Health Insurance News: ಪ್ರಿಮಿಯಂ ಪಾವತಿ ಮೇಲೆ ಶೇ. 100 ರಷ್ಟು ರಿಟರ್ನ್, ಈ ಕಂಪನಿ ನೀಡುತ್ತಿದೆ ಈ ಸೌಲಭ್ಯ

Health Insurance News: ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನ ಆರೋಗ್ಯ ವಿಮಾ ಅಂಗಸಂಸ್ಥೆಯಾಗಿರುವ  ಆದಿತ್ಯ ಬಿರ್ಲಾ ಆರೋಗ್ಯ ವಿಮೆ (Aditya Birla Health Insurance) ಆರೋಗ್ಯ ವಿಮಾ ವಿಭಾಗದ ಉದ್ಯಮದಲ್ಲಿ ವಿಶೇಷ ಉಪಕ್ರಮವನ್ನು ಕೈಗೊಂಡಿದೆ. ಆರೋಗ್ಯ ವಿಮಾ ಯೋಜನೆಯ ಪ್ರೀಮಿಯಂನಲ್ಲಿ ಶೇಕಡಾ 100 ರಷ್ಟು ಲಾಭವನ್ನು ನೀಡುವುದಾಗಿ ಕಂಪನಿ ಘೋಷಿಸಿದೆ.

Written by - Nitin Tabib | Last Updated : Feb 26, 2021, 06:05 PM IST
  • ಪ್ರೀಮಿಯಂ ಮೇಲೆ ಶೇ.100ರಷ್ಟು ರಿಟರ್ನ್ ನೀಡುವ ಏಕೈಕ ಆರೋಗ್ಯ ಪಾಲಸಿ.
  • ತನ್ನ ಆಕ್ಟಿವೆ ಹೆಲ್ತ್ ಪಾಲಸಿಯ ಅಪ್ಗ್ರೇಡೆಡ್ ಆವೃತ್ತಿ ಪರಿಚಯಿಸಿದ ABHI
  • ಬನ್ನಿ ಈ ಪಾಲಸಿಯ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ.
Health Insurance News: ಪ್ರಿಮಿಯಂ ಪಾವತಿ ಮೇಲೆ ಶೇ. 100 ರಷ್ಟು ರಿಟರ್ನ್,  ಈ ಕಂಪನಿ ನೀಡುತ್ತಿದೆ ಈ ಸೌಲಭ್ಯ title=
Health Insurance Latest News

