Immunity Strong: ಕರೋನದ ಕಾಲದಲ್ಲಿ ನಿತ್ಯ ಕಷಾಯ ಕುಡಿಯುತ್ತಿದ್ದೀರಾ? ಹಾಗಿದ್ದರೆ ಹುಷಾರ್!
Immunity Strong: ಕರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀವು ನಿತ್ಯ ಕಷಾಯ ಸೇವಿಸುತ್ತಿದ್ದರೆ ಹುಷಾರಾಗಿರಿ. ಏಕೆಂದರೆ ಇದು ಅನೇಕ ರೀತಿಯ ಹಾನಿಯನ್ನುಂಟುಮಾಡುತ್ತದೆ. ಮೊದಲನೆಯದಾಗಿ, ಇದು ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Immunity Strong: ಮೊದಲೆಲ್ಲಾ ನಮ್ಮಲ್ಲಿ ಹಲವು ಮಂದಿ ಸಾಮಾನ್ಯ ಶೀತ, ನೆಗಡಿಗೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಹಾಗಾಗಿಯೇ, ಕಾರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕಷಾಯ ಸೇವನೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಪ್ರತಿ ನಿತ್ಯ ಕಷಾಯ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕಷಾಯ ಸೇವಿಸುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಕೂಡ ಬಹಳ ಮುಖ್ಯ. ಮಾಧ್ಯಮ ವರದಿಗಳ ಪ್ರಕಾರ, ದಿನನಿತ್ಯ ಕಷಾಯ ಕುಡಿಯುವುದರಿಂದ ಅದು ಮೂತ್ರಪಿಂಡ, ಯಕೃತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಹುದು. ಹಾಗಾದರೆ ಕಷಾಯ ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಯಿರಿ.
ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ:
ಪ್ರತಿದಿನ ಕಷಾಯವನ್ನು (Kashaya) ಕುಡಿಯುವುದರಿಂದ ನಮ್ಮ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಕಷಾಯವನ್ನು ಕುಡಿಯಲು ಪ್ರಾರಂಭಿಸುತ್ತಾರೆ, ಇದು ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿದಿನ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಕ್ರಿಯೇಟಿನೈನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ, ಇದು ಒಂದು ಸಮಯದಲ್ಲಿ ನಮ್ಮ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಕಷಾಯದ ಪರಿಣಾಮವು ಬಿಸಿಯಾಗಿರುತ್ತದೆ, ಇದರಿಂದಾಗಿ ಕ್ರಮೇಣ ಎದೆಯಲ್ಲಿ ನೋವು ಮತ್ತು ಎದೆಯುರಿಯಂತಹ ಸಮಸ್ಯೆಗಳೂ ಸಹ ನಿಮ್ಮನ್ನು ಕಾಡಬಹುದು. ಆದರೆ ಇವುಗಳನ್ನು ನಿರ್ಲಕ್ಷಿಸಿದರೆ ಅದು ಮೂತ್ರಪಿಂಡದ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ- ನಿತ್ಯ ದಾಳಿಂಬೆ ಸೇವಿಸಿದರೆ ಕೊಲೆಸ್ಟ್ರಾಲ್ , ಡಯಾಬಿಟೀಸ್ ನಂಥಹ ರೋಗಗಳಿಂದ ಪಡೆಯಬಹುದು ಮುಕ್ತಿ
ಯಕೃತ್ತಿನಲ್ಲಿ ವಿಷತ್ವವನ್ನು ಹೆಚ್ಚಿಸುತ್ತದೆ:
ಮೂತ್ರಪಿಂಡವನ್ನು ಹೊರತುಪಡಿಸಿ, ಹೆಚ್ಚು ಕಷಾಯವನ್ನು ಕುಡಿಯುವುದು ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ (Kashaya Side Effects) ಬೀರುತ್ತದೆ. ಹೆಚ್ಚು ಕಷಾಯವನ್ನು ಕುಡಿಯುವುದರಿಂದ ಯಕೃತ್ತು ವಿಷಕಾರಿಯಾಗಬಹುದು ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಆದ್ದರಿಂದ ನೀವು ಪ್ರತಿದಿನ ಕಷಾಯವನ್ನು ಪಾನೀಯವಾಗಿ ಬಳಸುತ್ತಿದ್ದರೆ, ಇಂದೇ ಈ ಅಭ್ಯಾಸವನ್ನು ನಿಲ್ಲಿಸಿ.
ಇದನ್ನೂ ಓದಿ- ನೆನಪಿರಲಿ, ಕೇವಲ ಮೊಟ್ಟೆಯ ಬಿಳಿ ಭಾಗವನ್ನು ತಿನ್ನುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ
ಪೈಲ್ಸ್ ರೋಗಿಗಳು ಕಷಾಯವನ್ನು ಕುಡಿಯಬಾರದು:
ಪೈಲ್ಸ್ ಇರುವವರು ಅಂದರೆ ಮೂಲವ್ಯಾದಿ ಇರುವವರು ಕಷಾಯವನ್ನು ಸೇವಿಸಬಾರದು. ಏಕೆಂದರೆ ಕಷಾಯವು ತುಂಬಾ ಬಿಸಿಯಾಗಿರುತ್ತದೆ ಮತ್ತು ನಿಮಗೆ ಹಾನಿ ಮಾಡುತ್ತದೆ. ಹಾಗಾಗಿ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಸಲಹೆ ಪಡೆದ ನಂತರವೇ ಕಷಾಯವನ್ನು ಸೇವಿಸಬೇಕು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.