ಐರನ್ ಕೊರತೆ ಎದುರಾದಾಗ ಈ ಜ್ಯೂಸ್ ಸೇವಿಸಿ ! ಮತ್ತೆ ನಾರ್ಮಲ್ ಸ್ಥಿತಿಗೆ ಬರುತ್ತದೆ ಹಿಮೊಗ್ಲೋಬಿನ್
Best Iron Rich Drinks : ಐರನ್ ಕೊರತೆಯಾದರೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಐರನ್ ನಮ್ಮ ದೇಹದಲ್ಲಿನ ಅಂಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ.
Best Iron Rich Drinks : ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆದರೆ ಉತ್ತಮ ಆರೋಗ್ಯವನ್ನು ಕಾಪಾಡಬೇಕಾದರೆ ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ದೇಹದಲ್ಲಿ ಪೋಷಕಾಂಶಗಳ ಕೊರತೆ ಎದುರಾದರೆ ಬೇರೆ ಬೇರೆ ಕಾಯಿಲೆಗಳಿಗೆ ನಮ್ಮನ್ನು ದೂಡುತ್ತದೆ. ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಈ ಪೋಷಕಾಂಶಗಳು ದೇಹಕ್ಕೆ ಸಿಕ್ಕಿದಾಗ ಮಾತ್ರ ದೇಹದ ಎಲ್ಲಾ ಅಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ. ಕಬ್ಬಿಣದ ಅಂಶ ಅಥವಾ ಐರನ್ ದೇಹಕ್ಕೆ ಬಹಳ ಅಗತ್ಯವಿರುವ ಅಂಶವಾಗಿದೆ.
ಐರನ್ ಕೊರತೆಯಾದರೆ ಅನೇಕ ಗಂಭೀರ ಕಾಯಿಲೆಗಳನ್ನು ಉಂಟುಮಾಡುತ್ತದೆ. ಐರನ್ ನಮ್ಮ ದೇಹದಲ್ಲಿನ ಅಂಗಗಳಿಗೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತದೆ. ದೇಹದಲ್ಲಿ ಇದರ ಕೊರತೆಯಾದರೆ ಸ್ವಲ್ಪ ಕೆಲಸ ಮಾಡಿದರೂ ದಣಿವಾಗುತ್ತದೆ. ಉಸಿರಾಟದ ತೊಂದರೆ ಎದುರಾಗುತ್ತದೆ.
ಇದನ್ನೂ ಓದಿ : ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿಂದರೆ ಸಾಕು, ದಿಂಬು ಸೋಕುತ್ತಿದ್ದ ಹಾಗೆ ಜಾರುವಿರಿ ಗಾಢ ನಿದ್ದೆಗೆ ! ನಿದ್ರಾಹೀನತೆಗೆ ಇದೇ ಮದ್ದು
ಐರನ್ ಕೊರತೆಯನ್ನು ನೀಗಿಸುತ್ತದೆ ಈ ಜ್ಯೂಸ್ :
ಪಾಲಕ್ ಜ್ಯೂಸ್ :
ಪಾಲಕ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ನಮ್ಮ ದೇಹಕ್ಕೆ ಐರನ್ ಅನ್ನು ಪೂರೈಸಲು ಸಹಾಯ ಮಾಡುತ್ತದೆ. ಪಾಲಕ್ ಜ್ಯೂಸ್ ಮಾಡುವಾಗ ಅದರ ರುಚಿ ಹೆಚ್ಚಿಸಲು ಅದಕ್ಕೆ ತೆಂಗಿನಕಾಯಿ, ಎಳನೀರು, ಗೋಡಂಬಿ ಮತ್ತು ಅನಾನಸ್ ಅನ್ನು ಸೇರಿಸಬಹುದು. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಐರನ್ ಸಿಗುತ್ತದೆ.
ಬಟಾಣಿ ಪ್ರೋಟೀನ್ ಶೇಕ್: ಬಟಾಣಿ ಪ್ರೋಟೀನ್ ಶೇಕ್ ಸೇವಿಸುವುದರ ಮೂಲಕ ಕೂಡಾ ದೇಹದಲ್ಲಿನ ಐರನ್ ಕೊರತೆಯನ್ನು ನಿವಾರಿಸಬಹುದು. ಅದರಲ್ಲಿ ಐರನ್ ಪ್ರಮಾಣವು ಅಧಿಕವಾಗಿರುತ್ತದೆ. ಆದರೆ ಇದರಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಬಳಸಬಾರದು ಎನ್ನುವುದನ್ನು ಮರೆಯಬಾರದು.
ಇದನ್ನೂ ಓದಿ : ಮದುವೆಯಾದವರಿಗೆ ಈ ಡೇಂಜರಸ್ ರೋಗ ಬರುವ ಸಾಧ್ಯತೆ ತುಂಬಾ ಕಡಿಮೆ! ಅದಕ್ಕೆ ಸರಿಯಾದ ವಯಸ್ಸಿಗೆ ಮದುವೆಯಾಗಿ, ಜಬರ್ದಸ್ತಾಗಿರಿ!
ಬೀಟ್ರೂಟ್ ಜ್ಯೂಸ್ :
ಬೀಟ್ರೂಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದರಿಂದ ದೇಹದ ಐರನ್ ಕೊರತೆಯನ್ನು ನೀಗಿಸಬಹುದು. ಇದು ಐರನ್ ಜೊತೆಗೆ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಸಿ ಕೊರತೆಯನ್ನು ಕೂಡಾ ನೀಗಿಸುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.