ನವದೆಹಲಿ:  Health Insurance Latest Update - ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌ನ  (Aditya Birla Capital LTD.) ಆರೋಗ್ಯ ವಿಮಾ ಅಂಗಸಂಸ್ಥೆಯಾದ ಆದಿತ್ಯ ಬಿರ್ಲಾ ಆರೋಗ್ಯ ವಿಮೆ (Aditya Birla Health Insurance) ಆರೋಗ್ಯ ವಿಮಾ ವಿಭಾಗದ ಉದ್ಯಮದಲ್ಲಿ ವಿಶೇಷ ಉಪಕ್ರಮವನ್ನು ಕೈಗೊಂಡಿದೆ. ಆರೋಗ್ಯ ವಿಮಾ ಯೋಜನೆಯ ಪ್ರೀಮಿಯಂನಲ್ಲಿ ಶೇ.100 ರಷ್ಟು ಲಾಭವನ್ನು ನೀಡುವುದಾಗಿ ಕಂಪನಿ (ABHI Heath Insurance) ಘೋಷಿಸಿದೆ. ಈ ಉತ್ಪನ್ನಕ್ಕೆ ಸಂಬಂಧಿಸಿದ ಇತರ ಕೊಡುಗೆಗಳನ್ನು ಅಪ್‌ಗ್ರೇಡ್ ಮಾಡುವುದಾಗಿ ಕಂಪನಿ ಹೇಳಿದೆ. ಆದಿತ್ಯ ಬಿರ್ಲಾ ಆರೋಗ್ಯ ವಿಮೆ ತನ್ನ ಪ್ರಮುಖ ಉತ್ಪನ್ನ ಆಕ್ಟಿವ್ ಹೆಲ್ತ್ ಅನ್ನು ಹೊಸ ಸ್ವರೂಪದಲ್ಲಿ ಪ್ರಸ್ತುತಪಡಿಸುವ ಭರವಸೆಯನ್ನು ವ್ಯಕ್ತಪಡಿಸಿದೆ. ಈ ಪ್ರಯತ್ನಗಳು ಗ್ರಾಹಕರಿಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಲಿವೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ. ಆರೋಗ್ಯ ವಿಮಾ ಯೋಜನೆಯ ಪ್ರೀಮಿಯಂನಲ್ಲಿ ಶೇ. 100ರಷ್ಟು ಲಾಭವನ್ನು ನೀಡುವ ಏಕೈಕ ವಿಮಾ ಕಂಪನಿ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಯಾವ ರೀತಿಯ ಸೌಲಭ್ಯಗಳು ಸಿಗಲಿವೆ?
ಈ ಕುರಿತು ಕಂಪನಿ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಈ ಆರೋಗ್ಯ ಪಾಲಸಿಯಲ್ಲಿ ಹಲವು ರೀತಿಯ  ಪ್ರಯೋಜನಗಳು ಲಭ್ಯ ಇವೆ ಮತ್ತು ಈ ಆರೋಗ್ಯ ವಿಮಾ ಪಾಲಸಿ (Insurance) ಹಲವು ಆರೋಗ್ಯ ಪ್ರಯೋಜನಗಳೊಂದಿಗೆ ಸಮಗ್ರ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಆಕ್ಟಿವ್ ಹೆಲ್ತ್ ಪಾಲಸಿಯ ಅಪ್‌ಗ್ರೇಡ್ ಆವೃತ್ತಿಯಾಗಿರುವ ಇದರಲ್ಲಿ ಗ್ರಾಹಕರಿಗೆ ರಿವೈಸ್ಡ್ ಹಾಗೂ ಆಶ್ವಾಸಿತ ಮೊತ್ತದ ಶೇ.100ರಷ್ಟು ಹಣವನ್ನು ರೀಲೋಡ್ ಮಾಡುವ ಸೌಲಭ್ಯ ನೀಡಲಾಗಿದೆ. ಅಂದರೆ ಗ್ರಾಹಕರಿಗೆ ಅವರ ಒಟ್ಟು ಹಣವನ್ನು ರಿವೈಸ್ ಮೂಲಕ  ಸಂಪೂರ್ಣವಾಗಿ ನೀಡಲಾಗುವುದು. ಗ್ರಾಹಕರು ಈ ಹಣವನ್ನು ಆರೋಗ್ಯ ಸಂಬಂಧಿತ ಖರ್ಚುಗಳಾದ ಔಷಧಿ, ದೈನಂದಿನ ತಪಾಸಣೆ, ದಿನದ ಆರೈಕೆ ಚಿಕಿತ್ಸೆಗಳು, ಒಪಿಡಿ ಸಂಬಂಧಿತ ವೆಚ್ಚಗಳು ಮತ್ತು ಪರ್ಯಾಯ ಚಿಕಿತ್ಸೆಗಳಿಗೆ ಬಳಸಬಹುದು. ಇದಲ್ಲದೆ  ಮುಂದಿನ ಪ್ರೀಮಿಯಂ ಪಾವತಿಗಾಗಿ ಅವರು ರಿವೈಸ್ ಹಣವನ್ನು ಬಳಸಬಹುದು.

