ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನುವ ತಪ್ಪು ಎಂದೂ ಮಾಡಬೇಡಿ

ಖಾಲಿ ಹೊಟ್ಟೆಯಲ್ಲಿ  ಜೀರ್ಣಾಂಗ ವ್ಯವಸ್ಥೆಯು ಬಹಳ ಸೂಕ್ಷ್ಮವಾಗಿರುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ.  ನೀವು ಏನನ್ನು ಸೇವಿಸುತ್ತಿರೋ ಅದು ಹೊಟ್ಟೆಯ ಒಳ ಚರ್ಮ ಮತ್ತು ಸ್ಟಮಕ್ ಜ್ಯೂಸ್ ನೊಂದಿಗೆ ಸಂಪರ್ಕ ಹೊಂದುತ್ತದೆ.

Written by - Ranjitha R K | Last Updated : Jun 25, 2021, 02:55 PM IST
  • ಖಾಲಿ ಹೊಟ್ಟೆಯಲ್ಲಿ ಯಾವ ಆಹಾರ ಸೇವಿಸಬೇಕು ತಿಳಿದಿರಲಿ
  • ಈ ಆಹಾರ ವಸ್ತುಗಳನ್ನು ಎದ್ದ ಕೂಡಲೇ ತಿನ್ನುವುದು ತಪ್ಪು
  • ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನ ಸೇವಿಸಿದರೆ ಸಮಸ್ಯೆಗಳಿಗೆ ಆಹ್ವಾನವಿಟ್ಟಂತೆ
ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನುವ ತಪ್ಪು ಎಂದೂ ಮಾಡಬೇಡಿ title=
ಈ ಆಹಾರ ವಸ್ತುಗಳನ್ನು ಎದ್ದ ಕೂಡಲೇ ತಿನ್ನುವುದು ತಪ್ಪು (photo zee news)

ನವದೆಹಲಿ : ಕೆಲವೊಂದು ಆಹಾರ ಪದಾರ್ಥಗಳಿರುತ್ತವೆ ಅವುಗಳನ್ನು ಖಾಲಿ ಹೊಟ್ಟೆಯಲ್ಲಿ (Food to avoid in empty stomach). ಅಂದರೆ ಬೆಳಗ್ಗೆ ಎದ್ದ ತಕ್ಷಣ ಸೇವಿಸಬೇಕು ಎಂದು ಸೂಚಿಸಲಾಗುತ್ತದೆ. ಆದರೆ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಈ ಆಹಾರಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಸಮಸ್ಯೆ ತಪ್ಪಿದ್ದಲ್ಲ.  ಕೆಲವು ಆಹಾರಗಳನ್ನು ಎದ್ದ ತಕ್ಷಣ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. 

ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ತಿನ್ನಲೇಬಾರದು : 
ಖಾಲಿ ಹೊಟ್ಟೆಯಲ್ಲಿ  ಜೀರ್ಣಾಂಗ ವ್ಯವಸ್ಥೆಯು (Digestion)ಬಹಳ ಸೂಕ್ಷ್ಮವಾಗಿರುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬೇರೆ ಯಾವುದೇ ಆಹಾರಗಳಿರುವುದಿಲ್ಲ.  ನೀವು ಏನನ್ನು ಸೇವಿಸುತ್ತಿರೋ ಅದು ಹೊಟ್ಟೆಯ ಒಳ ಚರ್ಮ ಮತ್ತು ಸ್ಟಮಕ್ ಜ್ಯೂಸ್ ನೊಂದಿಗೆ ಸಂಪರ್ಕ ಹೊಂದುತ್ತದೆ. ಹಾಗಾಗಿಯೇ ಈ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬೇಡಿ.

ಇದನ್ನೂ ಓದಿ : Jeera To Increase Breast Milk: ಎದೆ ಹಾಲಿನ ಕೊರತೆ ನಿವಾರಣೆಗೆ ಸೇವಿಸಿ ಜೀರಿಗೆ ಹಾಲು

ಚಾಕೊಲೇಟ್‌ಗಳು ಮತ್ತು ಸಿಹಿತಿಂಡಿಗಳು :
ಬೆಳಿಗ್ಗೆ ಚಾಕೊಲೇಟ್ (Chocolate) ಅಥವಾ ಸಿಹಿತಿಂಡಿಗಳನ್ನು ತಿನ್ನುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸುವುದು ತಪ್ಪು ನಿರ್ಧಾರ. ಏಕೆಂದರೆ, ಈ ವಸ್ತುಗಳ ಸೇವನೆಯಿಂದ ಮೇದೋಜ್ಜೀರಕ ಗ್ರಂಥಿಯು, ದೇಹ್ಕೆ ಸಿಕ್ಕಿರುವ ಸಕ್ಕರೆಗೆ ಹೊಂದಿಕೊಳ್ಳುವಷ್ಟು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ದೇಹದ ಆಸಿಡ್ ಸಮತೋಲನ ತೊಂದರೆಗೊಳಗಾಗಬಹುದು. 

ಖಾಲಿ ಹೊಟ್ಟೆಯಲ್ಲಿ ಟೊಮೆಟೊ ತಿನ್ನುವುದು:
ಟೊಮ್ಯಾಟೋದಲ್ಲಿ (Tomato) ವಿಟಮಿನ್-ಸಿ ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತವೆ.  ಆದರೆ, ಇದು tannic acid ಸಹ ಹೊಂದಿರುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಆಸಿಡಿಟಿಯನ್ನು  (Acidity) ಹೆಚ್ಚಿಸುತ್ತದೆ. ಇಸು ಗ್ಯಾಸ್ಟ್ರಿಕ್ ಅಲ್ಸರ್ ಗೂ ಕಾರಣವಾಗಬಹುದು. 

ಇದನ್ನೂ ಓದಿ : ಈ ಐದು ಆಹಾರ ತಿಂದರೆ ನಿಮ್ಮ ಲಿವರ್ ಹೆಲ್ತಿಯಾಗಿರುತ್ತದೆ.

ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ತಿನ್ನುವುದು:
ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿಯನ್ನು (Cucumber) ಸೇವಿಸಿದಾಗ, ಅದನ್ನು ಜೀರ್ಣಿಸಿಕೊಳ್ಳಲು ಬೇಕಾಗುವಷ್ಟು ಸ್ಟಮಕ್ ಜ್ಯೂಸ್ ಇರುವುದಿಲ್ಲ. ಈ ಕಾರಣದಿಂದಾಗಿ, ಸೌತೆಕಾಯಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News