ನಿತ್ಯ ರಾತ್ರಿ ಸಣ್ಣ ಏಲಕ್ಕಿ ಸೇವಿಸುವುದರಿಂದ ಸಿಗುತ್ತೆ ಈ ಎಲ್ಲ ಪ್ರಯೋಜನ
ಏಲಕ್ಕಿ ತಿನ್ನುವುದರ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ವಿವರವಾಗಿ ಹೇಳುತ್ತಿದ್ದೇವೆ ...
ಬೆಂಗಳೂರು: ಏಲಕ್ಕಿ ಎಂದರೆ ಸುಗಂಧದ ನಿಧಿ. ಪ್ರತಿ ಮನೆಯ ಅಡುಗೆಮನೆಯಲ್ಲಿ ಮಸಾಲೆಯಾಗಿ ಬಳಸುವ ಸಣ್ಣ ಏಲಕ್ಕಿ ಹಲವು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಏಲಕ್ಕಿ ಸೇವನೆಯು ನಿಮಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಜನರು ಇದನ್ನು ಟೇಸ್ಟಿ ಮಸಾಲೆಗಳಾಗಿ ಮಾತ್ರ ಬಳಸುತ್ತಾರೆ ಮತ್ತು ಅದರ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿದಿರುವುದಿಲ್ಲ. ಏಲಕ್ಕಿ ತಿನ್ನುವುದರ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ವಿವರವಾಗಿ ಹೇಳುತ್ತಿದ್ದೇವೆ.
1. ಬಾಯಿಯ ದುರ್ವಾಸನೆಯನ್ನು ತೆಗೆದುಹಾಕುತ್ತದೆ:
ಸಣ್ಣ ಏಲಕ್ಕಿಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಇದು ಬಾಯಿ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ. ಹೀಗಾಗಿ ನೀವು ಎಲ್ಲಾ ಸಮಯದಲ್ಲೂ ಏಲಕ್ಕಿಯನ್ನು ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳಬಹುದು.
2. ಏಲಕ್ಕಿ ಮಲಬದ್ಧತೆಯನ್ನು ನಿವಾರಿಸುತ್ತದೆ :
ಸಣ್ಣ ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಜೊತೆಗೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ದೇಸಿ ತುಪ್ಪದ ಈ ಲಾಭ ತಿಳಿದರೆ ನೀವು ದಂಗಾಗುವಿರಿ, ಹಲವು ಆರೋಗ್ಯಕರ ಲಾಭಗಳು ಇದರಲ್ಲಿವೆ
3. ವಾಂತಿ ಸಮಸ್ಯೆಯಿಂದ ಪರಿಹಾರ :
ಕೆಲವರಿಗೆ ವಾಹನಗಳಲ್ಲಿ ದೂರ ಪ್ರಯಾಣ ಮಾಡುವ ವೇಳೆ ವಾಂತಿಯಾಗುವ ಸಮಸ್ಯೆಯಿರುತ್ತದೆ. ಈ ರೀತಿ ಸಮಸ್ಯೆ ಇರುವವರು ಪ್ರಯಾಣ ಪ್ರಾರಂಭಿಸುವ ಮೊದಲು ಏಲಕ್ಕಿಯನ್ನು ಬಾಯಿಯಲ್ಲಿ ಇರಿಸಿ. ಹೀಗೆ ಮಾದುವುದರಿಂದ ಪ್ರಯಾಣದುದ್ದಕ್ಕೂ ವಾಂತಿಯಾಗುವುದನ್ನು ತಡೆಯಬಹುದು.
4. ಗ್ಯಾಸ್ಟ್ರಿಕ್ ನಿವಾರಣೆ:
ಏಲಕ್ಕಿಯಲ್ಲಿ ಎಣ್ಣೆಯ ಅಂಶವೂ ಇದೆ ಎಂದು ಹಲವರಿಗೆ ತಿಳಿದಿಲ್ಲ. ಏಲಕ್ಕಿಯಲ್ಲಿರುವ ಸಾರಭೂತ ತೈಲವು ಹೊಟ್ಟೆಯ ಒಳ ಪದರವನ್ನು ಬಲಪಡಿಸುತ್ತದೆ. ಇದರಿಂದಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.
5. ಆಸ್ತಮಾ ರೋಗಿಗಳಿಗೆ ಪರಿಣಾಮಕಾರಿ:
ಏಲಕ್ಕಿ ಉಸಿರಾಟದ ಸಮಸ್ಯೆ ಇರುವವರಿಗೆ ಬಹಳ ಪ್ರಯೋಜನಕಾರಿ. ಏಲಕ್ಕಿ ಶರೀರವನ್ನು ಬಿಸಿಯಾಗಿಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ (Winter) ಏಲಕ್ಕಿಯನ್ನು ಬಾಯಿಯಲ್ಲಿರಿಸಿ, ಒಂದೆರಡು ಬಾರಿ ಆಗೆಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಏಲಕ್ಕಿಯನ್ನು ಆಹಾರದೊಂದಿಗೆ ಬೆರೆಸುವ ಮೂಲಕವೂ ಸೇವಿಸಬಹುದು. ಏಲಕ್ಕಿ ಶ್ವಾಸಕೋಶದ ಸಂಕೋಚನ ಮತ್ತು ಆಸ್ತಮಾ ಸಮಸ್ಯೆಯಿರುವವರಿಗೆ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ವ್ಯಾಯಾಮ ಮಾಡದೇ ದೇಹದ ತೂಕ ಇಳಿಸುವುದು ಹೇಗೆ? ಇಲ್ಲಿವೆ ಸ್ಮಾರ್ಟ್ ಟಿಪ್ಸ್
6. ತೂಕ ನಷ್ಟಕ್ಕೆ ಸಹಾಯಕ:
ತೂಕ ಮತ್ತು ಬೊಜ್ಜಿನ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಏಲಕ್ಕಿಯನ್ನು ಸೇರಿಸಿ. ಏಲಕ್ಕಿಯಲ್ಲಿರುವ ಪೋಷಕಾಂಶಗಳು ತ್ವರಿತ ತೂಕ ನಷ್ಟ (Weight Loss)ಕ್ಕೆ ಸಹಾಯ ಮಾಡುತ್ತದೆ.
7. ಒತ್ತಡ ಕಡಿಮೆಯಾಗುತ್ತದೆ:
ನೀವು ಆಗಾಗ್ಗೆ ಒತ್ತಡದಲ್ಲಿದ್ದರೆ, ಏಲಕ್ಕಿ ಸೇವನೆಯು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನೀವು ಏಕಾಂಗಿಯಾಗಿರುವಿರಿ ಮತ್ತು ಒತ್ತಡ ಹೆಚ್ಚಾಗುತ್ತಿದೆ ಎಂದು ಭಾವಿಸಿದರೆ ಎರಡು ಏಲಕ್ಕಿಯನ್ನು ಬಾಯಿಗೆ ಹಾಕಿ ಅದನ್ನು ಅಗಿಯಿರಿ. ಏಲಕ್ಕಿಯನ್ನು ಆಗಿದ ಕೂಡಲೇ ನಿಮ್ಮ ಹಾರ್ಮೋನುಗಳು ಬದಲಾಯಿಸುತ್ತದೆ. ಇದರಿಂದಾಗಿ ಒತ್ತಡ ನಿವಾರಣೆಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.