ಬೆಂಗಳೂರು : ತಾಯಂದಿರ ದಿನವು ತಾಯಿಯ ಪ್ರೀತಿ ಮತ್ತು ವಾತ್ಸಲ್ಯವನ್ನು ಸ್ಮರಿಸುವ ಪ್ರಮುಖ ದಿನವಾಗಿದೆ. ಗರ್ಭಧರಿಸುವ ಸಮಯದಿಂದ ಮಗುವಿನ ಹುಟ್ಟಿನವರೆಗೆ ಮತ್ತು ಪೋಷಣೆಯವರೆಗೆ ತಾಯಂದಿರು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದಾಗ್ಯೂ, ಐವಿಎಫ್ ಗೆ ಒಳಗಾಗಲು ಅಥವಾ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸುವ ಅಥವಾ ತಾಯಂದಿರಾಗಲು ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ತಾಯ್ತನದ ಪ್ರಯಾಣದಲ್ಲಿ ಹಲವಾರು ತೊಡಕುಗಳನ್ನು ಅನುಭವಿಸಿದ್ದಾರೆ.  ಅವರು ಈಗಾಗಲೇ "ಸಾಮಾನ್ಯ ಮಾರ್ಗ"ದ ಮೂಲಕ ತಾಯಿಯಾಗಲು ಸಾಧ್ಯವಾಗದ ಭಾವನಾತ್ಮಕ ಸಂಕಟವನ್ನು ಅನುಭವಿಸಿದ್ದಾರೆ. ಆದರೆ ಸಮಾಜದಲ್ಲಿ ಒಂದೇ ಒಂದು ಮಾರ್ಗವನ್ನು ಮಾತ್ರ ಏಕೆ ಸೂಕ್ತವೆಂದು ಪರಿಗಣಿಸಲಾಗಿದೆ? ತಾಯಂದಿರಾಗಲು ಅಸಾಂಪ್ರದಾಯಿಕ ಮಾರ್ಗಗಳನ್ನು ಆರಿಸಿಕೊಳ್ಳುವ ಮಹಿಳೆಯರು ಅತ್ಯಂತ ಪ್ರಶಂಸನೀಯರು ಮತ್ತು ಅವರೂ ಸಹ ಈ ತಾಯಂದಿರ ದಿನವನ್ನು ಆಚರಿಸಬೇಕು. 


COMMERCIAL BREAK
SCROLL TO CONTINUE READING

ಫರ್ಟಿಲಿಟಿ ಸಮಸ್ಯೆಗಳನ್ನು ಎದುರಿಸುವ ಮಹಿಳೆಯರಿಗೆ ತಾಯ್ತನದ ಹಾದಿ ಸುಲಭವಲ್ಲ: 


ಬಂಜೆತನವು ವಿಶೇಷವಾಗಿ ಯಾವಾಗಲೂ ತಾಯಿಯಾಗಲು ಹಾತೊರೆಯುವ ಮಹಿಳೆಗೆ ಅತ್ಯಂತ ಸೂಕ್ಷ್ಮ ಸಮಸ್ಯೆಯಾಗಿದೆ. ಗರ್ಭಧಾರಣೆಯ ಪುನರಾವರ್ತಿತ ಪ್ರಯತ್ನಗಳು ಮತ್ತು ವೈಫಲ್ಯವನ್ನು ಎದುರಿಸುವುದು ಅವರ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತದೆ. ಇತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸುಲಭವಾಗಿ ಗರ್ಭಿಣಿಯಾಗುವುದನ್ನು ನೋಡಿದಾಗ ದುಃಖ ಹೆಚ್ಚಾಗುತ್ತದೆ.  ತಾಯಿಯಾಗುವ ಸಾಂಪ್ರದಾಯಿಕ ವಿಧಾನವು ಅವರಿಗೆ ಕೆಲಸ ಮಾಡುವುದಿಲ್ಲ ಎಂಬ ಅಂಶವನ್ನು ಅವರು ಮೊದಲು ಒಪ್ಪಿಕೊಳ್ಳಬೇಕು. 


