Worst Foods For High BP: ಹೈ ಬಿಪಿ ಇರುವವರಿಗೆ ಮಾರಕವಾಗಬಹುದು ಈ ಆಹಾರಗಳು

Worst Foods For High BP: ರಕ್ತದೊತ್ತಡ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದೆ. ಇದಕ್ಕೆ ಕಾರಣಗಳು ಏನೇ ಇದ್ದರೂ ಸಹ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಪಿ ನಿಯಂತ್ರಿಸಲು ಹೈ ಬಿಪಿ ಸಮಸ್ಯೆ ಇರುವವರು ಕೆಲವು ಆಹಾರಗಳನ್ನು ಸೇವಿಸದಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ನೀವೂ ಸಹ ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದರೆ ಬಿಪಿಯನ್ನು ನಿಯಂತ್ರಿಸಲು ಯಾವ ಆಹಾರಗಳಿಂದ ದೂರ ಉಳಿಯಬೇಕು ಎಂದು ತಿಳಿಯಿರಿ.

Written by - Yashaswini V | Last Updated : Dec 16, 2022, 10:49 AM IST
  • ಉಪ್ಪು ಮಾತ್ರವಲ್ಲ, ಉಪ್ಪಿನಕಾಯಿ ಕೂಡ ಬಿಪಿ ರೋಗಿಗಳಿಗೆ ಮಾರಕ ಆಹಾರ ಪದಾರ್ಥವಾಗಿದೆ.
  • ಊಟದ ಜೊತೆಗೆ ಉಪ್ಪಿನ ಕಾಯಿ ಬಲು ರುಚಿ ಎಂಬುದರಲ್ಲಿ ಸಂದೇಹವಿಲ್ಲ.
  • ಆದರೆ, ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
Worst Foods For High BP: ಹೈ ಬಿಪಿ ಇರುವವರಿಗೆ ಮಾರಕವಾಗಬಹುದು ಈ ಆಹಾರಗಳು  title=
Worst Foods For BP

Worst Foods For High BP: ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿಯಾದ ಕರಿದ ಆಹಾರಗಳ ಸೇವನೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರು ಅದರಲ್ಲೂ ಮುಖ್ಯವಾಗಿ ಬಿಪಿ, ಶುಗರ್ ರೀತಿಯ ಸಮಸ್ಯೆ ಇರುವವರು ಇಂತಹ ಆಹಾರಗಳಿಂದ ದೂರ ಉಳಿಯುವುದು ಉತ್ತಮ. ನೀವೂ ಹೈ ಬಿಪಿ ರೋಗಿಗಳಾಗಿದ್ದರೆ ಮತ್ತು ನಿಮ್ಮ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಬಯಸಿದರೆ ಕೆಲವು ಆಹಾರಗಳಿಂದ ಅಂತಹ ಕಾಯ್ದುಕೊಳ್ಳುವುದು ಅತ್ಯಗತ್ಯ. ಹೈ ಬಿಪಿ ನಿಯಂತ್ರಿಸಬೇಕಾದರೆ ಯಾವ ಆಹಾರಗಳ ಸೇವನೆಯನ್ನು ತಪ್ಪಿಸಬೇಕು ತಿಳಿಯಿರಿ.

ನೀವೂ ಹೈ ಬಿಪಿ ರೋಗಿಯಾಗಿದ್ದರೆ ಇಂದಿನಿಂದಲೇ ಈ ಆಹಾರಗಳನ್ನು ತ್ಯಜಿಸಿ:
ಉಪ್ಪು:

ರಕ್ತದೊತ್ತಡವನ್ನು ನಿಯಂತ್ರಿಸಲು ಮೊದಲು ನಿಮ್ಮ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಇದರೊಂದಿಗೆ ಯಾವುದೇ ಆಹಾರಕ್ಕೂ ಹೆಚ್ಚುವರಿ ಉಪ್ಪಿನ ಬಳಕೆಯನ್ನು ತಪ್ಪಿಸಿ.

ಉಪ್ಪಿನಕಾಯಿ: 
ಉಪ್ಪು ಮಾತ್ರವಲ್ಲ, ಉಪ್ಪಿನಕಾಯಿ ಕೂಡ ಬಿಪಿ ರೋಗಿಗಳಿಗೆ ಮಾರಕ ಆಹಾರ ಪದಾರ್ಥವಾಗಿದೆ. ಊಟದ ಜೊತೆಗೆ ಉಪ್ಪಿನ ಕಾಯಿ ಬಲು ರುಚಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.  ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇರುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. 

ಇದನ್ನೂ ಓದಿ- ಚಳಿಗಾಲದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬೀಟ್ರೂಟ್

ಸಿಹಿ ತಿನಿಸುಗಳು:
ಕೇವಲ ಡಯಾಬಿಟಿಸ್ ಸಮಸ್ಯೆ ಇರುವವರು ಮಾತ್ರವಲ್ಲ ಹೈ ಬಿಪಿ ಸಮಸ್ಯೆ ಇರುವವರಿಗೂ ಕೂಡ ಸಿಹಿ ಒಳ್ಳೆಯದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಬೊಜ್ಜು ಹೆಚ್ಚಾಗಿ ಅದು ನಿಮ್ಮ ರಕ್ತದೊತ್ತಡದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ ಅಧಿಕ ಸಿಹಿ ಸೇವನೆಯನ್ನು ತಪ್ಪಿಸುವುದು ಸೂಕ್ತ.

ಇದನ್ನೂ ಓದಿ- ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು

ಸಂಸ್ಕರಿಸಿದ ಮಾಂಸ:
ಆರೋಗ್ಯದ ದೃಷ್ಟಿಯಿಂದ ಸಂಸ್ಕರಿಸಿದ ಮಾಂಸಾಹಾರ ಸೇವನೆ ಒಳ್ಳೆಯದಲ್ಲ. ಅದರಲ್ಲೂ ನೀವು ಬಿಪಿ ಸಮಸ್ಯೆ ಇರುವವರಾಗಿದ್ದರೆ ಅಪ್ಪಿತಪ್ಪಿಯೂ ಸಹ ಸಂಸ್ಕರಿಸಿದ ಮಾಂಸಾಹಾರದ ಸೇವನೆಯನ್ನು ತಪ್ಪಿಸಿ. ಇಲ್ಲದಿದ್ದರೆ, ಇದರಲ್ಲಿ ಸೋಡಿಯಂ ಅಧಿಕವಾಗಿರುವುದರಿಂದ ನಿಮ್ಮ ಬಿಪಿ ನಿಯಂತ್ರಣ ಕಷ್ಟವಾಗಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News