Weight Loss: ತೂಕ ಇಳಿಕೆ, ಬೆಲ್ಲಿ ಫ್ಯಾಟ್ ಕರಗಿಸುವುದು ದೊಡ್ಡ ಚಾಲೆಂಜ್ ಆಗಿದ್ದರೂ ಸಹ ನಿಮ್ಮ ಮನೆಯಲ್ಲಿರುವ ಕೆಲವು ಅಡುಗೆ ಸಾಮಾಗ್ರಿಗಳನ್ನು ಬಳಸಿ ಸುಲಭವಾಗಿ ತೂಕ ಇಳಿಸಬಹುದು.
Weight Loss Tips: ಕೆಲವು ಆಹಾರಗಳು ಕೊಬ್ಬಿನ ನಷ್ಟದ ಜೊತೆಗೆ ಹಾರ್ಮೋನುಗಳ ಸಮತೋಲನ, ಇನ್ಸುಲಿನ್ ಸಂವೇದನೆ, ಕೊಲೆಸ್ಟ್ರಾಲ್ (LDL) ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಆಹಾರಗಳು ಬಲೂನ್ ರೀತಿ ಊದಿರುವ ಹೊಟ್ಟೆಯನ್ನು ಕರಗಿಸುವಲ್ಲಿಯೂ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಆಯುರ್ವೇದದ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಕೆಲವು ಪದಾರ್ಥಗಳು ತೂಕ ಇಳಿಕೆಗೆ, ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಆಯುರ್ವೇದದಲ್ಲಿ ಈ ಆಹಾರಗಳನ್ನು ಮೇದೋಹರ್ (ಅಂದರೆ ಕೊಬ್ಬು ಸುಡುವುದು) ಎಂದು ಉಲ್ಲೇಖಿಸಲಾಗಿದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಜೇನನ್ನು ಅತ್ಯುತ್ತಮ ಕೊಬ್ಬು ಬರ್ನರ್ ಎಂದು ಉಲ್ಲೇಖಿಸಲಾಗಿದೆ. ರುಚಿಯಲ್ಲಿ ಸಿಹಿಯಾಗಿರುವ 1 ಸ್ಪೂನ್ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಸುಲಭವಾಗಿ ಕರಗುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ಗಂಜಿ/ ಬಾರ್ಲಿ ನೀರನ್ನು ಕುಡಿಯುವುದರಿಂದ ಇದು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಕಾರಿ. ಜೊತೆಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸುಡುವ ಮೂಲಕ ಡೊಳ್ಳು ಹೊಟ್ಟೆಯನ್ನು ಚಪ್ಪಟೆಯಾಗಿಸಲು ನೆರವಾಗುತ್ತದೆ.
ಸ್ವಭಾವತಃ ನಿರ್ವಿಷಕಾರಿಯಾದ ಅರಿಶಿನವನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಲಾಭದಾಯಕ. ಅರ್ಧ ಸ್ಪೂನ್ ಅರಿಶಿನವನ್ನು ಸಮಪ್ರಮಾಣದ ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಫ್ಯಾಟ್ ಕರಗುತ್ತದೆ.
ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸುವ ನೆಲ್ಲಿಕಾಯಿಯ ಪುಡಿಯನ್ನು 1 ಸ್ಪೂನ್ ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗುತ್ತದೆ.
ದಿನಕ್ಕೆ ಒಂದೆರಡು ಬಾರಿ ಶುಂಠಿ ಟೀ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಕೆಗೂ ಸಹಕಾರವನ್ನು ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.