ಇದನ್ನೂ ಓದಿ : Cholesterol Control Tips : ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆಯೆ? ಹಾಗಿದ್ರೆ, ಈ ಬೇಳೆಕಾಳು ಸೇವಿಸಿ!


ಐವಿಎಫ್, ಬಾಡಿಗೆ ತಾಯ್ತನ ಅಥವಾ ದತ್ತು ಸ್ವೀಕಾರದ ಮೂಲಕ ತಾಯ್ತನದ ಪ್ರಯಾಣದ ಸಮಯದಲ್ಲಿ ಮಹಿಳೆ ಬಲವಾದ ಭಾವನೆಗಳನ್ನು ಅನುಭವಿಸುತ್ತಾಳೆ. ಕೆಲವರು ಆಶಾದಾಯಕ ಭಾವನೆಯನ್ನು ಅನುಭವಿಸಬಹುದು, ಆದರೆ ಕೆಲವರು ಫಲಿತಾಂಶಗಳ ಬಗ್ಗೆ ಆತಂಕ ಮತ್ತು ಒತ್ತಡಕ್ಕೆ ಒಳಗಾಗಬಹುದು.


ತಾಯಿಯಾಗಲು ಐವಿಎಫ್ ಗೆ ಒಳಗಾಗುವುದು: 


ಐವಿಎಫ್ ನ ಪ್ರಕ್ರಿಯೆಯು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ. ಔಷಧೋಪಚಾರಗಳು ಮತ್ತು ಪರೀಕ್ಷೆಗಳನ್ನು ಒಳಗೊಂಡಿರುವ ಚಿಕಿತ್ಸಾ ಚಕ್ರಗಳಿವೆ. ಐವಿಎಫ್ ಚಕ್ರವು ಯಶಸ್ವಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ನಿರೀಕ್ಷೆ ಇದೆ. ಐವಿಎಫ್ ಒಂದು ಭಾವನಾತ್ಮಕ ರೋಲರ್ ಕೋಸ್ಟರ್ ಆಗಿದೆ ಮತ್ತು ಇದು ಒತ್ತಡದಿಂದ ಕೂಡಿರುತ್ತದೆ.  ಮಹಿಳೆಯರು ಈಗಾಗಲೇ ತಮ್ಮ ಅಥವಾ ತಮ್ಮ ಸಂಗಾತಿಯ ಫರ್ಟಿಲಿಟಿ ಹೋರಾಟಗಳನ್ನು ನಿಭಾಯಿಸುತ್ತಿದ್ದಾರೆ ಮತ್ತು ಐವಿಎಫ್ ಸುತ್ತಲಿನ ಕಳಂಕ ಮತ್ತು ಬಾಹ್ಯ ತೀರ್ಪುಗಳು ಅವರನ್ನು ಅಪ್ರಜ್ಞಾಪೂರ್ವಕವಾಗಿ ವೈಫಲ್ಯದಂತೆ ಭಾವಿಸುವಂತೆ ಮಾಡುತ್ತವೆ. ಮಹಿಳೆಯರು ಮಗುವನ್ನು ಹೆರಬೇಕೆಂಬ ಸಮಾಜದ ನಿರೀಕ್ಷೆಗಳು ಸಾಂಪ್ರದಾಯಿಕವಾಗಿ ಅವರು ಹಾಗೆ ಮಾಡಲು ವಿಫಲವಾದಾಗ ತಮ್ಮ ಸ್ತ್ರೀತ್ವವನ್ನು ಪ್ರಶ್ನಿಸುವಂತೆ ಅವರನ್ನು ಒತ್ತಾಯಿಸಲಿದೆ.


