Goat Milk health benefits : ಪ್ರತಿ ವರ್ಷವೂ ಮಳೆಗಾಲದಲ್ಲಿ ಡೆಂಗ್ಯೂ ಅಪಾಯವು ಹೆಚ್ಚಾಗುತ್ತದೆ. ಸೊಳ್ಳೆಗಳ ಹಾವಳಿಯಿಂದ ಡೆಂಗ್ಯೂ ರೋಗ ಹರಡಲು ಪ್ರಾರಂಭಿಸುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ವ್ಯಕ್ತಿಯು ಸಾಯಬಹುದು.. ಅಂದಹಾಗೆ ಮೇಕೆ ಹಾಲು ಡೆಂಗ್ಯೂ ರೋಗಕ್ಕೆ ಉತ್ತಮ ಎಂದು ಹೇಳಲಾಗುತ್ತದೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಡೆಂಗ್ಯೂ ಸಂದರ್ಭದಲ್ಲಿ, ವೈದ್ಯಕೀಯ ಚಿಕಿತ್ಸೆಯ ಜೊತೆಗೆ, ಮನೆಮದ್ದುಗಳನ್ನು ಸಹ ಜನರು ಪ್ರಯತ್ನಿಸುತ್ತಾರೆ. ಇದರಿಂದ ರೋಗಿ ತ್ವರಿತವಾಗಿ ಚೇತರಿಕೆ ಕಾಣುತ್ತಾನೆ ಎನ್ನುವ ವಿಚಾರ ಅವರದ್ದು. ಅದರಂತೆ ಡೆಂಗ್ಯೂ ರೋಗಿಗೆ ವಿವಿಧ ಆಹಾರಗಳನ್ನು ತಿನ್ನಲು ಶಿಫಾರಸು ಮಾಡಲಾಗುತ್ತದೆ.. ಈ ಪೈಕಿ ಮೇಕೆ ಹಾಲನ್ನು ಕುಡಿಯಲು ಹೇಳಲಾಗುತ್ತದೆ..


ಇದನ್ನೂ ಓದಿ:ಸೊಳ್ಳೆಗಳು ನಮ್ಮನ್ನು ಕಚ್ಚಿದಾಗ ಎಷ್ಟು ರಕ್ತ ಹೀರುತ್ತವೆ ಅಂತ ನಿಮ್ಗೆ ಗೊತ್ತೆ..? ತಮಾಷೆ ಅಲ್ಲ, ಶಾಕ್‌ ಆಗ್ತೀರಾ..


ಹೌದು.. ಡೆಂಗ್ಯೂ ರೋಗಿಗಳಿಗೆ ಮೇಕೆ ಹಾಲು ಕುಡಿಯಲು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ಮೇಕೆ ಹಾಲಿನ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತದೆ. ಈ ಸಾಂಕ್ರಾಮಿಕ ರೋಗಕ್ಕೆ ಮೇಕೆ ಹಾಲು ಹೇಗೆ ಪ್ರಯೋಜನಕಾರಿ ಎಂಬುದರ ಕುರಿತು ತಜ್ಞರು ಏನ್‌ ಹೇಳುತ್ತಾರೆ ಬನ್ನಿ ತಿಳಿಯೋಣ...


ಆರೋಗ್ಯ ತಜ್ಞರ ಪ್ರಕಾರ ಮೇಕೆ ಹಾಲಿನಲ್ಲಿ ಹಲವು ರೀತಿಯ ವಿಟಮಿನ್‌ಗಳಿವೆ. ಮೇಕೆ ಹಾಲಿನಲ್ಲಿ ವಿಟಮಿನ್ ಡಿ, ವಿಟಮಿನ್ ಬಿ6, ವಿಟಮಿನ್ ಬಿ12 ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಕಾರಣದಿಂದಾಗಿ, ಮೇಕೆ ಹಾಲು ದೇಹದಲ್ಲಿ ಫೋಲಿಕ್ ಆಮ್ಲದ ಪ್ರಮಾಣವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. 


ಇದನ್ನೂ ಓದಿ: ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ ಸೂರ್ಯ ನಮಸ್ಕಾರ


ಮೇಕೆ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಗಂಭೀರ ಕಾಯಿಲೆಗಳನ್ನು ದೂರವಿಡಬಹುದು. ಆಡಿನ ಹಾಲಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಇದು ಸಹಾಯ ಮಾಡುತ್ತದೆ. ಮೇಕೆ ಹಾಲು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಅಲ್ಲದೆ, ಹೃದಯಕ್ಕೂ ಒಳ್ಳೆಯದು. 


ಡೆಂಗ್ಯೂಗೆ ಮೇಕೆ ಹಾಲು : ಮೇಕೆ ಹಾಲು ಕುಡಿದ್ರೆ ಮಾತ್ರ ಡೆಂಗ್ಯೂ ರೋಗಿ ಗುಣಮುಖನಾಗುತ್ತಾನೆ ಎಂದು ಖಡಾ ಖಂಡಿತವಾಗಿ ಹೇಳಲಾಗುವುದಿಲ್ಲ. ಅದು ತಪ್ಪು ನಂಬಿಕೆ. ಅಂತಹ ಸಂಶೋಧನೆಗಳು ಬಂದಿಲ್ಲ. ಆಡಿನ ಹಾಲು ದೇಹಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತವೆ ಎಂಬುದು ನಿಜ. ಆದರೆ, ಡೆಂಗ್ಯೂ ರೋಗಿಗಳು ವೈದ್ಯರ ಸಲಹೆ ಪಡೆದು ಮೇಕೆ ಹಾಲನ್ನು ಸೇವಿಸಲು ಮರೆಯಬೇಡಿ..


(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.