Sky Fruit Health Benefits: ನೀವು ಬಹಳಷ್ಟು ಬಾದಾಮಿಯನ್ನು ಸೇವಿಸಿರಬಹುದು, ತಿನ್ನಲು ತುಂಬಾ ರುಚಿಯಾಗಿರುತ್ತದೆ ಮತ್ತು ಇದರಿಂದ ಆರೋಗ್ಯಕ್ಕೂ ಕೂಡ ಹಲವಾರು ಪ್ರಯೋಜನಗಳಿವೆ, ಆದರೆ ನೀವು ಎಂದಾದರೂ ಸಕ್ಕರೆ ಬಾದಾಮಿ ತಿಂದಿದ್ದೀರಾ? ಇದನ್ನು ಸ್ಕೈ ಫ್ರೂಟ್ ಎಂದೂ ಕೂಡ ಕರೆಯುತ್ತಾರೆ. ಇದರ ಹೆಸರು ಸಕ್ಕರೆ ಬಾದಾಮಿಯಾದರೂ ಕೂಡ ಇದು ತಿನ್ನಲು ತುಂಬಾ ಕಹಿಯಾಗಿರುತ್ತದೆ. ಸ್ಕೈ ಫ್ರೂಟ್ ಅಥವಾ ಸಕ್ಕರೆ ಬಾದಾಮಿಯನ್ನು ಅನೇಕ ಆಗ್ನೇಯ ಏಷ್ಯಾದ ದೇಶಗಳಲ್ಲಿ ಔಷಧಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಅಧಿಕ BP ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಳಸಲಾಗುತ್ತದೆ. ಈ ಹಣ್ಣುಗಳು ಮರದ ಮೇಲಿಂದ ಕೆಳಕ್ಕೆ ನೇತಾಡುತ್ತಿರುತ್ತವೆ, ಆದರೆ ಸಕ್ಕರೆ ಬಾದಾಮಿಯು ಗಗನೆತ್ತರದಲ್ಲಿ ಇರುವ ಹಣ್ಣು ಆಗಿರುವುದರಿಂದ ಇದನ್ನು ಸ್ಕೈ ಫ್ರೂಟ್ ಎಂದು ಕರೆಯಲಾಗುತ್ತದೆ, ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಸಕ್ಕರೆ ಬಾದಾಮಿ ಎಂದರೇನು?
ಸಕ್ಕರೆ ಬಾದಾಮಿಯನ್ನು ಸ್ಕೈ ಫ್ರೂಟ್ ಎಂದು ಕರೆಯಲಾಗುತ್ತದೆ, ಇದು ಮಹೋಗಾನಿ ಮರದಲ್ಲಿ ಬೆಳೆಯುವ ಹಣ್ಣು. ಇದನ್ನು ಒಡೆದ ನಂತರ ಅದರಿಂದ ಹೊರಬರುವ ಬೀಜಗಳನ್ನು ಸೇವಿಸಲಾಗುತ್ತದೆ. ಸಕ್ಕರೆ ಬಾದಾಮಿಯಲ್ಲಿ ಸಪೋನಿನ್ ಎಂಬ ಅಂಶವಿದೆ, ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.ತಜ್ಞರ ಪ್ರಕಾರ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.


ಸಕ್ಕರೆ ಬಾದಾಮಿಯಲ್ಲಿರುವ ಪೋಷಕಾಂಶಗಳು
ಸಕ್ಕರೆ ಬಾದಾಮಿಯು ವಿಟಮಿನ್‌ಗಳು, ಕೊಬ್ಬುಗಳು, ಖನಿಜಗಳು, ಫೋಲಿಕ್ ಆಮ್ಲ, ಕಾರ್ಬೋಹೈಡ್ರೇಟ್‌ಗಳು, ಆಹಾರದ ಫೈಬರ್, ಕೊಬ್ಬಿನಾಮ್ಲಗಳು, ನೈಸರ್ಗಿಕ, ಪ್ರೋಟೀನ್‌ಗಳು, ಕಿಣ್ವಗಳು ಮತ್ತು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ, ಸಕ್ಕರೆ ಬಾದಾಮಿ ರುಚಿ ಸ್ವಲ್ಪ ಕಹಿಯಾಗಿದೆ ಎಂದು ಹೇಳಲಾಗುತ್ತದೆ.


ಸಕ್ಕರೆ ಬಾದಾಮಿ ಪ್ರಯೋಜನಗಳು
>> ಬಾದಾಮಿ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
>> ನಿದ್ದೆಯ ಸಮಸ್ಯೆಯನ್ನು ಹೋಗಲಾಡಿಸಲು ಸಕ್ಕರೆ ಬಾದಾಮಿ ತುಂಬಾ ಪ್ರಯೋಜನಕಾರಿ.
>> ರಕ್ತ ಪರಿಚಲನೆ ಸುಧಾರಿಸಲು ಸ್ಕೈ ಫ್ರೂಟ್ ಅಥವಾ ಸಕ್ಕರೆ ಬಾದಾಮಿ ಸೇವಿಸಿ.
>> ಮಲಬದ್ಧತೆ ಸಮಸ್ಯೆ ಇದ್ದರೆ ಸಕ್ಕರೆ ಬಾದಾಮಿ ನೀರು ಕುಡಿಯುವುದು ಒಳ್ಳೆಯದು.
>> ಸಕ್ಕರೆ ಬಾದಾಮಿಯ ಬಳಕೆಯನ್ನು ಚರ್ಮ ರೋಗಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Curry Leaves Tea: ಕರಿಬೇವಿನ ಚಹಾ ಸೇವನೆಯಿಂದ ಆಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?


ಸಕ್ಕರೆ ಬಾದಾಮಿ ಸೇವಿಸುವುದರಿನ್ದಾಗುವ ಅನಾನುಕೂಲಗಳು
>> ಸಕ್ಕರೆ ಬಾದಾಮಿಯ ಅತಿಯಾದ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ
>> ಯಕೃತ್ತಿನ ಹಾನಿ ಇದ್ದರೆ, ಇದರ ಸೇವನೆಯನ್ನು ತಪ್ಪಿಸಬೇಕು
>> ಸಕ್ಕರೆ ಬಾದಾಮಿ ತಿಂದ ನಂತರ ನೀವು ವಾಕರಿಕೆ ಬಂದರೆ, ತಕ್ಷಣ ಅದರ ಸೇವನೆಯನ್ನು ನಿಲ್ಲಿಸಬೇಕು.
 >> ಥೈರಾಯ್ಡ್, ಲಿವರ್ ಕಾಯಿಲೆ, ಕಿಡ್ನಿ ಕಾಯಿಲೆ ಇದ್ದಲ್ಲಿ ವೈದ್ಯರ ಸಲಹೆ ಮೇರೆಗೆ ಮಾತ್ರ ಸಕ್ಕರೆ ಬಾದಾಮಿ ಸೇವಿಸಿ.


ಇದನ್ನೂ ಓದಿ-Bay Leaves: ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಈ ಎಲೆಯ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.