ಅಂಗೈ ತುರಿಕೆ ಆದರೆ ಆರ್ಥಿಕ ಲಾಭವಲ್ಲ... ಈ ರೋಗದ ಸೂಚನೆ ಅದು.!
Itching Palms meaning: ಅಂಗೈ ತುರಿಕೆ ಆದರೆ ಹಣ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಹಾಗಲ್ಲ, ಅಂಗೈ ತುರಿಕೆ ಈ ಆರೋಗ್ಯ ಸಮಸ್ಯೆಯ ಸೂಚನೆಯಾಗಿದೆ.
Itching Palms meaning: ಅಂಗೈ ತುರಿಕೆ ಆದರೆ ಹಣ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಹಾಗಲ್ಲ, ಅಂಗೈ ತುರಿಕೆ ಈ ಆರೋಗ್ಯ ಸಮಸ್ಯೆಯ ಸೂಚನೆಯಾಗಿದೆ. ನಿಮ್ಮ ಅಂಗೈ ಮತ್ತು ಪಾದಗಳಲ್ಲಿ ತುರಿಕೆ ಇದ್ದರೆ, ನೀವು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದೀರಿ ಎಂದರ್ಥ. ಇವು ಗಂಭೀರ ಕಾಯಿಲೆಯಾಗಿಯೂ ಬದಲಾಗಬಹುದು. ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಸೋರಿಯಾಸಿಸ್ ಸಹ ಚರ್ಮದ ಅಲರ್ಜಿಯಾಗಿದೆ. ಚರ್ಮದ ಮೇಲೆ ಬಿಳಿ ಚಿಪ್ಪುಗಳುಳ್ಳ ನೋವಿನಿಂದ ಕೂಡಿದ ತೇಪೆಗಳು ಕಾಣುತ್ತವೆ. ಸೋರಿಯಾಸಿಸ್ ಕೂಡ ತುಂಬಾ ತುರಿಕೆ ಬಿಡಬಹುದು. ಒಣ ತ್ವಚೆಯ ಸಮಸ್ಯೆಗಳಿಂದ ಸಹ ಅಂಗೈ ತುರಿಕೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಈ ಒಣ ಚರ್ಮದ ಸಮಸ್ಯೆಯು ತೀವ್ರವಾದರೆ ತುರಿಕೆ ಮತ್ತು ಉರಿಯುವಿಕೆಗೆ ಕಾರಣವಾಗುತ್ತದೆ.
ಇದನ್ನೂ ಓದಿ:ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ದುರ್ಬಲ ಮೂಳೆಗಳು ಕಬ್ಬಿಣದಂತಾಗುತ್ತವೆ..!
ಯಾವುದಾದರೂ ವಸ್ತುಗಳನ್ನು ಸ್ಪರ್ಶಿಸಿದಾಗ ಅಲರ್ಜಿ ಉಂಟಾಗಿದ್ದರೂ ಅಂಗೈ ತುರಿಕೆ ಬಿಡುತ್ತದೆ. ಈ ತುರಿಕೆ ತಕ್ಷಣವೇ ಹೋಗುವುದಿಲ್ಲ. ಅದನ್ನು ನೀವು ಗಮನಿಸಬೇಕು. ತುರಿಕೆ ಕಡಿಮೆಯಾಗಲು ಬಹಳ ಸಮಯ ತೆಗೆದುಕೊಳ್ಳಬಹುದು.
ಕೆಲವರಿಗೆ ಕೆಂಪು ಕಲೆಗಳೊಂದಿಗೆ ತುರಿಕೆ ಬಿಡುತ್ತದೆ. ಪೀಡಿತ ಪ್ರದೇಶದಲ್ಲಿ ತೇಪೆಗಳನ್ನು ಉಂಟುಮಾಡುತ್ತದೆ. ಚರ್ಮವು ಒಣಗುತ್ತದೆ. ಇದು ಎಕ್ಸಿಮಾ ಲಕ್ಷಣವಾಗಿದೆ.
ಕೈಕಾಲು ತುರಿಕೆ ಕೂಡ ಮಧುಮೇಹದ ಲಕ್ಷಣಗಳಾಗಿರಬಹುದು. ಮಧುಮೇಹದಿಂದ ಬಳಲುತ್ತಿರುವ ಅನೇಕ ಜನರು ಪಾದದಲ್ಲಿ ತುರಿಕೆ ಅನುಭವಿಸುತ್ತಾರೆ. ಈ ರೀತಿಯ ಸಮಸ್ಯೆಗಳಿರುವ ಜನ ಸ್ನಾನದ ನಂತರ ಪ್ರತಿ ಬಾರಿ ಮಾಯಿಶ್ಚರೈಸರ್ ಅನ್ನು ಅನ್ವಯಿಸಬೇಕು. ತೀವ್ರವಾದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: Hair Fall : ಈ ಆಹಾರಗಳೇ ಕೂದಲು ಉದುರಲು ಬಹುಮುಖ್ಯ ಕಾರಣ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.