾಗಬಾರದು. ಲಸಿಕೆ ನೀಡಿಕೆ ಪ್ರಕ್ರಿಯೆ ಸರಾಗವಾಗುತ್ತಿದ್ದಂತೆ ಕ್ರಮೇಣ ಲಸಿಕೆ ನೀಡಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು' ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.