ನವದೆಹಲಿ: ಈಗ ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅಧಿಕ ಅಸ್ತಮಾ ಪ್ರಕರಣಗಳು ದಾಖಲಾಗಿರುವ ಅಂಶ ಈಗ ಸರ್ಕಾರಿ ವರದಿ ಮೂಲಕ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2017ರಲ್ಲಿ ಕರ್ನಾಟಕದಲ್ಲಿ 4,357 ತಮಿಳುನಾಡಿನಲ್ಲಿ 3,953 ಬಿಹಾರದಲ್ಲಿ 3159 ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ ಸಿಕ್ಕಿಂನಲ್ಲಿ 9 ಲಕ್ಷದ್ವೀಪದಲ್ಲಿ 14 ಪ್ರಕರಣಗಳು ದಾಖಲಾಗಿವೆ.


ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚಿಗಿನ ವರದಿಯಲ್ಲಿ ಭಾರತ ಅಸ್ತಮಾ ಪ್ರಕರಣಗಳಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.ಈ ವರದಿಯಲ್ಲಿ ಶೇ 64 ರಷ್ಟು ಪ್ರಕರಣಗಳು ಮಾತ್ರ ಅಧಿಕೃತವಾಗಿ ಬೆಳಕಿಗೆ ಬಂದಿವೆ. ಇದರಲ್ಲಿ ಭಾರತ,ಇಂಡೋನೇಶಿಯಾ, ಮತ್ತು ನೈಜಿರಿಯಾದಲ್ಲಿ ಅಧಿಕ ರೀತಿಯ ಪ್ರಕರಣಗಳು ಕಂಡು ಬಂದಿವೆ.


ಭಾರತ ಅಸ್ತಮಾ ಕಾಯಿಲೆಯನ್ನು ನಿರ್ಮೂಲನೆಗೊಳಿಸಲು 2025ಕ್ಕೆ ಡೆಡ್ ಲೈನ್ ಹಾಕಿಕೊಂಡಿದೆ.