Insulin:ಈ ಇನ್ಸುಲಿನ್ ಇಂಜೆಕ್ಷನ್ ಅನ್ನು ನೀವು ಫ್ರಿಡ್ಜ್ ನಲ್ಲಿ Insulin:ಈ ಇನ್ಸುಲಿನ್ ಇಂಜೆಕ್ಷನ್ ಅನ್ನು ನೀವು ಫ್ರಿಡ್ಜ್ ನಲ್ಲಿ ಇಡಬೇಕಾಗಿಲ್ಲ
Fridge Free Insulin - ಇದರಿಂದ ಮಧುಮೇಹಿ ರೋಗಿಗಳಿಗೆ ಪ್ರಯಾಣದ ವೇಳೆ ಈ ಇನ್ಸುಲಿನ್ ಅನ್ನು ಸಾಗಿಸುವುದು ಸುಲಭವಾಗಲಿದೆ. ಈ ಇನ್ಸುಲಿನ್ ಥರ್ಮೋಸ್ಟೇಬಲ್ ಆಗಿರಲಿದ್ದು, ಇದನ್ನು ನೀವು ಫ್ರಿಜ್ ನಲ್ಲಿ ಇಡಬೇಕಾಗಿಲ್ಲ.
ನವದೆಹಲಿ: Thermostable Insulin - ಮಧುಮೇಹ ರೋಗಿಗಳು (Diabetes) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಇದಕ್ಕಾಗಿ, ರೋಗಿಗಳು ಔಷಧಿಗಳನ್ನು ಮತ್ತು ಕೆಲವೊಮ್ಮೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ.ಹೀಗಿರುವಾಗ ಅವರು ಎಲ್ಲಿಗಾದರೂ ಪ್ರಯಾಣಿಸಬೇಕಾದಾಗ, ಇನ್ಸುಲಿನ್ ಅನ್ನು ಸಾಗಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ಏಕೆಂದರೆ ಇದಕ್ಕೆ ತಣ್ಣನೆಯ ತಾಪಮಾನ (Fridge Free Insulin) ಬೇಕಾಗುತ್ತದೆ.
ದೀರ್ಘ ಕಾಲದ ಪ್ರಯಾಣ ಬೆಳೆಸುವಾಗ ಡಯಾಬಿಟಸ್ ರೋಗಿಗಳಿಗೆ ಆಗುವ ಈ ಅನಾನುಕೂಳತೆಯನ್ನು ನಿವಾರಿಸಲು ಇನ್ಸುಲಿನ್ ವೊಂದನ್ನು ಅಭಿವೃದ್ಧಿಗೊಳಿಸಿದ್ದು. ಈ ಇನ್ಸುಲಿನ್ ಅನ್ನು ನೀವು ಫ್ರಿಜ್ ನಲ್ಲಿರಿಸಬೇಕಾದ ಅವಶ್ಯಕೆ ಇರುವುದಿಲ್ಲ.
ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಇದಕ್ಕಾಗಿ, ರೋಗಿಗಳು ಔಷಧಿಗಳನ್ನು ಮತ್ತು ಕೆಲವೊಮ್ಮೆ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ. ಹೀಗಿರುವಾಗ ಅವರು ಎಲ್ಲಿಗಾದರೂ ಪ್ರಯಾಣ ಬೆಳೆಸಬೇಕು ಎಂದಾದಾಗ, ಇನ್ಸುಲಿನ್ ಅನ್ನು ಸಾಗಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ ಏಕೆಂದರೆ ತಣ್ಣನೆಯ ತಣ್ಣನೆಯ ತಾಪಮಾನ ಬೇಕಾಗುತ್ತದೆ.
ದೀರ್ಘ ಪ್ರಯಾಣದಲ್ಲಿ ಇನ್ಸುಲಿನ್ ತೆಗೆದುಕೊಳ್ಳುವ ಈ ಕಷ್ಟವನ್ನು ಹೋಗಲಾಡಿಸಲು, ವಿಜ್ಞಾನಿಗಳು ಅಂತಹ ಇನ್ಸುಲಿನ್ (Insulin Injection) ಅನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಫ್ರಿಜ್ ನಲ್ಲಿ ಇಡಬೇಕಾದ ಅವಶ್ಯಕತೆ ಇಲ್ಲ.
ರೂಮ್ ಟೆಂಪ್ರೆಚರ್ ನಲ್ಲಿಯೂ ಸುರಕ್ಷಿತವಾಗಿರಲಿದೆ ಈ ಔಷಧಿ
ಮಧುಮೇಹಿ ರೋಗಿಗಳು ಪ್ರಯಾಣಿಸುವಾಗ ಇದನ್ನೂ ಕೊಂಡೊಯ್ಯುವುದು ಸುಲಭವಾಗಲಿದೆ. ಈ ಇನ್ಸುಲಿನ್ ಥರ್ಮೋಸ್ಟೇಬಲ್ ಆಗಿರುತ್ತದೆ (ಕೋಣೆಯ ಉಷ್ಣಾಂಶದಲ್ಲಿ ಸುರಕ್ಷಿತ). ಇದನ್ನು ಕೋಲ್ಕತ್ತಾದ ಬೋಸ್ ಇನ್ಸ್ಟಿಟ್ಯೂಟ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (IICB) ಯ ಇಬ್ಬರು ವಿಜ್ಞಾನಿಗಳು ಮತ್ತು ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (IICT) ಯ ಇಬ್ಬರು ವಿಜ್ಞಾನಿಗಳು ತಯಾರಿಸಿದ್ದಾರೆ.
