Foods For Joint Pain: ಮೊದಲೆಲ್ಲಾ ವಯಸ್ಸಾದ ಬಳಿಕ ಸಂಧಿವಾತ, ಕೀಲು ನೋವಿನಂತಹ ಸಮಸ್ಯೆಗಳು ಬಾಧಿಸುತ್ತಿದ್ದವು. ಆದರೆ, ಕಳಪೆ ಆಹಾರ ಹಾಗೂ ತಪ್ಪಾದ ಜೀವನ ಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೂ ಕೂಡ ಈ ಸಮಸ್ಯೆ ಸಾಮಾನ್ಯವಾಗಿದೆ. ಬೇರೆಲ್ಲಾ ಋತುಗಳಿಗಿಂತ ಚಳಿಗಾಲದಲ್ಲಿ ಕೀಲು ನೋವಿನ ಸಮಸ್ಯೆ ಜನರನ್ನು ಹೆಚ್ಚು ಕಾಡುತ್ತದೆ. ನೀವೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೇವಲ ಚಿಕಿತ್ಸೆ ಪಡೆದರೆ ಅಷ್ಟೇ ಸಾಲದು, ಇದಕ್ಕಾಗಿ ಉತ್ತಮ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುವುದು ಕೂಡ ಅತ್ಯಗತ್ಯ. 


COMMERCIAL BREAK
SCROLL TO CONTINUE READING

ಆಹಾರ ತಜ್ಞರ ಪ್ರಕಾರ, ನಿಮ್ಮ ನಿತ್ಯದ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಕೀಲು ನೋವಿನ ಸಮಸ್ಯೆಯನ್ನು ಬುಡದಿಂದ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಯಾವ ಆಹಾರಗಳನ್ನು ಸೇವಿಸುವುದು ಉತ್ತಮ ಎಂದು ತಿಳಿಯಿರಿ.


ಕೀಲು ನೋವಿಗೆ ಸುಲಭ ಪರಿಹಾರ ನೀಡುತ್ತವೆ ಈ ಸೂಪರ್‌ಫುಡ್‌ಗಳು:
ಬೆಳ್ಳುಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತದಿಂದ ಪರಿಹಾರ ಪಡೆಯಲು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಆದರೆ, ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿರುವ ಬೆಳ್ಳುಳ್ಳಿಯನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಕೀಲು ನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ಬೆಳ್ಳುಳ್ಳಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ನೋವು ಮತ್ತು ಊತದ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


ಇದನ್ನೂ ಓದಿ- Worst Foods For High BP: ಹೈ ಬಿಪಿ ಇರುವವರಿಗೆ ಮಾರಕವಾಗಬಹುದು ಈ ಆಹಾರಗಳು


ಸೋಯಾಬೀನ್:
ಸೋಯಾಬೀನ್ನಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನಾಮ್ಲಗಳು ಕಂಡು ಬರುತ್ತದೆ. ಉರಿಯೂತ ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುವ ಒಮೆಗಾ 3 ಕೊಬ್ಬಿನಾಮ್ಲಗಳು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.


ಶುಂಠಿ:
ಕೀಲು ನೋವು, ದುರ್ಬಲ ಮೂಳೆ ಸಮಸ್ಯೆ ಹೊಂದಿರುವವರಿಗೆ ಶುಂಠಿ ದಿವ್ಯೌಷಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ನೋವನ್ನು ನಿವಾರಿಸಲು ಸಹಾಯಕವಾಗಿವೆ. 


ಮೀನು:
ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿರುವ ಮೀನಿನ ಸೇವನೆಯು ಕೀಲು ನೋವು ನಿವಾರಣೆಗೆ ವರದಾನವಿದ್ದಂತೆ. ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.


ಇದನ್ನೂ ಓದಿ- Drinking Water After Fruits: ಹಣ್ಣುಗಳನ್ನು ತಿಂದರೆ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ


ಆಲಿವ್ ಎಣ್ಣೆ:
ಕೀಲು ನೋವಿನಿಂದ ಪರಿಹಾರ ಪಡೆಯಲು ಆಲಿವ್ ಆಯಿಲ್ ಬಹಳ ಪ್ರಯೋಜನಕಾರಿ ಆಗಿದೆ. ಆಲಿವ್ ಎಣ್ಣೆಯಲ್ಲಿರುವ ಪೋಷಕಾಂಶಗಳು ನೋವು ಮತ್ತು ಉರಿಯೂತವನ್ನು ನಿವಾರಿಸಲು ಕೆಲಸ ಮಾಡುತ್ತದೆ. ಆಲಿವ್ ಎಣ್ಣೆಯಿಂದ ಮಸಾಜ್ ಕೂಡ ಮಾಡಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.