Side Effects Of Skipping Dinner : ಅನೇಕ ಜನರು ತೂಕವನ್ನು ಕಳೆದುಕೊಳ್ಳಲು ಮುಖ್ಯವಾಗಿ ಅನುಸರಿಸುವುದು ಆಹಾರ ಕ್ರಮವನ್ನು. ಆದರೆ ದೇಹ ತೂಕ ಕಳೆದುಕೊಳ್ಳುವ ಅಥವಾ ಸಣ್ಣಗಾಗುವ ಉದ್ದೇಶದಿಂದ ಆಹಾರ ಅಥವಾ ಊಟವನ್ನು ಬಿಡುವುದು ಮೂರ್ಖತನ.  ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಬೇಕಾದರೆ ಕಡಿಮೆ ತಿನ್ನಬೇಕು ಎನ್ನುವುದು ಹೆಚ್ಚಿನ ಜನರ ಯೋಚನೆ. ಇದಕ್ಕಾಗಿ ರಾತ್ರಿಯ  ಭೋಜನ ಸೇವನೆಯನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ, ಹೀಗೆ ಮಾಡುವುದು ಎಷ್ಟು ಸರಿ? ಇದು ಆರೋಗ್ಯಕರ ವಿಧಾನವೇ? ಈ ಬಗ್ಗೆ, ಆಹಾರ ತಜ್ಞ ಆಯುಷಿ ಯಾದವ್  ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ರಾತ್ರಿಯ ಊಟವನ್ನು  ಸಂಪೂರ್ಣ ತ್ಯಜಿಸುವುದು ಎಷ್ಟು ಸರಿ ? : 
ಉತ್ತಮ ಆರೋಗ್ಯ ಮತ್ತು ತೂಕ ನಷ್ಟಕ್ಕೆ, ನಾವು ಆರೋಗ್ಯಕರ ಉಪಹಾರ ಮತ್ತು ಲಘು ರಾತ್ರಿಯ ಊಟವನ್ನು ಮಾಡಬೇಕು. ಆದರೆ, ರಾತ್ರಿಯ ಊಟವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ತೂಕ  ಕಡಿಮೆಯಾಗುತ್ತದೆ ಎಂದು ನೀವು ಅಂದು ಕೊಂಡರೆ ಅದು ಸುಳ್ಳು. ಹೀಗೆ ಮಾಡುವುದರಿಂದ  ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯಿದೆ.


ಇದನ್ನೂ ಓದಿ : ಚಳಿಗಾಲದಲ್ಲಿ ಪ್ರತಿದಿನ ಈ ನೀರನ್ನು ಕುಡಿಯಿರಿ, ರೋಗಗಳು ದೂರವಾಗುತ್ತವೆ


ರಾತ್ರಿ ಊಟ ಮಾಡದಿರುವ ದುಷ್ಪರಿಣಾಮಗಳು : 
1. ರಾತ್ರಿ ಊಟ ಮಾಡದೇ ಇದ್ದರೆ, ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಕೊರತೆ ಉಂಟಾಗಬಹುದು ಮತ್ತು ಮೂಡ್ ಸ್ವಿಂಗ್ ಸಮಸ್ಯೆಯೂ ಎದುರಾಗಬಹುದು. ರಾತ್ರಿ ಏನೂ ತಿನ್ನದೇ ಹಾಗೆಯೇ ಮಲಗುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಇದು ಕಿರಿಕಿರಿಯನ್ನು ಉಂಟುಮಾಡುತ್ತದೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. 


2.  ಭೋಜನವನ್ನು ಬಿಟ್ಟು ಬಿಡುವುದರ ಎರಡನೇ ದೊಡ್ಡ ಅನಾನುಕೂಲವೆಂದರೆ ಅದು ದೇಹದ ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ, ಅಥವಾ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ. 


ಇದನ್ನೂ ಓದಿ : ಗರ್ಭಿಣಿಯಾಗಿದ್ದಾಗ ತೆಂಗಿನ ಕಾಯಿತಿಂದ್ರೆ ಸ್ಟ್ರೆಚ್ ಮಾರ್ಕ್‌ ಸಮಸ್ಯೆ ಇರಲ್ಲ..! ಹೇಗೆ ಗೊತ್ತೆ..?


3. ರಾತ್ರಿ ಊಟ ಮಾಡದಿರುವುದು ನಿಮ್ಮ ಮೆದುಳಿನ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು.  ಇದರಿಂದಾಗಿ ನೀವು ಖಿನ್ನತೆಗೆ ಒಳಗಾಗಬಹುದು. 


4.  ರಾತ್ರಿಯ ಊಟ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಭೋಜನವನ್ನು ಸ್ಕಿಪ್ ಮಾಡಿದರೆ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ದೀರ್ಘಕಾಲದವರೆಗೆ ಹೀಗೆ ಆಹಾರವನ್ನು ತ್ಯಜಿಸುತ್ತಾ ಬಂದರೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