ನವದೆಹಲಿ: Health Insurance: ಮುಂಬರುವ ದಿನಗಳಲ್ಲಿ ಯಾವುದೇ ವಿಮಾ ಕಂಪನಿಗಳು ಯಾವುದೇ ರೀತಿಯ ಕಾಯಿಲೆಗಳಿಗೆ ಕ್ಲೇಮ್ ನೀಡುವುದನ್ನು ನಿರಾಕರಿಸುವಂತಿಲ್ಲ. ಏಕೆಂದರೆ ವಿಮಾ ನಿಯಂತ್ರಕ IRDAI (Insurance Regulatory and Development Authority) ಈ ಕುರಿತು ಎಲ್ಲಾ ವಿಮಾ ಕಂಪನಿಗಳಿಗೆ ಸೂಚನೆ ನೀಡಿದ್ದು, ಯಾರೊಬ್ಬರಿಗೂ ಕೂಡ ಪಾಲಸಿ ನೀಡಲು ವಿಮಾ ಕಂಪನಿಗಳು ನಿರಾಕರಿಸುವಂತಿಲ್ಲ. ಕಾಯಿಲೆ ಜನ್ಮಜಾತವಾಗಿದ್ದರೂ ಪರವಾಗಿಲ್ಲ ಎಂದು ಅದು ತನ್ನ ಸೂಚನೆಯಲ್ಲಿ ಸ್ಪಷ್ಟಪಡಿಸಿದೆ.


COMMERCIAL BREAK
SCROLL TO CONTINUE READING

ಯಾರೊಬ್ಬರಿಗೆ ಜನ್ಮಜಾತ ಕಾಯಿಲೆ (Genetic Illness) ಇದ್ದರೂ ಕೂಡ ಸಿಗಲಿದೆ ಕ್ಲೇಮ್
ಈ ಕುರಿತು ರಾಷ್ತ್ರೀಯ ಇನ್ಸೂರೆನ್ಸ್ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿರುವ IRDAI ಛೇರ್ಮನ್ ಸುಭಾಷ್ ಚಂದ್ರ ಖುಂಠಿಯಾ, ಯಾವುದೇ ಓರ್ವ ವ್ಯಕ್ತಿಗೆ ಕಾಯಿಲೆ ಜನ್ಮಜಾತವಾಗಿದ್ದರೆ ಅಥವಾ  ಆ ಕಾಯಿಲೆಗೆ ವಿಮಾ ಕಂಪನಿಗಳು ಕವರೇಜ್ ನೀಡುತ್ತಿಲ್ಲ (Insruance Claim) ಎಂದಾದರೆ, ವ್ಯಕ್ತಿಗಳ ಕೈಯಲ್ಲಿ ಇರದ ಕಾಯಿಲೆಗಳಿಗೆ ವಿಮಾ ಕಂಪನಿಗಳು ಅವರನ್ನು ಪಾಲಸಿ (Insurance Policy)ನೀಡುವುದರಿಂದ ವಂಚಿತಗೊಳಿಸಬಾರದು ಎಂದಿದ್ದಾರೆ. ಈ ವಿಷಯದಲ್ಲಿ ವಿಮಾ ಕಂಪನಿಗಳು ಗಮನ ನೀಡುವ ಅವಶ್ಯಕತೆ ಇದೆ ಎಂದು IRDAI ಹೇಳಿದೆ. ಅನಾವಶ್ಯಕ ಡೇಟಾ ಅನಾಲಾಸಿಸ್ ಮಾಡಿ ಪಾಲಸಿ ಧಾರಕರನ್ನು ಇನ್ಸುರನ್ಸ್ (Health Insurance) ನಿಂದ ದೂರವಿಡಬಾರದು ಎಂದು ಅದು ಹೇಳಿದೆ.


ವ್ಯಾಲ್ಯೂ ಆಡೆಡ್ ಸೇವೆಗಳನ್ನು ಆರಂಭಿಸಲಿವೆ ವಿಮಾ ಕಂಪನಿಗಳು
ವಿಮಾ ಕಂಪೆನಿಗಳು ತಮ್ಮ ಸೇವೆಗಳನ್ನು ಸುಧಾರಿಸಲು ಮೌಲ್ಯವರ್ಧಿತ ಸೇವೆಗಳನ್ನು ಆರಂಭಿಸಬೇಕು ಎಂದು ಅವರು ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ. ಪಾಲಿಸಿಯೊಂದಿಗೆ ಮೌಲ್ಯವರ್ಧಿತ ಸೇವೆಗಳನ್ನು ಪಡೆಯುವ ಮೂಲಕ ಗ್ರಾಹಕರು ಉತ್ತಮ ಸೌಲಭ್ಯಗಳನ್ನು ಪಡೆಯುತ್ತಾರೆ. ಪಾಲಿಸಿಯೊಂದಿಗೆ ವಿಮೆ ಮಾಡಿದ ಅಥವಾ ಗ್ರಾಹಕರ ಅನುಭವವನ್ನು ಇದು ಸುಧಾರಿಸುತ್ತದೆ ಎಂದು ಐಆರ್‌ಡಿಎಐ ಹೇಳಿದೆ.


