ನವದೆಹಲಿ : ಮೆಂತ್ಯ ಅಥವಾ ಮೆಂತ್ಯ ಬೀಜದಲ್ಲಿ ನೀವು ನಂಬಲಾಗದಂತಹ ಆರೋಗ್ಯ ಪ್ರಯೋಜನಗಳಿವೆ. ಇದು ಉಪ್ಪಿನಕಾಯಿಗೆ ತುಂಬಾ ರುಚಿ ನೀಡುವ ಪದಾರ್ಥವಾಗಿದೆ. ಭಾರತೀಯರ ಅಡಿಗೆ ಪದಾರ್ಥಗಳಲ್ಲಿ ಒಂದಾಗಿದೆ ಮತ್ತು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ. ಇದು ರುಚಿಗೆ ಮಾತ್ರವಲ್ಲ, ಮೆಂತ್ಯವು ಔಷಧೀಯ ಗುಣಗಳನ್ನೂ ಕೂಡ ಹೊಂದಿದೆ. ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ, ಯೂರಿಕ್ ಆಸಿಡ್ ಮಟ್ಟ, ಕೂದಲು ಉದುರುವಿಕೆ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ, ರಕ್ತಹೀನತೆ ಚಿಕಿತ್ಸೆಗೆ ತುಂಬಾ ಸಹಾಯಕವಾಗಿದೆ.
ಈ ಕುರಿತು ಆಯುರ್ವೇದ ವೈದ್ಯರಾದ ಡಾ. ದೀಕ್ಷಾ ಭಾವಸರ್ ಅವರು ತಮ್ಮ ಇದನ್ನು Instagram ನಲ್ಲಿ ಮೆಂತ್ಯದ ವಿವಿಧ ಪ್ರಯೋಜನಗಳ(Fenugreek Benefits) ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಮೆಂತ್ಯಯಲ್ಲಿ ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಫೋಲಿಕ್ ಆಮ್ಲ, ವಿಟಮಿನ್ A, C, K, B, ಮ್ಯಾಂಗನೀಸ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್ ಮತ್ತು ನೀರಿನ ಅಂಶಗಳನ್ನು ಒಳಗೊಂಡಿದೆ."
ಇದನ್ನೂ ಓದಿ : ಪುಲಾವ್ ಎಲೆ: ಆರೋಗ್ಯದ ಜೊತೆಗೆ ರುಚಿಗೆ ವರದಾನ, ಹಲವು ರೋಗಗಳಿಗೆ ರಾಮಬಾಣ
“ಮೆಂತ್ಯ(Fenugreek) ಒಂದು ಆಯುರ್ವೇದ ಗಿಡ ಮೂಲಿಕೆಯಾಗಿದ್ದು, ಪ್ರತಿಯೊಬ್ಬರ ಅಡುಗೆಮನೆಯಲ್ಲಿಯೂ ವೈವಿಧ್ಯಮಯ ಆಡುಗಗೆ ಮಾಡಲು ಉಪಯೋಗಿಸಲಾಗುತ್ತದೆ. ಇದನ್ನು ಖಾದ್ಯಗಳಿಗೆ ರುಚಿ ಹೆಚ್ಚಿಸುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಣ ಮತ್ತು ಮಲಬದ್ಧತೆ ನಿವಾರಿಸುವವರೆಗೆ ಸಹಾಯಕವಾಗಿದೆ, ಮೆಂತ್ಯ ಬೀಜ ಸೇವನೆಯಿಂದ ನಿಮ್ಮ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ವೈವಿಧ್ಯಮಯ ಪ್ರಯೋಜನಗಳನ್ನು ಪಡೆಯಬಹುದು" ಎಂದು ಹೇಳಿದ್ದಾರೆ.
ಮೆಂತ್ಯದ ಪ್ರಯೋಜನಗಳು ಇಲ್ಲಿವೆ ನೋಡಿ..
ಡಾ. ದೀಕ್ಷಾ ಅವರ ಪ್ರಕಾರ, ಮೆಂತ್ಯ ಬೀಜಗಳ ಪ್ರಯೋಜನಗಳು ಇವು:
- ಇದು ಹಸಿವು ಮತ್ತು ಜೀರ್ಣ ಶಕ್ತಿಯನ್ನು ಸುಧಾರಿಸುತ್ತದೆ. ಎದೆ ಹಾಲು ಸ್ರವಿಸುವಿಕೆಯನ್ನು ಸಹ ಹೆಚ್ಚಿಸುತ್ತದೆ.
