ಬೆಂಗಳೂರು : ನೀವೆಲ್ಲರೂ ಇಸ್ಬುಗೋಲಾ ಹೆಸರನ್ನು ಕೇಳಿರಬೇಕು. ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಹಿಂದಿನಿಂದಲೂ ಬಳಸಲಾಗುತ್ತದೆ. ಇಸ್ಬುಗೋಲಾದಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಅಲ್ಲದೆ, ಅತ್ಯಂತ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಕ್ಯಾಲೋರಿಗಳ ಕಾರಣದಿಂದಾಗಿ, ಇದು ಬೊಜ್ಜು ಉಂಟುಮಾಡಲು ಬಿಡುವುದಿಲ್ಲ. ಇಂದು ನಾವು ಇದನ್ನು ಸೇವಿಸುವ ಸರಿಯಾದ ವಿಧಾನವನ್ನು ತಿಳಿಸಲಿದ್ದೇವೆ. 


COMMERCIAL BREAK
SCROLL TO CONTINUE READING

ಇಸ್ಬುಗೋಲಾ ಎಂದರೇನು? : 
ಇದು ಗೋಧಿ ಸಸ್ಯದಂತೆ ಕಾಣುತ್ತದೆ. ವೈಜ್ಞಾನಿಕ ಭಾಷೆಯಲ್ಲಿ ಈ ಸಸ್ಯವನ್ನು ಸೈಲಿಯಮ್ ಹಸ್ಕ್ ಎಂದು ಕರೆಯಲಾಗುತ್ತದೆ. ಬಿಳಿ ಬಣ್ಣದ ಬೀಜಗಳು ಈ ಸಸ್ಯದ ಕೊಂಬೆಗಳಿಗೆ ಅಂಟಿಕೊಂಡಂತೆ ಇರುತ್ತದೆ. ಇದನ್ನು ಇಸ್ಬುಗೋಲಾ ಹೊಟ್ಟು ಎಂದು ಕರೆಯಲಾಗುತ್ತದೆ. ಈ ಸಿಪ್ಪೆಯು ಹೊಟ್ಟೆಯ ರೋಗಗಳಿಗೆ ರಾಮಬಾಣವೆಂದು ಹೇಳಲಾಗುತ್ತದೆ (Benefits of Isabgol).ಇಸ್ಬುಗೋಲಾ ಹೊಟ್ಟೆಯಲ್ಲಿರುವ ನೀರನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. 


ಇದನ್ನೂ ಓದಿ : ಬಾರ್ಲಿ ನೀರನ್ನು ಪ್ರತಿದಿನ ಕುಡಿದರೆ ಏನಾಗುತ್ತದೆ?


ಇಸ್ಬುಗೋಲಾವನ್ನು ಹೇಗೆ ಬಳಸುವುದು ? : 
ತ್ರಿಫಲಾ ಪಾನೀಯದೊಂದಿಗೆ  :

ಹೆಚ್ಚಿದ ದೇಹದ ತೂಕವನ್ನು ಕಡಿಮೆ ಮಾಡಲು, ತ್ರಿಫಲಾ ಮತ್ತು ಇಸ್ಬುಗೋಲಾ ಪಾನೀಯವನ್ನು ತಯಾರಿಸಿ ಕುಡಿಯಬಹುದು. ಇದಕ್ಕಾಗಿ, ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ ಇಸ್ಬುಗೋಲಾ ಮತ್ತು ಒಂದು ಚಮಚ ತ್ರಿಫಲಾ ಪುಡಿಯನ್ನು ಹಾಕಿ. ಸುಮಾರು 2 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಅದನ್ನು ಕುಡಿಯಿರಿ. ಇದು ಕರುಳನ್ನು ಶುಚಿಗೊಳಿಸುವುದರೊಂದಿಗೆ, ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. 


ಮೊಸರಿನ ಜೊತೆ ಸೇವಿಸಿ : 
ಇಸ್ಬುಗೋಲಾ  ರುಚಿಯಲ್ಲಿ ಸಪ್ಪೆಯಾಗಿರುತ್ತದೆ.  ಇದನ್ನು ತ್ರಿಫಲದೊಂದಿಗೆ ಸೇವಿಸಲು ಸಾಧ್ಯವಾಗದಿದ್ದರೆ ಮೊಸರಿನೊಂದಿಗೆ ಬಳಸಬಹುದು. ಇದಕ್ಕಾಗಿ, ಒಂದು ಬೌಲ್ ಮೊಸರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಇಸ್ಬುಗೋಲಾ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಹೊತ್ತು ಹಾಗೆಯೇ ಇಟ್ಟು ನಂತರ ಕುಡಿಯಿರಿ. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಯನ್ನು ಬಲಪಡಿಸುವ ಬ್ಯಾಕ್ಟೀರಿಯಾವನ್ನು ಬಲಪಡಿಸುತ್ತದೆ.  ಇದು ಅನಗತ್ಯ ತೂಕವನ್ನು ತಡೆಯಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಫ್ಯಾಟಿ ಲೀವರ್ ಸಮಸ್ಯೆ ಇರುವವರು ಯಾವ ರೀತಿ ತಮ್ಮ ಆರೋಗ್ಯದ ಕಾಳಜಿವಹಿಸಬೇಕು?


ನೀರಿನ ಜೊತೆ ಇಸ್ಬುಗೋಲ್ :
ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಇಸ್ಬುಗೋಲ್  ಸೇವಿಸಬಹುದು. ಇದಕ್ಕಾಗಿ, ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ 1 ಚಮಚ ಇಸ್ಬುಗೋಲ್ ಸೇರಿಸಿ. ಈ ಮಿಶ್ರಣವನ್ನು 2 ನಿಮಿಷ  ಹಾಗೆಯೇ ಬಿಟ್ಟು ನಂತರ ಸೇವಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