ಹೀಗಾಗಿ ಶೀಘ್ರದಲ್ಲಿಯೇ ವಿಮಾ ಕಂಪನಿಗಳು ವಿಮಾ ಉತ್ಪನ್ನಗಳ ಜೊತೆಗೆ ಮೌಲ್ಯವರ್ಧಿತ ಸೇವೆಗಳನ್ನೂ ಕೂಡ ಜೋಡಿಸಲಿವೆ ಎಂದು ಖುಂಟಿಯಾ ಹೇಳಿದ್ದಾರೆ. ಇದರಿಂದ ಪಾಲಸಿ ಧಾರಕರಿಗೆ ಉತ್ತಮ ಸೇವೆ ಸಿಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ-Health Insurance News: ಪ್ರಿಮಿಯಂ ಪಾವತಿ ಮೇಲೆ ಶೇ. 100 ರಷ್ಟು ರಿಟರ್ನ್, ಈ ಕಂಪನಿ ನೀಡುತ್ತಿದೆ ಈ ಸೌಲಭ್ಯ


ಯಾವ ರೀತಿಯ ಮೌಲ್ಯವರ್ಧಿತ ಸೇವೆಗಳು ಸಿಗಲಿವೆ
ಇದರರ್ಥ ವಿಮಾ ಕಂಪನಿಗಳು ತಮ್ಮ ವಿಮಾ ಪಾಲಿಸಿಗಳಲ್ಲಿ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲಿವೆ. ಉದಾಹರಣೆಗೆ ಮಧುಮೇಹ ರೋಗಿಯು ಯಾವ ಆಹಾರ ಯೋಜನೆಯನ್ನು ಅಳವಡಿಸಿಕೊಳ್ಳಬೇಕು, ಯಾವುದನ್ನು ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು. ಅವರಿಗೆ ಫಿಟ್‌ನೆಸ್ ತರಬೇತುದಾರರ ಸೇವೆ ಒದಗಿಸಬೇಕು,ಅವರಿಗೆ ಹೆಲ್ತ್ ಚೆಕಪ್ ಒದಗಿಸಬೇಕು ಮತ್ತು ಕನ್ಸಲ್ ಟೆಶನ್ ಒದಗಿಸುವ ಸೇವೆಗಳು ಇದರಲ್ಲಿ ಶಾಮೀಲಾಗಿವೆ. ವಿಮಾ ನಿಯಂತ್ರಕ IRDAI ಹೇಳುವ ಹಾಗೆ ವಿಮಾ ಕಂಪನಿಗಳು ಪಾಲಸಿ ಧಾರಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದರ ಬದಲು, ಅವರನ್ನು ರೋಗಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು, ಫಿಟ್ ನೆಸ್ ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಇದರಿಂದ ಅವರನ್ನು ಆಸ್ಪತ್ರೆಗೆ ಬರುವುದನ್ನು ಹೇಗೆ ತಪ್ಪಿಸಬೇಕು ಎಂಬುದರ ಕಡೆಗೆ ಹೆಚ್ಚಿನ ಗಮನ ನೀಡುವ ಆವಶ್ಯಕತೆ ಇದೆ ಎಂದು IRDAI ಹೇಳಿದೆ.


ಇದನ್ನೂ ಓದಿ- ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover


ಕೊವಿಡ್-19ಗೆ ಪರಿಹಾರ 
ಈ ಬಗ್ಗೆ ಮಾತನಾಡಿರುವ ಖುಂಟಿಯಾ, ಇದುವರೆಗೆ ಸುಮಾರು 7136.3 ಕೋಟಿ ರೂ.ಗಳನ್ನು ಕೊವಿಡ್-19 ಪರಿಹಾರವಾಗಿ ನೀಡಲಾಗಿದೆ. ಇದರಲ್ಲಿ ಕೊರೊನಾ ಕವಚ್ ಗಳಂತಹ ಯೋಜನೆಗಳ ಪರಿಹಾರ ಸುಮಾರು 700 ಕೋಟಿ ರೂಗಳಷ್ಟಿದ್ದರೆ, ಮಹಾಮಾರಿಗೆ ಲೈಫ್ ಇನ್ಸುರೆನ್ಸ್ ಪರಿಹಾರವಾಗಿ 1242 ಕೋಟಿ ರೂ.ಗಳನ್ನೂ ನೀಡಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ- ಈ ರೀತಿಯ Insurance Plan ತೆಗೆದುಕೊಳ್ಳುವುದು ಲಾಭಕಾರಿ, ಈ ಗಂಭೀರ ಕಾಯಿಲೆಗಳಿಗೂ ಸಿಗುತ್ತೆ ಕ್ಲೇಮ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.