ಇದನ್ನೂ ಓದಿ- ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover

ಪಾಲಸಿಯ ಮೊದಲನೇ ದಿನದಿಂದಲೇ ಕವರೇಜ್ ಸಿಗುತ್ತದೆ
ಆಕ್ಟಿವ್ ಹೆಲ್ತ್ ಪ್ಲಾನ್ ನಲ್ಲಿ, ಎಲ್ಲಾ ಗ್ರಾಹಕರು ಮಾನಸಿಕ ಕಾಯಿಲೆಯ ಸಮಾಲೋಚನೆ, ಅನಿಯಮಿತ ಹೋಮಿಯೋಪತಿ ಟೆಲಿ ಮೆಡಿಸಿನ್, ದೈನಂದಿನ ಉಪಚಾರ, ಆಧುನಿಕ ಹಾಗೂ ಹಳೆ ಚಿಕಿತ್ಸಾವಿಧಾನಗಳು, ಹಳೆ ಕಾಯಿಲೆಗಳಿಗೆ ಡೇ 1 ನಿಂದ ಕವರೇಜ್ ಹಾಗೂ ಇಂತಹ ಅನೇಕ ಸೌಲಭ್ಯಗಳು ಸಿಗುತ್ತವೆ. ಆಕ್ಟಿವ್ ಹೆಲ್ತ್ ಆಪ್ ಮಾಧ್ಯಮದ ಮೂಲಕ ಗ್ರಾಹಕರು ತಮ್ಮ ಆರೋಗ್ಯದ ಮೇಲೆ ನಿಗಾವಹಿಸಬಹುದು ಹಾಗೂ ತನ್ನ ಆರೋಗ್ಯ ವಿಮೆಯ ವಿವರಣೆಗಳ ಮಾಹಿತಿ ಕಲೆಹಾಕಿ ಆರೋಗ್ಯ ಕಾಳಜಿಯ ಲಾಭಗಳನ್ನು ಪಡೆಯಬಹುದು.

ಇದನ್ನೂ ಓದಿ- ಈ ರೀತಿಯ Insurance Plan ತೆಗೆದುಕೊಳ್ಳುವುದು ಲಾಭಕಾರಿ, ಈ ಗಂಭೀರ ಕಾಯಿಲೆಗಳಿಗೂ ಸಿಗುತ್ತೆ ಕ್ಲೇಮ್

ಅಪ್ಗ್ರೇಡ್ ಆಕ್ಟಿವ್ ಹೆಲ್ತ್ ಪ್ಲಾನ್ ಕುರಿತು ಇಲ್ಲಿದೆ ಮಾಹಿತಿ
- ಆರೋಗ್ಯ ವಿಮಾ ಪ್ರೀಮಿಯಂನಲ್ಲಿ ಶೇ. 100ರಷ್ಟು ರಿಟರ್ನ್ ಸಿಗುತ್ತದೆ.
- 2 ವರ್ಷಗಳವರೆಗೆ ವಿಮೆ ಮಾಡದಿದ್ದರೆ, ಖಾತರಿಪಡಿಸಿದ ಮೊತ್ತವನ್ನು ದ್ವಿಗುಣಗೊಳಿಸಲಾಗುತ್ತದೆ.
- ಮಾನಸಿಕ ಅಸ್ವಸ್ಥತೆಗೆ ಕೌನ್ಸೆಲಿಂಗ್ ವ್ಯಾಪ್ತಿ.
- ಅನಿಯಮಿತ ಹೋಮಿಯೋಪತಿ ಟೆಲಿಮೆಡಿಸಿನ್ ಅನ್ನು ಒಳಗೊಂಡಿರುತ್ತದೆ.
- ದೀರ್ಘಕಾಲದ ಕಾಯಿಲೆಗಳಾದ ಆಸ್ತಮಾ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮೊದಲ ದಿನದಿಂದ ಕವರ್ ಮಾಡಲಾಗುತ್ತದೆ.
- ಮನೆಮದ್ದುಗಳ ವೆಚ್ಚವು ಕೀಮೋಥೆರಪಿ, ಡೆಂಗ್ಯೂ, ಕೋವಿಡ್ 19 ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ.
- ವಿದೇಶದಲ್ಲಿ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಗದುರಹಿತ ಆಸ್ಪತ್ರೆಗೆ ದಾಖಲು ಸೌಲಭ್ಯ
- 3 ರಿಂದ 6 ಕೋಟಿಗಳವರೆಗೆ ನಿರ್ಮಿಸಲಾದ ಅಂತರರಾಷ್ಟ್ರೀಯ ನಗದುರಹಿತ ಚಿಕಿತ್ಸೆಯ ವ್ಯಾಪ್ತಿ ಕಲ್ಪಿಸಲಾಗಿದೆ.

ಇದನ್ನೂ ಓದಿ- ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಕೇವಲ 1300 ರೂಪಾಯಿಗಳಿಗೆ ಪಡೆಯಿರಿ Health insurance

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News