ಬೋಸ್ ಸಂಸ್ಥೆಯ ಶುಭ್ರಂಗ್ಸು ಚಟರ್ಜಿ ಮತ್ತು ಐಐಸಿಬಿ ವಿಜ್ಞಾನಿಗಳಾದ ಪಾರ್ಥ ಚಕ್ರವರ್ತಿ, ಐಐಸಿಟಿಯ ಬಿ ಜಗದೀಶ್ ಮತ್ತು ಜೆ ರೆಡ್ಡಿ ಇದರ ಬಗ್ಗೆ ಸಂಶೋಧನೆ ನಡೆಸಿ ಈ ಔಷಧಿಯನ್ನು ತಯಾರಿಸಿದ್ದಾರೆ.
ಫ್ರಿಡ್ಜ್ ಹೊರಗಡೆಯೂ ಇದನ್ನು ಇಡಬಹುದು
ಈ ಸಂಶೋಧನೆಯ ಕುರಿತು ಅಂತರಾಷ್ಟ್ರೀಯ ವಿಜ್ಞಾನ ಪತ್ರಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ. ಬೋಸ್ ಇನ್ಸ್ಟಿಟ್ಯೂಟ್ನ ಅಧ್ಯಾಪಕರಾದ ಶುಭ್ರಂಗ್ಸು ಚಟರ್ಜಿ ಪ್ರಕಾರ, 'ನೀವು ಈ ಇನ್ಸುಲಿನ್ ಅನ್ನು ನೀವು ನಿಮಗೆ ಬೇಕಾದಷ್ಟು ಕಾಲ ಫ್ರಿಜ್ ನಿಂದ ಹೊರಗಿಡಬಹುದು. ಇನ್ಮುಂದೆ ವಿಶ್ವಾಧ್ಯಂತ ಮಧುಮೇಹ ರೋಗಿಗಳು ತಮ್ಮೊಂದಿಗೆ ಇನ್ಸುಲಿನ್ ಸಾಗಿಸಲು ಇದರಿಂದ ಸುಲಭವಾಗಲಿದೆ' ಎಂದಿದ್ದಾರೆ.
ಇದನ್ನೂ ಓದಿ-Ginger Home Remedies : ಈ ಶೀತ ಸಮಸ್ಯೆಗಳಿಗೆ ರಾಮಬಾಣ 'ಹಸಿ ಶುಂಠಿ' : ಬಳಸುವುದು ಹೇಗೆ? ಎಂದು ಇಲ್ಲಿ ತಿಳಿಯಿರಿ
ಈ ಔಷಧಿಯ ಹೆಸರು 'ಇನ್ಸುಲಾಕ್'
ಪ್ರಸ್ತುತ ಈ ಔಷಧಿಗೆ ನಾವು 'ಇನ್ಸುಲಾಕ್' ಎಂದು ಹೆಸರಿಸಿದ್ದೇವೆ ಎಂದು ಶುಭ್ರಂಗ್ಸು ಹೇಳಿದ್ದಾರೆ. ಆಚಾರ್ಯ ಜಗದೀಶ್ ಚಂದ್ರ ಬೋಸ್ ಅವರ ಹೆಸರನ್ನು ಇಡಲು ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ (ಡಿಎಸ್‌ಟಿ) ಶೀಘ್ರದಲ್ಲೇ ಮನವಿ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Morning walk : ಬೆಳಗಿನ ವಾಕಿಂಗ್ ನಲ್ಲಿ ನೀವು ಈ ತಪ್ಪು ಮಾಡುತ್ತೀರಾ? ಹಾಗಿದ್ರೆ, ನಿಮಗೆ ಈ ಸಮಸ್ಯೆ ತಪ್ಪಿದಲ್ಲ!
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ಸುಲಿನ್ ಅನ್ನು ಕನಿಷ್ಠ 4 ಡಿಗ್ರಿ ತಾಪಮಾನದಲ್ಲಿ ಇಡಬೇಕು, ಆದರೆ ಹೊಸ ಇನ್ಸುಲಿನ್ 65 ಡಿಗ್ರಿಗಳಲ್ಲೂ ಸುರಕ್ಷಿತವಾಗಿರುತ್ತದೆ. 4 ವರ್ಷಗಳ ಸಂಶೋಧನೆಯ ನಂತರ ಸಂಶೋಧಕರು ಇದನ್ನು ಸಿದ್ಧಪಡಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Side Effects Of Paneer :ಈ ಸಮಸ್ಯೆಗಳಿರುವವರು ಪನ್ನೀರ್ ತಿನ್ನುವುದನ್ನು ತಕ್ಷಣ ನಿಲ್ಲಿಸಬೇಕು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.