ನವದೆಹಲಿ : ಸಧ್ಯ ಮೊಬೈಲ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಮೊಬೈಲ್ ಹತ್ತಿರ ಇರಲೇ ಬೇಕು. ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು.


COMMERCIAL BREAK
SCROLL TO CONTINUE READING

ತಜ್ಞರ ಸಲಹೆ : 


ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು: ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಹಾಗಿದ್ದರೆ ಎಲ್ಲೆಲ್ಲಿ ಫೋನ್ ಇಟ್ಟುಕೊಳ್ಳಬಾರದು? ಇಲ್ಲಿ ಓದಿ..


ಇದನ್ನೂ ಓದಿ : ಸೊಳ್ಳೆ ಕಚ್ಚಿದ ಜಾಗಕ್ಕೆ ತಕ್ಷಣ ಈ ವಸ್ತುಗಳನ್ನು ಹಚ್ಚಿದರೆ ಸಿಗಲಿದೆ ತುರಿಕೆ, ನೋವಿನಿಂದ ಮುಕ್ತಿ


1. ಪುರುಷರಲ್ಲಿ ಅಡ್ಡ ಪರಿಣಾಮಗಳು: ವಿಶೇಷವಾಗಿ ಪುರುಷ(Men)ರು ಪ್ಯಾಂಟ್ ಅಥವಾ ಜೀನ್ಸ್ ನ ಮುಂಭಾಗದ ಜೇಬಿನಲ್ಲಿ ಸ್ಮಾರ್ಟ್ ಫೋನ್ ಅನ್ನು ಇಟ್ಟುಕೊಳ್ಳಬಾರದು. ಇದರಿಂದಾಗಿ ಅವರ ವೀರ್ಯಾಣುಗಳ ಸಂಖ್ಯೆ ಮತ್ತು ವೀರ್ಯಾಣುಗಳ ಗುಣಮಟ್ಟವು ತೀವ್ರವಾಗಿ ಕುಸಿಯುತ್ತದೆ. ಇದು ಯಾವುದೇ ಪುರುಷನ ಲೈಂಗಿಕ ಆರೋಗ್ಯವನ್ನು ಹಾಳುಮಾಡುವ ಮೂಲಕ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.


ಇದನ್ನೂ ಓದಿ : Pumpkin Flower Benefits: ಕುಂಬಳಕಾಯಿ ಮಾತ್ರವಲ್ಲ, ಅದರ ಹೂವಿನಿಂದಲೂ ಸಿಗುತ್ತೆ ಭಾರೀ ಪ್ರಯೋಜನ


2. ಪಾಕೆಟ್ ಬ್ಯಾಕ್ : ಪ್ಯಾಂಟ್ ಅಥವಾ ಜೀನ್ಸ್ ನ ತ ಹಿಂದಿನ ಜೇಬಿನಲ್ಲಿ ಸ್ಮಾರ್ಟ್ ಫೋನ್(Smartphone) ಅನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.


ಇದನ್ನೂ ಓದಿ : Thumbe Plant Benefits : ಶಿವನಿಗೆ ಶ್ರೇಷ್ಠವಾದ 'ತುಂಬೆ ಹೂ'ವಿನಲ್ಲಿದೆ ನಾನಾ ರೋಗ ವಾಸಿ ಮಾಡುವ ಶಕ್ತಿ!


3. ಶರ್ಟ್ ಪಾಕೆಟ್ : ಕೆಲವರು ತಮ್ಮ ಸ್ಮಾರ್ಟ್ ಫೋನ್ ಅನ್ನು ತಮ್ಮ ಶರ್ಟ್ ಜೇಬಿ(Shirt Pocket)ನಲ್ಲಿ ಇಟ್ಟುಕೊಳ್ಳುತ್ತಾರೆ . ಫೋನ್ ಅನ್ನು ಈ ಸ್ಥಳದಲ್ಲಿ ಇಡುವ ಮೂಲಕ ಅದರಿಂದ ಹೊರಹೊಮ್ಮುವ ಹಾನಿಕಾರಕ ವಿದ್ಯುತ್ಕಾಂತೀಯ ವಿಕಿರಣವು ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಅದರಲ್ಲೂ ಅಧಿಕ ರಕ್ತದೊತ್ತಡರೋಗಿಗಳು, ಮಧುಮೇಹಿಗಳು ಮತ್ತು 40 ವರ್ಷ ಮೇಲ್ಪಟ್ಟವರು ತಮ್ಮ ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳಬಾರದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.