- ಇದು ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಸುಧಾರಿಸುತ್ತದೆ.
- ಇದು ಕೂದಲು ಉದುರುವಿಕೆ, ಬೂದು ಕೂದಲು ಮತ್ತು ಯೂರಿಕ್ ಆಸಿಡ್ ಮಟ್ಟವನ್ನು (ಗೌಟ್) ಕಡಿಮೆ ಮಾಡುತ್ತದೆ. ರಕ್ತದ ಮಟ್ಟವನ್ನು ಸುಧಾರಿಸುತ್ತದೆ (ರಕ್ತಹೀನತೆ ಚಿಕಿತ್ಸೆ ಸಹಾಯಕವಾಗಿದೆ) ಮತ್ತು ರಕ್ತವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
- ನರಶೂಲೆ, ಪಾರ್ಶ್ವವಾಯು, ಮಲಬದ್ಧತೆ, ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ದೇಹದ ಯಾವುದೇ ಭಾಗದಲ್ಲಿ ನೋವು (ಬೆನ್ನುನೋವು, ಮೊಣಕಾಲು ನೋವು, ಸ್ನಾಯು ಸೆಳೆತ) ಮುಂತಾದ ವಾತದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದು ಉಪಯುಕ್ತವಾಗಿದೆ.
- ಇದು ಕೆಮ್ಮು, ಆಸ್ತಮಾ, ಬ್ರಾಂಕೈಟಿಸ್, ಎದೆ ಉರಿ ಮತ್ತು ಬೊಜ್ಜು ಮುಂತಾದ ಕಫಾ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಚಳಿಗಾಲದಲ್ಲಿ ಮಕ್ಕಳನ್ನು ರೋಗಗಳಿಂದ ರಕ್ಷಿಸಲು 4 ಸಲಹೆಗಳನ್ನು ಅನುಸರಿಸಿ ಸಾಕು
ಮೆಂತ್ಯ ಬೀಜಗಳನ್ನು ಹೇಗೆ ಬಳಸುವುದು ಇಲ್ಲಿದೆ
ಮೆಂತ್ಯ ಬೀಜಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಡಾ ದೀಕ್ಷಾ ಹೀಗೆ ಹೇಳಿದ್ದಾರೆ.
- ರಾತ್ರಿಯಿಡೀ 1-2 ಚಮಚ ಬೀಜ ಮೆಂತ್ಯ ನೆನೆಸಿ ಮತ್ತು ಬೆಳಿಗ್ಗೆ ತಿನ್ನಿರಿ ಅಥವಾ ಚಹಾದಂತೆ ಕುಡಿಯಿರಿ.
- 1 ಟೀ ಸ್ಪೂನ್ ಮೆಂತ್ಯದ ಪುಡಿಯನ್ನು ದಿನಕ್ಕೆ ಎರಡು ಬಾರಿ ಊಟಕ್ಕೆ ಮೊದಲು ಅಥವಾ ರಾತ್ರಿ ಬೆಚ್ಚಗಿನ ಹಾಲಿನಲ್ಲಿ ಅಥವಾ ನೀರಿನಲ್ಲಿ ಬೆರೆಸಿ ಸೇವಿಸಿ.
- ಮೆಂತ್ಯ ಬೀಜದ ಪೇಸ್ಟ್ ಮಾಡಿ ಅದನ್ನು ಮೊಸರು / ಅಲೋವೆರಾ ಜೆಲ್ / ನೀರಿನಲ್ಲಿ ಸೇರಿಸಿ ನೆತ್ತಿಯ ಮೇಲೆ ಹಚ್ಚುವುದರಿಂದ ತಲೆಹೊಟ್ಟು, ಕೂದಲು ಉದುರುವಿಕೆ, ಬಿಳಿ ಕೂದಲು ಕಡಿಮೆಯಾಗುತ್ತದೆ.
- ಕಣ್ಣಿನ ಡಾರ್ಕ್ ಸರ್ಕಲ್‌ಗಳು, ಮೊಡವೆ, ಮೊಡವೆಗಳ ಕಲೆಗಳು ಮತ್ತು ಸುಕ್ಕು ಚರ್ಮಕ್ಕೆ ರೋಸ್‌ವಾಟರ್‌ನೊಂದಿಗೆ ತಯಾರಿಸಿದ ಮೆಂತ್ಯ ಪೇಸ್ಟ್ ಅನ್ನು ಬಳಸಿ ಪರಿಹಾರ ಪಡೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.