ಒಬ್ಬ ಮಹಿಳೆ ಫರ್ಟಿಲಿಟಿ ಚಿಕಿತ್ಸೆಗಳಿಗೆ ಒಳಗಾಗುತ್ತಿರುವಾಗ, ಅವಳನ್ನು ಪ್ರೀತಿಸಲು ಮತ್ತು ಸ್ವೀಕರಿಸಲು ಅವಳ ಸಂಗಾತಿ, ಪ್ರೀತಿಪಾತ್ರರು, ಸ್ನೇಹಿತರು ಮತ್ತು ಕುಟುಂಬದಿಂದ ಬೆಂಬಲದ ಅಗತ್ಯವಿದೆ.  ಒಬ್ಬನು ಅದನ್ನು ಹೇಗೆ ಸಾಧಿಸುತ್ತಾನೆ ಎಂಬುದನ್ನು ಲೆಕ್ಕಿಸದೆ, ಪ್ರತಿಯೊಬ್ಬ ತಾಯಿಯೂ ನಿಜವಾದ ತಾಯಿ ಎಂದು ನಿಜವಾಗಿಯೂ ನಂಬುವ ಜನರೊಂದಿಗೆ ತಾಯಂದಿರು ತಮ್ಮನ್ನು ಸುತ್ತುವರೆದಿರುವುದು ಅತ್ಯಗತ್ಯ.  ಅವರ ಸ್ನೇಹಿತರು ಮತ್ತು ಕುಟುಂಬ ವಲಯವು ಅರಿವು ನೀಡುವುದು , ಸಹಾನುಭೂತಿ ತೋರುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾಯಿಯಾಗಲಿರುವವರನ್ನು ಸಂತೈಸಬೇಕು.


ಟೇಕ್ ಅವೇಸ್: 


ಮತ್ತೊಂದು ಬದಿಯ ಆಶಾದಾಯಕ ಏನೆಂದರೆ ಸಮಾಜವು ವಿಕಸನಗೊಳ್ಳುತ್ತಿದೆ. ಅನೇಕ ಮಹಿಳೆಯರು, ವಿಶೇಷವಾಗಿ ಸೆಲೆಬ್ರಿಟಿಗಳು ತಮ್ಮ ಫರ್ಟಿಲಿಟಿ ಹೋರಾಟಗಳ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಅನೇಕರು ತಾಯಂದಿರಾಗಲು ಐವಿಎಫ್ ಗೆ ಒಳಗಾಗಿದ್ದಾರೆ. ಅವರ ಮಕ್ಕಳು ಸಂತೋಷ ಮತ್ತು ಆರೋಗ್ಯವಾಗಿದ್ದಾರೆ. ಈ ತಾಯಂದಿರು ತಮ್ಮ ಹೋರಾಟಗಳು ಮತ್ತು ಆತಂಕಗಳನ್ನು ನಿವಾರಿಸಿಕೊಂಡಿದ್ದಾರೆ. ಅವರ ವಿರುದ್ಧ ಎಷ್ಟೇ ಅಡೆತಡೆಗಳು ಎದುರಾದರೂ ಅವರು ತಾಯಂದಿರಾಗಿದ್ದಾರೆ. ಫರ್ಟಿಲಿಟಿ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹತ್ವಾಕಾಂಕ್ಷಿ ತಾಯಂದಿರಿಗೆ ಈ ಮಹಿಳೆಯರು ಸ್ಫೂರ್ತಿಯಾಗಿದ್ದಾರೆ. ಇದು "ಎಲ್ಲಿ ಇಚ್ಛಾಶಕ್ತಿ ಇದೆಯೋ ಅಲ್ಲಿ ಮಾರ್ಗವಿದೆ" ಎಂಬ ಸಾರಾಂಶವಾಗಿದೆ.


ಇದನ್ನೂ ಓದಿ : Dandruff Solution: ತಲೆಹಿಟ್ಟಿನ ಸಮಸ್ಯೆಯೇ..? ಇಲ್ಲಿದೆ ಶಾಶ್ವತ ಪರಿಹಾರ


ಸಂಪರ್ಕಿಸಿ : ಡಯಾನಾ ಕ್ರಾಸ್ಟ , ಚೀಫ್ ಸೈಕಲಾಜಿಕಲ್ ಕೌನ್ಸೆಲರ್, ನೋವಾ ಐವಿಎಫ್ ಫರ್ಟಿಲಿಟಿ, ಬೆಂಗಳೂರು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.